• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯೋಧ ಗುರುವಿನ ಕುಟುಂಬಕ್ಕೆ ಒಂದು ದಿನದ ದುಡಿಮೆ ನೀಡಿದ ಮಂಡ್ಯದ ಗೋಬಿ ವ್ಯಾಪಾರಿ

|
   Pulwama : ಹುತಾತ್ಮನಾದ ಯೋಧ ಗುರು ಕುಟುಂಬಕ್ಕೆ ಸಹಾಯ ಮಾಡಿದ ಮಂಡ್ಯದ ಗೋಬಿ ವ್ಯಾಪಾರಿ | Oneindia Kannada

   ಮಂಡ್ಯ, ಫೆಬ್ರವರಿ 21: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಗುಡಿಗೆರೆ ತಾಲೂಕಿನ ವೀರಯೋಧ ಸಾಂತ್ವನ ಹೇಳಲು ಹಾಗೂ ಧನ ಸಹಾಯ ಮಾಡಲು ಇಡೀ ರಾಜ್ಯದ ಜನರು ತಮ್ಮ ಕೈಲಾದಷ್ಟು ರೀತಿಯಲ್ಲಿ ಮುಂದಾಗುತ್ತಿದ್ದಾರೆ.

   ಗುರು ಅವರ ಮನೆಗೆ ತೆರಳಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ರಾಜಕಾರಣಿಗಳು, ಸಂಘ ಸಂಸ್ಥೆಗಳು, ಸಿನಿಮಾ ನಟರು ಯಥಾನುಶಕ್ತಿ ಸಹಾಯ ಮಾಡುತ್ತಿದ್ದು, ಇದು ಯೋಧ ಗುರು ಕುಟುಂಬಕ್ಕೆ ಸ್ವಲ್ಪ ಸಮಾಧಾನತರಿಸಿದೆ.

   ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ಜಾಗದಲ್ಲೇ ಸ್ಮಾರಕ ನಿರ್ಮಿಸಲು ಒತ್ತಾಯ

   ಇದೀಗ ಮಂಡ್ಯದ ಗೋಬಿಮಂಚೂರಿ ವ್ಯಾಪಾರಿ ಉಪ್ಪಿ ಗೋವಿಂದ ತಮ್ಮ ಒಂದು ದಿನದ ವ್ಯಾಪಾರದ ಹಣವನ್ನು ಯೋಧ ಗುರುವಿಗೆ ಸಂಪೂರ್ಣವಾಗಿ ಮೀಸಲಿರಿಸಿ ಔದಾರ್ಯತೆ ಮೆರೆದಿದ್ದಾರೆ.

   ಮಂಡ್ಯದ ಹೊಳಲು ವೃತ್ತದಲ್ಲಿ ಪ್ರತಿನಿತ್ಯ ತನ್ನದೇ ಉಪ್ಪಿ ಫಾಸ್ಟ್ ಫುಡ್ ಎಂಬ ಹೆಸರಿನ ಅಂಗಡಿಯನ್ನು ಹೊಂದಿರುವ ಗೋವಿಂದ ಅವರು ನಿನ್ನೆ ತಮ್ಮ ವ್ಯಾಪಾರವನ್ನು ಸಂಪೂರ್ಣವಾಗಿ ಯೋಧನ ಕುಟುಂಬಕ್ಕಾಗಿಯೇ ಮೀಸಲಿಟ್ಟರು.

   ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಸ್ಮಶಾನ ಮೌನ

   ಗೋಬಿಮಂಚೂರಿ, ಫ್ರೈಡ್ ರೈಸ್ ವ್ಯಾಪಾರ ಮಾಡಿ ಬಂದ ಹಣವನ್ನು ಡಬ್ಬಕ್ಕೆ ಹಾಕಲು ಹೇಳಿದರು. ಇನ್ನು ಹಲವರು ತಿನ್ನದೆಯೇ ಹಾಗೆಯೇ ಡಬ್ಬಕ್ಕೆ ಹಾಕಿದರು. ಮತ್ತೆ ಕೆಲವರು ತಿಂದು ಅಧಿಕ ಮೊತ್ತದ ಹಣವನ್ನು ಹಾಕಿ ಮಾನವೀಯತೆ ಮೆರೆದರು.

   ನಾನು ಏನನ್ನಾದರೂ ಯೋಧ ಗುರು ಕುಟುಂಬಕ್ಕೆ ಕೊಡಬೇಕೆಂಬ ಆಸೆಯಿತ್ತು. ನಿನ್ನೆ ವ್ಯಾಪಾರವನ್ನು ಯೋಧ ಗುರುವಿಗೆ ಪೂಜೆ ಸಲ್ಲಿಸಿ ಆರಂಭಿಸಿದೆ. ದೇಶ ಕಾಯುವ ಮಕ್ಕಳಿಗೆ ನಾವು ನೆರವಾಗಬೇಕು. ನಾವಂತೂ ದೇಶ ಕಾಯುವುದಿಲ್ಲ. ಆದರೆ ಈ ರೀತಿ ಸಹಾಯ ಮಾಡುವುದರಿಂದ ಅವರ ಕುಟುಂಬಕ್ಕೆ ನೆರವಾಗುತ್ತದೆ.

   ಸರಕಾರಿ ಗೌರವದೊಂದಿಗೆ ಕೆ.ಎಂ.ದೊಡ್ಡಿಯಲ್ಲಿ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ

   ನಾನು ಮಾಡುವುದನ್ನು ನೋಡಿ ಇತರರು ಕೂಡ ಇದೇ ರೀತಿ ಮಾಡಬೇಕು. ಈ ಹಣವನ್ನು ಅವರ ಕುಟುಂಬಕ್ಕೆ ತಲುಪಿಸಿದ್ದೇನೆ ಎಂಬ ಸಂತಸ ನನಗಿದೆ ಎನ್ನುತ್ತಾರೆ ಉಪ್ಪಿ ಗೋವಿಂದ.

   English summary
   Gobi stall trader Uppi govinda helped to martyr guru family. In order to help on wednesday he selled a gobhi manchuri, fried rice at Mandya holalu circle.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X