ಮಂಡ್ಯ : ಪೆಲಿಕಾನ್ ಹಕ್ಕಿಗಳ ಸಾವು, ಜರ್ಮನ್ ತಂಡ ಪರಿಶೀಲನೆ

Written By: Gururaj
Subscribe to Oneindia Kannada

ಮಂಡ್ಯ, ಫೆಬ್ರವರಿ 11 : ಕೊಕ್ಕರೆಬೆಳ್ಳೂರಿನಲ್ಲಿ ಮೇಲಿಂದ ಮೇಲೆ ಪೆಲಿಕಾನ್ ಹಕ್ಕಿಗಳು ಸಾವನ್ನಪ್ಪುತ್ತಿವೆ. ಜರ್ಮನ್‍ ದೇಶದ ತಂಡ ಈ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಲಿದೆ.

ಹಲವು ಪೆಲಿಕಾನ್ ಹಕ್ಕಿಗಳು ಇದುವರೆಗೆ ಸಾವನ್ನಪ್ಪಿವೆ. ಆದರೆ, ಅವುಗಳ ಸಾವಿಗೆ ನಿಖರವಾದ ಕಾರಣ ಇನ್ನೂ ಕೂಡ ಪತ್ತೆಯಾಗಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರು ಪ್ರಯೋಗಾಲಯದಿಂದ ಆಗಮಿಸಿದ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿ ಜಂತು ಹುಳುವಿನಿಂದ ಸಾವನ್ನಪ್ಪಿವೆ ಎಂದು ಹೇಳಿದ್ದರು.

ಮಂಡ್ಯದಲ್ಲಿ ಪೆಲಿಕಾನ್ ಹಕ್ಕಿಗಳ ನಿಗೂಢ ಸಾವು

Kokkare Bellur

ಕೊಕ್ಕರೆ ಬೆಳ್ಳೂರಿನಲ್ಲಿ ಇದುವರೆಗೆ 24 ಪೆಲಿಕಾನ್ ಹಕ್ಕಿಗಳು, 26 ಕೊಕ್ಕರೆಗಳು ಸಾವನ್ನಪ್ಪಿವೆ. ಇದು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಫೆ.14 ರಂದು ವಿದೇಶಿ ತಜ್ಞರ ತಂಡ ಭೇಟಿ ನೀಡಲಿದೆ.

ಹಕ್ಕಿಜ್ವರ ಭೀತಿಗೆ ನಡುಗಿದ ಕುಕ್ಕುಟೋದ್ಯಮ: ವಹಿವಾಟು ಕುಸಿತ

ಭಾರತೀಯ ಅರಣ್ಯ ಇಲಾಖೆಯ ಡಾ.ಸಾಂಕೇತ್ ಬಡೋಲಾ, ಲೀಡಿಂಗ್ ವೆಟ್ ಲ್ಯಾಂಡ್ ಎಕಾಲಾಜಿಸ್ಟ್‍ನ ಸಲಹೆಗಾರ ಡಾ.ಬ್ರಿಜಾಗೋಪಾಲ್, ಬಾಂಬೆ ಪ್ರಾಕೃತಿಕ ಇತಿಹಾಸ ಸಂಸ್ಥೆಯ ಎಕಾಲಾಜಿಸ್ಟ್‍ನ ಮಾಜಿ ನಿರ್ದೇಶಕ ಡಾ.ಅಸದ್‍ರಾಹವ್‍ಮನಿ, ಇಂಡಿಯನ್ ಇನ್ಸಯೂಟಿವ್ ಆಫ್ ಸೈನ್ಸ್‍ನ ಎಕಾಲಾಜಿಸ್ಟ್ ಡಾ.ಟಿ.ವಿ.ರಾಮಚಂದ್ರ, ವನ್ಯಜೀವಿ ವಿಭಾಗದ ಮೈಸೂರು ವಿಭಾಗೀಯ ಉಪಸಂರಕ್ಷಣಾಧಿಕಾರಿಗಳು ಸೇರಿದಂತೆ ಇತರರು ತಂಡದಲ್ಲಿರುವರು.

ಕೊಕ್ಕರೆ ಬೆಳ್ಳೂರಿನಲ್ಲಿ ನಿಲ್ಲದ ಪೆಲಿಕಾನ್ ಸಾವು, ಹಕ್ಕಿ ಜ್ವರದ ಆತಂಕ

ಈ ತಂಡ ಮೊದಲಿಗೆ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಕೊಕ್ಕರೆ ಬೆಳ್ಳೂರಿಗೆ ಭೇಟಿ ನೀಡಿ ಪಕ್ಷಿಕೇಂದ್ರವನ್ನು ಪರಿಶೀಲನೆ ನಡೆಸಲಿದ್ದಾರೆ ಮತ್ತು ಅಲ್ಲಿ ಅವುಗಳ ಹಿಕ್ಕೆ, ಕೆರೆಕಟ್ಟೆಗಳ ನೀರು, ಶಿಂಷಾನದಿ ಇರುವ ಸ್ಥಳ, ಆಹಾರ ಸೇವಿಸುವ ಸ್ಥಳಗಳನ್ನು ಪರಿಶೀಲಿಸಲಿದ್ದಾರೆ.

'ಮೃತ ಪೆಲಿಕಾನ್‍ಗಳನ್ನು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲಿದ್ದಾರೆ. ಜೊತೆಗೆ ಪರಿಹಾರವನ್ನು ಸ್ಥಳದಲ್ಲಿಯೇ ತಿಳಿಸುವ ಸಾಧ್ಯತೆ ಇದೆ' ಎಂದು ಪಶುವೈದ್ಯಾಧಿಕಾರಿ ಡಾ.ಸತೀಶ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
German delegation will visit to Kokkare Bellur Bird Sanctuary, Maddur Karnataka on February 14, 2018. Team will inspect about hundreds of pelican bird deaths.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ