ತನ್ನ ಕಿಡ್ನಿ ಮಾರಲು ಹೋಗಿ ಮೋಸ: ಮಹಿಳೆ ಆತ್ಮಹತ್ಯೆ

ಮಂಡ್ಯ, ಜನವರಿ 9: ಮನೆ ಸಮಸ್ಯೆಯನ್ನು ಬಗೆಹರಿಸಲು ತನ್ನ ಕಿಡ್ನಿಯನ್ನೇ ಮಾರಾಟ ಮಾಡಲು ಹೋಗಿ ಮೋಸಕ್ಕೆ ಒಳಗಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ಮಲ್ಲಯ್ಯ ಪತ್ನಿ ವೆಂಕಟಮ್ಮ (48) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೃತ ವೆಂಕಟಮ್ಮ ಮಳವಳ್ಳಿ ಪಟ್ಟಣದಲ್ಲಿ ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ತಕ್ಷಣ ಶ್ರೀಮಂತಳಾಗಬೇಕು ತನ್ನ ಕಷ್ಟವೆಲ್ಲವನ್ನೂ ಪರಿಹರಿಸಿಕೊಳ್ಳೇಕು ಎಂದು ಆಲೋಚಿಸುತ್ತಿದ್ದಾಗ ತಾರಾ ಎಂಬುವವರ ಪರಿಚಯವಾಗಿತ್ತು.

ವೆಂಕಟಮ್ಮಳಿಗೆ ತಾರಾ ಹಣದಾಸೆ ತೋರಿಸಿ ನಿನ್ನ ಕಿಡ್ನಿ ಮಾರಿದರೆ 30 ಲಕ್ಷ ರೂ. ಕೊಡುತ್ತಾರೆ. ನನಗೆ 3 ಲಕ್ಷ ರೂ. ಕಮಿಷನ್ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾಳೆ. ಬಳಿಕ ಮುಂಗಡವಾಗಿ 2 ಲಕ್ಷ ರೂ. ಕೊಡು ಎಂದು ಕೇಳಿದ್ದಾಳೆ. ಆಗ ಮೃತ ವೆಂಕಟಮ್ಮ ಸಾಲ ಮಾಡಿ ಹಣವನ್ನು ನೀಡಿದ್ದಳು ಎನ್ನಲಾಗಿದೆ.

Lady commit suicide after she sell her kidney

ಈ ಮಧ್ಯೆ ಮೃತ ವೆಂಕಟಮ್ಮ ತನ್ನ ನೋವನ್ನು ಬೆಂಗಳೂರಿನಲ್ಲಿರುವ ಸಹೋದರಿನಿಗೆ ಹೇಳಿಕೊಂಡಿದ್ದು, ಆ ಸಮಯದಲ್ಲಿ ಅವರು ಸ್ಪಲ್ಪ ಹಣವನ್ನು ನೀಡಿ ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೂ ಕಳೆದ ಎರಡು ದಿನಗಳ ಹಿಂದೆ ಮನಸ್ಸಿಗೆ ನೋವಾಗಿ ಮಳವಳ್ಳಿ ಪಟ್ಟಣ ದೊಡ್ಡಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೆಂಕಟಮ್ಮ ಸಾಲಭಾದೆ ತಾಳಲಾರದೇ ಮತ್ತೆ ವಂಚಕಿ ಬಳಿ ಹೋಗಿ ನನ್ನ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+