ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಲುವಿಗೆ ಬೇಕಾಗಿರುವ ಆಶೀರ್ವಾದ ದೇವರದ್ದೋ? ಮತದಾರರದ್ದೋ?

|
Google Oneindia Kannada News

Recommended Video

Lok Sabha Elections 2019 : ಮಂಡ್ಯ ಕ್ಷೇತ್ರದಲ್ಲಿ ಸುಮಲತಾ vs ನಿಖಿಲ್ ಕುಮಾರಸ್ವಾಮಿ | Oneindia Kannada

ಮಂಡ್ಯ, ಮಾರ್ಚ್ 06: ರಾಜಕೀಯ ಮುಖಂಡರು ಮತ್ತು ನಾಡಿನ ಜನ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಕುತೂಹಲದಿಂದ ನೋಡುತ್ತಿದ್ದಾರೆ. ಮುಂದೇನಾಗಬಹುದು ಎಂಬ ಅಚ್ಚರಿಯೂ ಅವರೆಲ್ಲರನ್ನು ಕಾಡತೊಡಗಿದೆ.

ಇದೆಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ತನ್ನ ಮಗ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿ ಎಂದು ಮದ್ದೂರಿನ ಹೊಳೆ ಆಂಜನೇಯನಿಗೆ ಒಂದು ಕಾಲು ರೂಪಾಯಿಟ್ಟು ಐದು ಮಂಗಳವಾರ ಪೂಜೆ ಸಲ್ಲಿಸುವುದಾಗಿ ಹರಕೆ ಕಟ್ಟಿಕೊಂಡಿರುವ ಅನಿತಾಕುಮಾರಸ್ವಾಮಿ ಅವರು ಎರಡು ಮಂಗಳವಾರದ ಪೂಜೆಯನ್ನು ಮುಗಿಸಿದ್ದಾರೆ.

ರಾಜಕೀಯದ ಬೆಳವಣಿಗೆಗಳು ಅದರ ಪಾಡಿಗೆ ನಡೆಯುತ್ತಿದ್ದರೆ ತನ್ನ ಮಗನ ಗೆಲುವಿಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ತಾಯಿಯಾಗಿ ಅನಿತಾಕುಮಾರಸ್ವಾಮಿ ಅವರು ಮಾಡುತ್ತಿದ್ದಾರೆ.

ಅಧಿಕೃತ ಅಭ್ಯರ್ಥಿಯಾಗಿ ಮಂಡ್ಯಕ್ಷೇತ್ರದಿಂದ ಕಣಕ್ಕಿಳಿದ ಬಳಿಕ ಮತದಾರರ ಬಳಿ ಹೋಗುವುದು, ಸಮಾವೇಶ ನಡೆಸುವುದು, ಸಭೆ ನಡೆಸುವುದು ಇದೆಲ್ಲವೂ ಇದ್ದದ್ದೇ, ಆದರೆ ಇದೆಲ್ಲದರ ನಡುವೆಯೂ ತಮ್ಮ ನಂಬಿಕೆಯಂತೆ ದೇವರ ಮೊರೆಹೋಗಿರುವ ಅವರು ಗೆಲುವಿಗಾಗಿ ಪ್ರಾರ್ಥಿಸುತ್ತಲೇ ಬರುತ್ತಿದ್ದಾರೆ.

ಬಿಜೆಪಿ ಟಾರ್ಗೆಟ್-22ನ್ನು ಉಡೀಸ್ ಮಾಡ್ತಾರಾ ದೋಸ್ತಿ ನಾಯಕರು?ಬಿಜೆಪಿ ಟಾರ್ಗೆಟ್-22ನ್ನು ಉಡೀಸ್ ಮಾಡ್ತಾರಾ ದೋಸ್ತಿ ನಾಯಕರು?

ಹಾಗೆನೋಡಿದರೆ ದೇವೇಗೌಡರ ಕುಟುಂಬ ದೇವರನ್ನು ನಂಬುತ್ತಾರೆ. ಜತೆಗೆ ಗೆಲುವಿಗಾಗಿ ಹೋಮ, ಹವನ, ವಿಶೇಷಪೂಜೆಗಳನ್ನು ಈ ಹಿಂದೆಯೂ ಮಾಡಿರುವ ನಿದರ್ಶನಗಳಿವೆ. ಮುಂದೆಯೂ ಮಾಡುತ್ತಾರೆ. ಹೀಗಿರುವಾಗ ಅನಿತಾಕುಮಾರಸ್ವಾಮಿ ಅವರು ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಹರಕೆ ಕಟ್ಟಿಕೊಂಡು ಹೊಳೆಆಂಜನೇಯನಿಗೆ ಪ್ರತಿ ಮಂಗಳವಾರ ಪೂಜೆ ಸಲ್ಲಿಸುತ್ತಿರುವುದರಲ್ಲಿ ಅಚ್ಚರಿ ಪಡುವಂತಹದ್ದೇನಿಲ್ಲ.

 ಜೆಡಿಎಸ್ ನಿಂದ ಸ್ಪರ್ಧಿಸಿದರೆ ಗೆಲ್ಲುತ್ತಾರೆ

ಜೆಡಿಎಸ್ ನಿಂದ ಸ್ಪರ್ಧಿಸಿದರೆ ಗೆಲ್ಲುತ್ತಾರೆ

ಮಂಡ್ಯ ಜೆಡಿಎಸ್ ನ ಭದ್ರಕೋಟೆ ಇಲ್ಲಿ ಜೆಡಿಎಸ್ ನಿಂದ ಯಾರೇ ಸ್ಪರ್ಧಿಸಿದರೂ ಸುಲಭವಾಗಿ ಗೆಲ್ಲುತ್ತಾರೆ ಎಂಬ ಮಾತುಗಳು ಇತ್ತೀಚೆಗಿನ ದಿನಗಳಲ್ಲಿ ಕೇಳಿ ಬಂದಿತ್ತು. ಇದಕ್ಕೆ ಪ್ರತಿ ಚುನಾವಣೆಯಲ್ಲಿ ಸೋಲುತ್ತಾ ಬಂದಿದ್ದ ಎಲ್.ಆರ್.ಶಿವರಾಮೇಗೌಡ ಅವರು ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಪಡೆದಿರುವುದು ನಿದರ್ಶನವಾಗಿದೆ.

 ಲೋಕಸಭೆ ಸೀಟು ಹಂಚಿಕೆ: ದೆಹಲಿಯಲ್ಲಿ ದೇವೇಗೌಡ-ರಾಹುಲ್ ಗಾಂಧಿ ಭೇಟಿ ಲೋಕಸಭೆ ಸೀಟು ಹಂಚಿಕೆ: ದೆಹಲಿಯಲ್ಲಿ ದೇವೇಗೌಡ-ರಾಹುಲ್ ಗಾಂಧಿ ಭೇಟಿ

 ಬದಲಾದ ಮಂಡ್ಯ ಲೋಕಸಭಾ ಕ್ಷೇತ್ರದ ಕಣ

ಬದಲಾದ ಮಂಡ್ಯ ಲೋಕಸಭಾ ಕ್ಷೇತ್ರದ ಕಣ

ಆದರೆ ಈಗಿನ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಅಂಬರೀಶ್ ಸುಮಲತಾ ಅವರು ಕಣಕ್ಕೆ ಧುಮುಕಿದ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರದ ಕಣವೇ ಬದಲಾಗಿದ್ದು ಒಂದು ರೀತಿಯ ರಂಗು ತುಂಬಿದೆ. ಸುಮಲತಾ ಅಂಬರೀಶ್ ಕೂಡ ದೇವಸ್ಥಾನಗಳಿಗೆ ಭೇಟಿ ನೀಡತೊಡಗಿದ್ದಾರೆ. ಜತೆಗೆ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ.

 ಕೈ-ತೆನೆ ಮೈತ್ರಿಯಾದರೆ ಮೈಸೂರಿನಿಂದ ದೇವೇಗೌಡರೇ ಅಭ್ಯರ್ಥಿ:ಜಿಟಿಡಿ ಕೈ-ತೆನೆ ಮೈತ್ರಿಯಾದರೆ ಮೈಸೂರಿನಿಂದ ದೇವೇಗೌಡರೇ ಅಭ್ಯರ್ಥಿ:ಜಿಟಿಡಿ

 ಆಶೀರ್ವಾದ ಮಾಡಿ, ಖಂಡಿತಾ ಗೆಲ್ಲುತ್ತೇನೆ

ಆಶೀರ್ವಾದ ಮಾಡಿ, ಖಂಡಿತಾ ಗೆಲ್ಲುತ್ತೇನೆ

ಸದ್ಯ ಕಾಂಗ್ರೆಸ್‌ನಿಂದ ಸುಮಲತಾ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಪಕ್ಕಾ ಆಗಿದೆ. ಇನ್ನೇನಿದ್ದರೂ ಪಕ್ಷೇತ್ರರಾಗಿಯೇ ಕಣಕ್ಕಿಳಿಯಬೇಕಾಗಿದೆ. ನಾನು ಮಂಡ್ಯದ ಸೊಸೆ ಎಂದು ಹೇಳುತ್ತಿರುವ ಸುಮಲತಾ ಅವರು ನನಗೆ ಜನ ಆಶೀರ್ವಾದ ಮಾಡಬೇಕು ಅವರು ಆಶೀರ್ವಾದ ಮಾಡಿದರೆ ಖಂಡಿತಾ ಗೆಲ್ಲುತ್ತೇನೆ ಎನ್ನುತ್ತಿದ್ದಾರೆ.

 ಯಾರಿಗೆ ಯಾರು ಆಶೀರ್ವಾದ ಮಾಡುತ್ತಾರೆ?

ಯಾರಿಗೆ ಯಾರು ಆಶೀರ್ವಾದ ಮಾಡುತ್ತಾರೆ?

ಒಂದು ಕಡೆ ಮಗನ ರಾಜಕೀಯ ಭವಿಷ್ಯಕ್ಕಾಗಿ ದೇವರ ಆಶೀರ್ವಾದಕ್ಕೆ ದೇಗುಲಕ್ಕೆ ಭೇಟಿ ನೀಡುತ್ತಿರುವ ಅನಿತಾಕುಮಾರಸ್ವಾಮಿ. ಮತ್ತೊಂದು ಕಡೆ ಮತದಾರರ ಆಶೀರ್ವಾದ ಬಯಸಿ ಮನೆಮನೆಗೆ ತೆರಳುತ್ತಿರುವ ಸುಮಲತಾ. ಕೊನೆಯಲ್ಲಿ ಯಾರಿಗೆ ಯಾರು ಆಶೀರ್ವಾದ ಮಾಡುತ್ತಾರೆ ಎಂಬುದು ಚುನಾವಣೆ ಕಳೆದ ಬಳಿಕ ಗೊತ್ತಾಗಬೇಕಿದೆ.

English summary
Political leaders and Karnataka people are eagerly looking at the Mandya Lok Sabha constituency.Here's a detailed article about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X