ಮಂಡ್ಯ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ

By: ಮಂಡ್ಯ ಪ್ರತಿನಿಧಿ
Subscribe to Oneindia Kannada
ಮಂಡ್ಯ, ಫೆಬ್ರವರಿ. 17 : ಪಟೇಲ್ ಹುದ್ದೆಯ ಗೌರವಧನ ಪಾವತಿಸದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಾರು ಹಾಗೂ ಮದ್ದೂರು ತಹಶೀಲ್ದಾರ್ ಕಚೇರಿ ಸಾಮಾಗ್ರಿ ಜಪ್ತಿಗೆ ಮಂಡ್ಯ 1ನೇ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.

1989ರಲ್ಲಿ ಸರ್ಕಾರ ಪಟೇಲ್ ಹುದ್ದೆಯನ್ನು ರದ್ದುಗೊಳಿಸಿತ್ತು. ಹುದ್ದೆ ರದ್ದಾದ ನಂತರ ನೀಡಬೇಕಿದ್ದ ಗೌರವ ಧನ‌ವನ್ನು ಮಂಡ್ಯ ಜಿಲ್ಲಾಡಳಿತ ನೀಡಿರಲಿಲ್ಲ.

Mandya court ordered Dc car and Maddur taluk Tahsil Office Equipments seized

ಗೌರವಧನ ಸತಾಯಿಸಿದ್ದ ಜಿಲ್ಲಾಡಳಿತ ಹಾಗೂ ತಾಲೂಕು ಕಚೇರಿ ವಿರುದ್ಧ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಪಟೇಲ್ ರಾಗಿದ್ದ ಕೆಂಡೆಗೌಡ ಎಂಬುವರ ಪುತ್ರ ಪಾರ್ಥಸಾರಥಿ ಕೋರ್ಟ್ ಮೋರೆ ಹೋಗಿದ್ದರು.

ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಮಂಡ್ಯ ಜಿಲ್ಲಾಧಿಕಾರಿ ಕಾರು ಹಾಗೂ ಮದ್ದೂರು ತಹಶೀಲ್ದಾರ್ ಕಚೇರಿ ಸಾಮಾಗ್ರಿ ಜಪ್ತಿಗೆ ಆದೇಶ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Mandya 1st additional court ordered on February 17. Mandya District Commissioner car and Maddur taluk Tahsil Office Equipments seized, For the Mandya district administration did not given patel job honorarium.
Please Wait while comments are loading...