ಚಿತ್ರಗಳು : ಬೆಂಗಳೂರು-ಮೈಸೂರು ಜೋಡಿ ಮಾರ್ಗ ಪೂರ್ಣ

Posted By: Gururaj
Subscribe to Oneindia Kannada

ಮಂಡ್ಯ, ನವೆಂಬರ್ 22 : ಬೆಂಗಳೂರು-ಮೈಸೂರು ನಡುವಿನ ಜೋಡಿ ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಂಡಿದೆ. 138.3 ಕಿ.ಮೀ.ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ.

1997-98ನೇ ಸಾಲಿನಲ್ಲಿ ಜೋಡಿ ಹಳಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಮೂರು ಹಂತಗಳಾಗಿ ಮಾರ್ಗವನ್ನು ವಿಭಜನೆ ಮಾಡಿ ಕಾಮಗಾರಿ ನಡೆಸಲಾಯಿತು. 2017ರ ನವೆಂಬರ್ 21ರಂದು ಕಾಮಗಾರಿ ಪೂರ್ಣಗೊಂಡಿದೆ.

ಬೆಂಗಳೂರು-ಮೈಸೂರು ಜೋಡಿ ಮಾರ್ಗ ಪೂರ್ಣ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲದ ಮದ್ದಿನ ಮನೆ ಯೋಜನೆಗೆ ಅಡ್ಡಿಯಾಗಿತ್ತು. ಮದ್ದಿನ ಮನೆಯನ್ನು ಸ್ಥಳಾಂತರ ಮಾಡಿದ ಬಳಿಕ 1.7 ಕಿ.ಮೀ. ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿ, ಮಾರ್ಗವನ್ನು ಸಂಚಾರಕ್ಕೆ ಮುಕ್ತವಾಗಿಸಲಾಗಿದೆ.

ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ

ಯಲಿಯೂರು-ಮೈಸೂರು ನಡುವಿನ ವಿದ್ಯುದೀಕರಣ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ನಂತರ ಉಭಯ ನಗರಗಳ ನಡುವಿನ ಸಂಚಾರದ ಅವಧಿ ಕಡಿಮೆಯಾಗಲಿದೆ.

ಕಾವೇರಿ ನದಿಗೆ 2 ಹೊಸ ಸೇತುವೆ ನಿರ್ಮಾಣ, ಟಿಪ್ಪು ಮದ್ದಿನ ಮನೆ ಸ್ಥಳಾಂತರ, ಭೂ ಸ್ವಾಧೀನದ ಗೊಂದಲ ಮುಂತಾದ ಎಲ್ಲಾ ಅಡೆತಡೆಗಳನ್ನು ಮೀರಿ, ಬೆಂಗಳೂರು-ಮೈಸೂರು ನಡುವಿನ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡಿದೆ.

ಜೋಡಿ ಮಾರ್ಗದ ಮೊದಲ ಹಂತ

ಜೋಡಿ ಮಾರ್ಗದ ಮೊದಲ ಹಂತ

ಜೋಡಿ ಮಾರ್ಗ ಯೋಜನೆಯ ಮೊದಲ ಹಂತದ ಕಾಮಗಾರಿ ಬೆಂಗಳೂರು-ಕೆಂಗೇರಿ (12.3 ಕಿ.ಮೀ.) ಮಾರ್ಗ 2007ರಲ್ಲಿ ಪೂರ್ಣಗೊಂಡಿತು. ಇದಕ್ಕೆ 39.59 ಕೋಟಿ ವೆಚ್ಚವಾಗಿದೆ.

ಕೆಂಗೇರಿ-ರಾಮನಗರ ಮಾರ್ಗ

ಕೆಂಗೇರಿ-ರಾಮನಗರ ಮಾರ್ಗ

2ನೇ ಹಂತದಲ್ಲಿ ಕೆಂಗೇರಿ-ರಾಮನಗರ (32 ಕಿ.ಮೀ) ಮಾರ್ಗದ ಕಾಮಗಾರಿ ಆರಂಭಿಸಲಾಯಿತು. 2008ರ ಅಕ್ಟೋಬರ್‌ನಲ್ಲಿ ಮಾರ್ಗ ಪೂರ್ಣಗೊಂಡಿತು. ಈ ಯೋಜನೆ ವೆಚ್ಚ 75.98 ಕೋಟಿ.

ರಾಮನಗರ-ಮೈಸೂರು ನಡುವಿನ ಕಾಮಗಾರಿ

ರಾಮನಗರ-ಮೈಸೂರು ನಡುವಿನ ಕಾಮಗಾರಿ

ಯೋಜನೆಯ 3ನೇ ಹಂತವಾಗಿ ಮೈಸೂರು-ರಾಮನಗರ ನಡುವಿನ ಕಾಮಗಾರಿಯನ್ನು ಆರಂಭಿಸಲಾಯಿತು. ವಿದ್ಯುತೀಕರಣದ ಜೊತೆಗೆ ಹಳಿ ಹಾಕುವ ಕಾರ್ಯವೂ ಆರಂಭವಾಯಿತು. 875 ಕೋಟಿ ವೆಚ್ಚದ ಕಾಮಗಾರಿ (94 ಕಿ.ಮೀ.) 2015ರ ಅಕ್ಟೋಬರ್‌ನಲ್ಲಿ ಪೂರ್ಣಗೊಂಡಿತು.

1.7 ಕಿ.ಮೀ. ಬಾಕಿ ಉಳಿಯಿತು

1.7 ಕಿ.ಮೀ. ಬಾಕಿ ಉಳಿಯಿತು

2015ರಲ್ಲಿ ಕಾಮಗಾರಿ ಪೂರ್ಣಗೊಂಡರೂ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಮದ್ದಿನ ಮನೆ ಅಡ್ಡ ಬಂದಿದ್ದರಿಂದ 1.7ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಅಡ್ಡಿ ಉಂಟಾಯಿತು.

ದೇಶದಲ್ಲೇ ಮೊದಲ ಪ್ರಯತ್ನ

ದೇಶದಲ್ಲೇ ಮೊದಲ ಪ್ರಯತ್ನ

ಜೋಡಿ ಮಾರ್ಗಕ್ಕೆ ಅಡ್ಡಿಯಾಗಿದ್ದ ಟಿಪ್ಪು ಕಾಲದ ಮದ್ದಿನ ಮನೆಯನ್ನು ಅಮೆರಿಕ ವೂಲ್ಫ್ ಹಾಗೂ ನವದೆಹಲಿಯ ಪಿಎಸ್‌ಎಲ್ ಇಂಜಿನಿಯರಿಂಗ್ ಕಂಪನಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸ್ಥಳಾಂತರ ಮಾಡಿದವು. ಸುಮಾರು 1 ಸಾವಿರ ಟನ್ ತೂಕದ ಮದ್ದಿನ ಮನೆ ಸ್ಥಳಾಂತರ ಪ್ರಕ್ರಿಯೆ ದೇಶದಲ್ಲೇ ಮೊದಲನೆಯದ್ದು.

ಕಾವೇರಿ ನದಿಗೆ ಹೊಸ ಸೇತುವೆ

ಕಾವೇರಿ ನದಿಗೆ ಹೊಸ ಸೇತುವೆ

ಜೋಡಿ ಮಾರ್ಗಕ್ಕಾಗಿ ಕಾವೇರಿ ನದಿಗೆ 2 ಹೊಸ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಕಾವೇರಿ ಉತ್ತರ, ಕಾವೇರಿ ದಕ್ಷಿಣ ಎಂದು ಸೇತುವೆಗಳಿಗೆ ನಾಮಕರಣ ಮಾಡಲಾಗಿದೆ. ಸೇತುವೆ ನಿರ್ಮಾಣ ಕಾಮಗಾರಿ ಸುಮಾರು ಒಂದೂವರೆ ವರ್ಷ ತೆಗೆದುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru-Mysuru railway double line at Srirangapatna has been commissioned for traffic on November 21, 2017. The entire Bengaluru-Mysuru (138.3 km) doubling project now stands fully completed and commissioned.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ