ಮಂಡ್ಯ: ಸಾರಿಗೆ ಮುಷ್ಕರ, ಖಾಸಗಿ ವಾಹನಗಳ ಸುಗ್ಗಿ

Subscribe to Oneindia Kannada

ಮಂಡ್ಯ, ಜುಲೈ, 25: ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಸ್ ಗಳು ರಸ್ತೆಗಿಳಿಯದ ಕಾರಣ ಖಾಸಗಿ ಬಸ್ ಮತ್ತು ಟೆಂಪೋ ಟ್ರಾವೆಲರ್ಸ್ ಗಳಿಗೆ ಸುಗ್ಗಿಯಾಯಿತು.

ಜಿಲ್ಲೆಯ 6 ಬಸ್ ಡಿಪೋದಲ್ಲಿರುವ ಸುಮಾರು 430 ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದ ಕಾರಣ ಬಂಪರ್ ಕಲೆಕ್ಷನ್ ಆಯಿತು. ಮಂಡ್ಯದಲ್ಲಿ ಸಾರಿಗೆ ಮುಷ್ಕರದ ಪರಿಣಾಮ ಹೇಗಿತ್ತು ನೋಡಿಕೊಂಡು ಬನ್ನಿ...

ಬಿಕೋ ಎನ್ನುತ್ತಿದ್ದ ನಿಲ್ದಾಣಗಳು

ಬಿಕೋ ಎನ್ನುತ್ತಿದ್ದ ನಿಲ್ದಾಣಗಳು

ಇನ್ನು ಜಿಲ್ಲೆಯ ಏಳು ಬಸ್ ನಿಲ್ದಾಣಗಳು ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿರುವ ಸಾರಿಗೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಖಾಸಗಿ ಬಸ್ ಗಳ ಸುಗ್ಗಿ

ಖಾಸಗಿ ಬಸ್ ಗಳ ಸುಗ್ಗಿ

ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಲಾಭವನ್ನು ಪಡೆದ ಖಾಸಗಿ ಬಸ್ಸುಗಳು ಸಂಚಾರ ಆರಂಭಿಸಿದ್ದವು. ಕೆಲವು ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು.

ಅಪಾಯದ ಸಂಚಾರ

ಅಪಾಯದ ಸಂಚಾರ

ಇನ್ನು ಕೆಲವೆಡೆಗಳಲ್ಲಿ ಮಿನಿ ಬಸ್ಸುಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತೆರೆದಿದ್ದ ಖಾಸಗಿ ಶಾಲೆಗಳು

ತೆರೆದಿದ್ದ ಖಾಸಗಿ ಶಾಲೆಗಳು

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸ್ವಂತ ವಾಹನಗಳನ್ನು ಹೊಂದಿದ್ದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರೂ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ತೊಂದರೆಯಾಗಿ ಪರದಾಡುವಂತಾಯಿತು.ಜಿಲ್ಲೆಯ ಏಳು ನಿಲ್ದಾಣಗಳು ಹಾಗೂ ಡಿಪೋಗಳು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mandya: KSRTC strike effects Mandya district on 25 July. Private buses use this situation for their profit.
Please Wait while comments are loading...