• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪ್ಪ-ಅಮ್ಮ ನನಗೆ ಗೌಡ ಎಂದು ಹೆಸರಿಟ್ಟಿದ್ದೇ ತಪ್ಪಾಗಿದೆ: ದೇವೇಗೌಡ

|

ನಾಗಮಂಗಲ, ನವೆಂಬರ್ 01: ತಮ್ಮನ್ನು ಒಕ್ಕಲಿಗ ಸಮುದಾಯದ ನಾಯಕ ಎಂದು ಬ್ರಾಂಡ್ ಮಾಡುತ್ತಿರುವುದಕ್ಕೆ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗಮಂಗಲದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನನ್ನ ಅಪ್ಪ-ಅಮ್ಮ ನನಗೆ ಗೌಡ ಎಂದು ಹೆಸರಿಟ್ಟಿದ್ದೇ ತಪ್ಪಾಯಿತೇ, ನಾನು ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದೇನೆ ಆದರೆ ಒಕ್ಕಲಿಗ ಸಮುದಾಯದವನು ಎಂದೇ ನನ್ನನ್ನು ಗುರುತಿಸಲಾಗುತ್ತಿದೆ ಎಂದು ದೇವೇಗೌಡ ಅವರು ಬೇಸರ ವ್ಯಕ್ತಪಡಿಸಿದರು.

ಶ್ರೀರಾಮುಲು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಒಂದಿಷ್ಟು ಪ್ರಶ್ನೆಗಳು

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನೇಕ ಹಿಂದುಳಿದ, ದಲಿತ ಮಹಿಳೆಯರನ್ನು ಅಧಿಕಾರಕ್ಕೆ ಏರಿಸಿದ್ದೇವೆ ಆದರೂ ಸಹ ಒಂದು ಸಮುದಾಯದ ಮುಖಂಡನಾಗಿ ಮಾತ್ರವೇ ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಇಲ್ಲದೇ ಮಹಾಘಟಬಂಧನ ಅಪೂರ್ಣ : ದೇವೇಗೌಡ

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಈ ಹಿಂದಿನ ಚುನಾವಣೆಗಳಲ್ಲಿ ವೀರಾವೇಶದಿಂದ ಹೋರಾಡಿದ್ದೇವೆ, ಚುನಾವಣೆ ಪ್ರಚಾರದ ವೇಳೆ ಸಹ ವೀರಾವೇಶದದಿಂದ ಪರಸ್ಪರ ಟೀಕೆಗಳನ್ನು ಮಾಡಿದ್ದೇವೆ ಆದರೆ ಈಗ ಸಮಯ ಬದಲಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ನೋವು ಮರೆತು ಸಿದ್ದು ಮನೆಗೆ ಹೋದೆ

ನೋವು ಮರೆತು ಸಿದ್ದು ಮನೆಗೆ ಹೋದೆ

ಪರಸ್ಪರ ಎದುರು ಸ್ಪರ್ಧೆ ಮಾಡಿದರೆ ದೇಶಕ್ಕೆ ಕೆಟ್ಟ ಸಂದೇಶ ಹೋಗುತ್ತದೆ ಎಂಬ ಉದ್ದೇಶದಿಂದ ಹಿಂದಿನ ನೋವನ್ನು ಮರೆತು ಮೈತ್ರಿಗಾಗಿ ನಾನೇ ಸಿದ್ದರಾಮಯ್ಯ ಮನೆಗೆ ಹೋದೆ, ಅಲ್ಲದೆ ಕಾಂಗ್ರೆಸ್‌ ಹೈಕಮಾಂಡ್‌ಗೂ ಸಹ ಉಪಚುನಾವಣೆ ಬಗ್ಗೆ ಮನವರಿಕೆ ಮಾಡಿಕೊಟ್ಟೆ ಎಂದು ದೇವೇಗೌಡ ಗುಟ್ಟು ಬಿಟ್ಟುಕೊಟ್ಟರು.

ಬಿಜೆಪಿಗೆ ಗೆದ್ದರೆ ಕಾರ್ಯಕರ್ತರಿಗೂ ಅವಮಾನ

ಬಿಜೆಪಿಗೆ ಗೆದ್ದರೆ ಕಾರ್ಯಕರ್ತರಿಗೂ ಅವಮಾನ

ಮೇಲ್ಮಟ್ಟದಲ್ಲಿ ನಾವು ಒಂದಾದರೂ ಹಳ್ಳಿಗಳಲ್ಲಿ ಕಾರ್ಯಕರ್ತರು ಒಂದಾಗುವುದು ಕಷ್ಟ, ಆದರೆ ಐದೂ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಬಿಟ್ಟರೆ ನಾವು ಮಾತ್ರವಲ್ಲ ನಮ್ಮ ಕಾರ್ಯಕರ್ತರೂ ಅವಮಾನ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕರ್ತರು ಒಂದಾಗಬೇಕು

ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕರ್ತರು ಒಂದಾಗಬೇಕು

ನಾನು ಎಲ್ಲ ನೋವು ಮರೆತು ಹೇಗೆ ಸಿದ್ದರಾಮಯ್ಯ ಮನೆಗೆ ಹೋದೆನೋ ಹಾಗೆಯೇ ಇಲ್ಲಿ ಸಹ ಕಾಂಗ್ರೆಸ್‌ ಕಾರ್ಯಕರ್ತರು ಹಿಂದಿನ ನೋವು ಮರೆತು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ದೇವೇಗೌಡ ಅವರು ಕರೆ ನೀಡಿದರು.

ಚೆಲುವರಾಯಸ್ವಾಮಿಗೆ ಬುದ್ದಿವಾದ

ಚೆಲುವರಾಯಸ್ವಾಮಿಗೆ ಬುದ್ದಿವಾದ

ನಾಗಮಂಗಲದಲ್ಲಿ ಸೋಲುಂಡ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಹಳೆಯದನ್ನೆಲ್ಲಾ ಮರೆತು ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿ ಗೆಲ್ಲಲು ಸಹಾಯ ಮಾಡಬೇಕು ಎಂದು ದೇವೇಗೌಡ ಅವರು ಪರೋಕ್ಷವಾಗಿ ಚೆಲುವರಾಯಸ್ವಾಮಿ ಅವರಿಗೆ ಸಲಹೆ ನೀಡಿದರು. ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಹಾರಿದ ಚೆಲುವರಾಯಸ್ವಾಮಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು.

English summary
JDS president Deve Gowda said i worked for all communities development but people recognize me as one community leader this is not fair. He talked in Nagamangala By election 2018 campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X