ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಅಂಬರೀಶ್ ಪತ್ರಿಕಾಗೋಷ್ಠಿ highlights

|
Google Oneindia Kannada News

ಮಂಡ್ಯ, ಮಾರ್ಚ್ 31 : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ. ಏಪ್ರಿಲ್ 18ರಂದು ಚುನಾವಣೆ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ ಎದುರಾಳಿಯಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ಮನೆಯಲ್ಲಿ ಭಾನುವಾರ ಸುಮಲತಾ ಅವರು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದಾರೆ. ನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ ಲೈನ್ ವೆಂಕಟೇಶ್ ಅವರು ಸುಮಲತಾ ಅವರ ಜೊತೆಯಲ್ಲಿದ್ದಾರೆ.

ಮಂಡ್ಯದಲ್ಲಿ ಕಹಳೆ ಊದಿದ ಸುಮಲತಾಗೆ ಬಿಜೆಪಿ, ಕಾಂಗ್ರೆಸ್ ಜೈಕಾರಮಂಡ್ಯದಲ್ಲಿ ಕಹಳೆ ಊದಿದ ಸುಮಲತಾಗೆ ಬಿಜೆಪಿ, ಕಾಂಗ್ರೆಸ್ ಜೈಕಾರ

'ನಮ್ಮ ನಾಮಪತ್ರ ಸಲ್ಲಿಕೆ, ಸಮಾವೇಶದ ವೇಳೆ ಪವರ್ ಕಟ್ ಮಾಡಿದ್ದರು. ನಿಖಿಲ್ ಕುಮಾರಸ್ವಾಮಿ ಅವರು ಮಾರ್ಚ್ 25ರಂದು ನಾಮಪತ್ರ ಸಲ್ಲಿಸುವಾಗ ಪವರ್ ಕಟ್ ಮಾಡದಂತೆ ಪತ್ರ ಬರೆಯಲಾಗಿತ್ತು' ಎಂದು ಸುಮಲತಾ ಅವರು ಹೇಳಿದರು.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ: ಚುನಾವಣಾ ಆಯುಕ್ತನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧು ಪ್ರಶ್ನೆಯೇ ಇಲ್ಲ: ಚುನಾವಣಾ ಆಯುಕ್ತ

Mandya independent candidate Sumalatha press conference highlights

ಪತ್ರಿಕಾಗೋಷ್ಠಿ ಮುಖ್ಯಾಂಶಗಳು

* ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅವರ ಚುನಾವಣಾ ಏಜೆಂಟ್ ಮದನ್ ಅವರು, 'ನಿಖಿಲ್ ನಾಮಪತ್ರವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದೆ' ಎಂದು ಹೇಳಿದರು.

ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?ಚುನಾವಣಾ ಚಿಹ್ನೆ: ಸುಮಲತಾ ಕೇಳಿದ್ದಾವುದು, ಆಯೋಗ ಕೊಟ್ಟಿದ್ದು ಯಾವುದು?

* 'ನಾಮಪತ್ರ ಪರಿಶೀಲನೆ ದಿನ 10.50ಕ್ಕೆ ನಾನು ನಿಖಿಲ್ ನಾಮಪತ್ರ ತಿರಸ್ಕರಿಸುವಂತೆ ಮನವಿ ಸಲ್ಲಿಸಿದೆ. ಫಾರಂ 26 ಸರಿಯಾಗಿ ಭರ್ತಿ ಮಾಡದ ಕಾರಣ ನಾನು ಈ ಮನವಿ ಮಾಡಿದೆ. ಆದರೆ, ಸಂಜೆ 5 ಗಂಟೆ ತನಕ ನನಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ' ಎಂದು ಮದನ್ ಆರೋಪ ಮಾಡಿದರು.

* 'ರಾತ್ರಿಯಾದರೂ ಪ್ರತಿಕ್ರಿಯೆ ಬರದ ಕಾರಣ ನಾನು ರಾತ್ರಿ 10.50ಕ್ಕೆ ಚುನಾವಣಾಧಿಕಾರಿಗಳನ್ನು ಪ್ರಶ್ನೆ ಮಾಡಿದೆ. ಆಗ ಅವರು ನಾನು ಲಿಖಿತ ಆಕ್ಷೇಪಣೆ ಕೊಟ್ಟಿಲ್ಲ ಎಂದು ಹಿಂಬರಹ ಬರೆದುಕೊಟ್ಟರು' ಎಂದು ಮದನ್ ಹೇಳಿದರು.

Mandya independent candidate Sumalatha press conference highlights

* ನಾವು ನಾಮಪತ್ರ ಸಲ್ಲಿಕೆ ಕಾರ್ಯ, ಪರಿಶೀಲನೆಯ ವಿಡಿಯೋ ಕೊಡಿ ಎಂದು ಹೇಳಿದೆವು. ಆದರೆ, 2 ಗಂಟೆಯಲ್ಲಿ ಕೊಡುತ್ತೇವೆ ಎಂದರು. ಬಳಿಕ ಎರಡು ದಿನದಲ್ಲಿ ಕೊಡುತ್ತೇವೆ ಎಂದರು. ಕೊನೆಗೆ ವಿಡಿಯೋ ಕೊಟ್ಟರು. ಆದರೆ, ನಾವು ಆಕ್ಷೇಪಣೆ ಸಲ್ಲಿಸುವ ವಿಡಿಯೋ ಕಟ್ ಮಾಡಲಾಗಿದೆ.

* ಸಂಪೂರ್ಣ ವಿಡಿಯೋವನ್ನು ನಾನು ಜಿಲ್ಲಾಧಿಕಾರಿಗಳ ಬಳಿ ಕೇಳಿದಾಗ ವಿಡಿಯೋ ಗ್ರಾಫರ್ ನಿಮ್ಮ ವಿಡಿಯೋವನ್ನು ಟ್ಯಾಂಪರ್ ಮಾಡಿದ್ದಾರೆ ಎಂದು ಮೌಖಿಕವಾಗಿ ಹೇಳಿದರು. ವಿಡಿಯೋ ಗ್ರಾಫರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದೇವೆ ಎಂದು ಹೇಳಿದರು.

* 'ನಿಖಿಲ್ ನಾಮಪತ್ರ ಸಲ್ಲಿಸಿದ ದಿನ ಅವರು ಸಮಾವೇಶ ಮಾಡಿದರು. ಅಂದು ಕುಮಾರಸ್ವಾಮಿ ಅವರ ಭಾಷಣವನ್ನು ಕೇಳಿ ಅಂದೇ ಅವರು ನಿಖಿಲ್ ಕ್ರಮ ಸಂಖ್ಯೆಯನ್ನು ಘೋಷಣೆ ಮಾಡಿದ್ದಾರೆ' ಎಂದು ಸುಮಲತಾ ಅಂಬರೀಶ್ ಆರೋಪಿಸಿದರು.

Mandya independent candidate Sumalatha press conference highlights

* 'ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ. ಎ.ಸುಮಲತಾ ಎನ್ನುವ ಹೆಸರು ಇದೆ. 19 ನೇ ಸರದಿಯಲ್ಲಿ ನನ್ನ ಹೆಸರು ಇರಬೇಕಿತ್ತು. 21ಕ್ಕೆ ಹೋಗಿದ್ದು ಹೇಗೆ?' ಎಂದು ಸುಮಲತಾ ಪ್ರಶ್ನೆ ಮಾಡಿದರು.

* 'ಮಿತಿ ಮೀರಿ ಅಧಿಕಾರ ದುರ್ಬಳಕೆ ನಡೆಯುತ್ತಿದೆ. ಚುನಾವಣೆ ದಿನವೂ ಎಲ್ಲಾ ಬೂತ್‌ಗಳಲ್ಲೂ ನಮಗೆ ಅನ್ಯಾಯವಾಗುವ ಸಾಧ್ಯತೆ ಇದೆ' ಎಂದು ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದರು.

English summary
Mandya independent candidate Sumalatha press conference highlights. Nikhil Kumaraswamy opposite candidate in Mandya lok sabha seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X