ದರ್ಶನ್‌ರನ್ನು ನನ್ನ ಮಗು ಅಂದುಕೊಳ್ಳಿ; ಹಂಸಲೇಖ ಅಚ್ಚರಿಯ ಹೇಳಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಬಗ್ಗೆ ಮೌನ ತಾಳಿದ್ದ ಚಿತ್ರರಂಗದ ಹಿರಿಯ ಕಲಾವಿದರು ಈಗ ಮಾತನಾಡಲು ಶುರು ಮಾಡಿದ್ದಾರೆ. ಇತ್ತಿಚೆಗೆ ತಾನೆ ರಕ್ಷಿತ ಮತ್ತು ಪ್ರೇಮ್ ದರ್ಶನ್‌ರನ್ನು ಭೇಟಿ ಮಾಡಿ ಬಂದಿದ್ದಾರೆ. ದರ್ಶನ್ ಪ್ರಕರಣದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಂಸಲೇಖ, ದರ್ಶನ್ ಪ್ರಕರಣವನ್ನು ಪ್ರಸ್ತಾಪಿಸಿದರು. ಆತನನ್ನು ನನ್ನ ಮಗು ಎಂದುಕೊಳ್ಳಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದರ್ಶನ್ ಬಂಧನ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಎನ್ನುವ ಬಗ್ಗೆ ಮಾತನಾಡಿದ ಅವರು, ದರ್ಶನ್ ಅತ್ಯುತ್ತನ್ನ ಸ್ಥಾನಕ್ಕೆ ಏರಿದವನು, ಆತ ಕೆಳಗೆ ಬೀಳುವುದು ಬೇಡ, ಮಲಯಾಳಂ ಚಿತ್ರರಂಗ ಕೂಡ ಹೀಗೆ ಆಗಿತ್ತು, ಆದರೆ ಈಗ ಅದು ಉತ್ತುಂಗದಲ್ಲಿದೆ ಎಂದರು.
ಮಲಯಾಳಂ ಸಿನಿಮಾ ರಂಗ ಕೆಳಗೆ ಬಿದ್ದು ಮೇಲೆ ಎದ್ದಿದೆ. ನಮ್ಮದು ಚಂದನವನ ಕಣ್ರಯ್ಯ, ಒಂದು ಮಳೆಗೆ ಮರ ಒಣಗಿದರೂ, ಇನ್ನೊಂದು ಮಳೆಗೆ ಕಾಡು ಬೆಳೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಿಟ್ಟನ್ನು ಸ್ಕ್ರಿಪ್ಟ್ ಮಾಡಬಾರದು
ಸಿನಿಮಾದವರು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನು ಕ್ಯಾರೆಕ್ಟರ್ ಮಾಡಬೇಕು. ಅದನ್ನು ಸಿನಿಮಾದಲ್ಲಿ ಮಾತ್ರ ತೋರಿಸಬೇಕು, ನಿಜ ಜೀವನದಲ್ಲಿ ಅದನ್ನೆಲ್ಲಾ ತರಬಾರದು. ಇದು ಕಲಾವಿದ ಕರ್ತವ್ಯ ಎಂದು ದರ್ಶನ್‌ಗೆ ಹಂಸಲೇಖ ಕಿವಿಮಾತು ಹೇಳಿದರು.
ನನ್ನ ಮಗು ಎಂದುಕೊಳ್ಳಿ
ದರ್ಶನ್ ನನ್ನ ಮಗು. ಮಗು ತಪ್ಪು ಮಾಡಿದಾಗ ತಂದೆ ಎಷ್ಟು ನೋವು ತಿಂತಾರೋ ಅಷ್ಟೇ ನೋವನ್ನು ನಾನು ಅನುಭವಿಸುತ್ತಿದ್ದೇನೆ. ಆ ಮಗು ಕೂಡ ಅಷ್ಟೇ ನೋವು ಪಡುತ್ತಿರುತ್ತದೆ ಎಂದು ದರ್ಶನ್ ಪರ ಕರುಣೆಯ ಮಾತನಾಡಿದ್ದಾರೆ.
ದರ್ಶನ್ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಕೂಡ ನೋಡೋಣ. ಕನ್ನಡ ಚಿತ್ರರಂಗ ಎಷ್ಟು ಕೀರ್ತಿ ಪಡೆದುಕೊಂಡಿತ್ತು, ಎಷ್ಟೊಂದು ಪ್ರಶಸ್ತಿಗಳನ್ನು ಪಡೆದಿತ್ತು, ಮೇಲಿದ್ದವರು ಕೆಳಗೆ ಬೀಳಬೇಕು, ಆದರೆ ದರ್ಶನ್ ಪ್ರಕರಣದಲ್ಲಿ ಅದಾಗಬಾರದು ಎಂದರು.












Click it and Unblock the Notifications