ಮೇ 5ರಂದು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರದ ರಣಕಹಳೆ ಮೊಳಗಿಸಲಿರುವ HDK, HDD

ಮಂಡ್ಯ, ಮೇ, 05: ರಾಜ್ಯ ವಿಧಾನಸಭೆ ಚುನವಾಣೆ ಹಿನ್ನೆಲೆ ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಅಭ್ಯರ್ಥಿಗಳ ಪರ ಶುಕ್ರವಾರ (ಏಪ್ರಿಲ್‌ 06) ಮತ ಪ್ರಚಾರ ನಡೆಸಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾಹಿತಿ ನೀಡಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ 6ರಂದು ಬೆಳಗ್ಗೆ 11 ಗಂಟೆಗೆ ಕೆ.ಆರ್.ಪೇಟೆಗೆ ಆಗಮಿಸುವ ಅವರು ಎಚ್.ಟಿ. ಮಂಜು, 12 ಗಂಟೆಗೆ ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರ ಹಾಗೂ ಮಧ್ಯಾಹ್ನ 1 ಗಂಟೆಗೆ ಮಂಡ್ಯ ಕ್ಷೇತ್ರದ ಬಿ.ಆರ್. ರಾಮಚಂದ್ರು ಪರ ಹಾಗೂ ಮಧ್ಯಾಹ್ನ 3 ಗಂಟೆಗೆ ಮಳವಳ್ಳಿ ಕ್ಷೇತ್ರದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಶಾಸಕ ಕೆ.ಅನ್ನದಾನಿ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

HD Kumaraswamy, HD Deve Gowda will campaign for JDS candidates in Mandya district on May 5

ನಂತರ ನಗರಸಭೆ ಮಾಜಿ ಅಧ್ಯಕ್ಷೆ ಎಚ್.ಎಸ್. ಮಂಜು ಮಾತನಾಡಿ, ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮೇ 6ರಂದು ಮಧ್ಯಾಹ್ನ 3 ಗಂಟೆಗೆ ಮಂಡ್ಯ ನಗರಕ್ಕೆ ಆಗಮಿಸಿ, ಗುತ್ತಲು, ಕೆರಗೋಡುವಿನಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಅವರು ರೂಪಿಸಿರುವ ಪಂಚರತ್ನ ಯೋಜನೆಯೇ ಅಭ್ಯರ್ಥಿಗಳ ಗೆಲುವಿಗೆ ವರದಾನವಾಗಲಿದೆ ಎಂದರು.

ಪಂಚರತ್ನ ಯೋಜನೆಯಲ್ಲಿ ಶಿಕ್ಷಣ, ಆರೋಗ್ಯ, ಯುವಜನತೆಗೆ ಉದ್ಯೋಗ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ವೃದ್ಧರಿಗೆ 5 ಸಾವಿರ ರೂಪಾಯಿ ಮಾಸಾಸನ ನೀಡಲಾಗುವುದು. ಆದ್ದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕಾಗಿದೆ. ಅವರ ಶಕ್ತಿ ಬಲಪಡಿಸಲು ಜೆಡಿಎಸ್‌ ಅಭ್ಯರ್ಥಿ ಬಿ.ಆರ್. ರಾಮಚಂದ್ರು ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸುವಂತೆ ಕೋರಿದರು.

ಸರ್ವೆ ಪ್ರಕಾರ ರಾಮಚಂದ್ರುಗೆ ಟಿಕೆಟ್

ನಮ್ಮ ಪಕ್ಷ ಟಿಕೆಟ್ ಮಾರಾಟ ಮಾಡುವ ನೀಚ ಮಟ್ಟಕ್ಕೆ ಇಳಿದಿಲ್ಲ. ಮೂರು ಬಾರಿ ಸರ್ವೆ ಮಾಡಿಸಿದಾಗ ಮೂರು ಬಾರಿಯೂ ರಾಮಚಂದ್ರು ಅವರ ಹೆಸರೇ ಕೇಳಿಬಂದ ಹಿನ್ನೆಲೆಯಲ್ಲಿ ಬಿ.ಆರ್.ರಾಮಚಂದ್ರು ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಒಬ್ಬ ಬಡ ರೈತನ ಮಗ. ಸ್ವಂತ ಉದ್ಯಮ ಮಾಡುವುದರ ಮೂಲಕ ಜನಸೇವೆ, ಸಮಾಜ ಸೇವೆ ಮಾಡುತ್ತಿದ್ದಾರೆ. ಅಲ್ಲದೆ, ಪಕ್ಷದ ಪರವಾಗಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಸ್.ಪಿ. ಗೌರೀಶ್, ನಗರಸಭೆ ಸದಸ್ಯೆ ಮಂಜುಳಾ ಉದಯ ಶಂಕರ್, ವತ್ಸಲ ಪ್ರಕಾಶ್, ಮೋಹನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಕೋಟೆ ಕಾಪಾಡಿಕೊಳ್ಳಲು ಜೆಡಿಎಸ್‌ ಹರಸಾಹಸ

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 2018ರಲ್ಲಿ ಹೊಂದಿದ್ದ ತನ್ನ ಹಿಡಿತವನ್ನು ಮತ್ತೆ ಗಟ್ಟಿಗೊಳಿಸಲು ಜೆಡಿಎಸ್ ತೀವ್ರ ಕಸರತ್ತು ಮಾಡುತ್ತಿದೆ. 2018ರಲ್ಲಿ ಮಂಡ್ಯ ಲೋಕಸಭೆ ವ್ಯಾಪ್ತಿಗೆ ಬರುವ ಎಲ್ಲ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಿತ್ತು. ಆದಾಗ್ಯೂ, ಬದಲಾದ ರಾಜಕೀಯ ಬೆಳವಣಿಗೆ ಮತ್ತು ಮಂಡ್ಯದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿರುವುದು ಜೆಡಿಎಸ್ ಶಾಸಕರನ್ನು ಬೆವರು ಹರಿಸುವಂತೆ ಮಾಡುತ್ತಿದೆ.

ಇನ್ನು 2019ರ ಉಪಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಎಂಟು ಸ್ಥಾನಗಳ ಪೈಕಿ ಕೆಆರ್ ಪೇಟೆಯನ್ನು ಬಿಜೆಪಿಗೆ ಕಳೆದುಕೊಂಡಿತ್ತು. ಇದೀಗ ಕೆಆರ್‌ಪೇಟೆ ಜತೆಗೆ ಜೆಡಿಎಸ್‌ಗೆ ಸವಾಲು ಎದುರಾಗಿರುವ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್‌ ಹರಸಾಹಸ ಪಡುತ್ತಿದೆ.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ಗೆ ಎರಡು ಸವಾಲು ಎದುರಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಅವರು ಮಾಜಿ ಸಂಸದ ಕೆ.ಶಂಕರೇಗೌಡ ಅವರ ಮೊಮ್ಮಗ ವಿಜಯಾನಂದ ಅವರೊಂದಿಗೆ ಸ್ವಾಭಿಮಾನಿ ಪಡೆ ರಚಿಸಿಕೊಂಡು ಬಂಡಾಯ ಸಾರಿದ್ದಾರೆ. ಸದ್ಯ ಸಚಿವ ನಾರಾಯಣ ಗೌಡ ಕಾರು ಅಡ್ಡಗಟ್ಟಿದ ಗ್ರಾಮಸ್ಥರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+