Get Updates
Get notified of breaking news, exclusive insights, and must-see stories!

ಶ್ರೀರಂಗಪಟ್ಟಣ: BJP ಟಿಕೆಟ್‌ ಆಕಾಂಕ್ಷಿ ಭಾವಚಿತ್ರವಿರುವ 500ಕ್ಕೂ ಹೆಚ್ಚು ಗಿಫ್ಟ್‌ ಬ್ಯಾಗ್‌ಗಳು ಚುನಾವಣಾ ಸಿಬ್ಬಂದಿ ಪಶಕ್ಕೆ

ಮಂಡ್ಯ, ಮಾರ್ಚ್‌, 23: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಭಾರಿ ಕಸರತ್ತುಗಳು ನಡೆಸುತ್ತಿದ್ದಾರೆ. ಹಾಗೆಯೇ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಸ್.ಸಚ್ಚಿದಾನಂದ ಭಾವಚಿತ್ರವಿರುವ ಉಡುಗೊರೆ ಭಾಗ್ಯದ ಬ್ಯಾಗ್‌ಗಳನ್ನು ಹಂಚಲಾಗಿತ್ತು. ಈ ವೇಳೆ ಚುನಾವಣಾ ಸಿಬ್ಬಂದಿ ದಾಳಿ ನಡೆಸಿ ಆ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದೆ.

ಶಿಸ್ತಿನ ಪಕ್ಷವೆಂದೇ ಹೆಸರಾಗಿರುವ ಬಿಜೆಪಿಯಿಂದಲೂ ಆಮಿಷದ ರಾಜಕಾರಣ ಶುರುವಾಗಿದ್ದು, ಉಡುಗೊರೆಯ ರಾಜಕಾರಣ ಇದಕ್ಕೆ ಸಾಕ್ಷಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ, ನೇರಳಕೆರೆ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಚುನಾವಣಾ ಸಿಬ್ಬಂದಿ ದಾಳಿ ನಡೆಸಿದ್ದು, ಈ ವೇಳೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಭಾವಚಿತ್ರವಿರುವ ನೂರಾರು ಬ್ಯಾಗ್‌ಗಳನ್ನು ಪತ್ತೆಯಾಗಿವೆ.

Gift politics from BJP in Srirangapatna: Election commission staff seized more than 500 Gift bags

ಗಿಫ್ಟ್‌ ಬ್ಯಾಗ್‌ಗಳು ಪೊಲೀಸರ ವಶಕ್ಕೆ

ಪತ್ತೆಯಾದ ಬ್ಯಾಗ್‌ಗಳಲ್ಲಿ ಅಪಾರ ಪ್ರಮಾಣದ ಉಡುಗೊರೆಗಳನ್ನು ಇಡಲಾಗಿದೆ. ಮಹಿಳೆಯರಿಗೆ ಹಂಚಲು ಸೀರೆ, ತಟ್ಟೆ, ಅರಿಶಿನ-ಕುಂಕುಮ ಹೊಂದಿದ್ದ ಬ್ಯಾಗ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ನೇರಳೆಕೆರೆ ಗ್ರಾಮದ ಬಿಜೆಪಿ ಮುಖಂಡ ಜವರೇಗೌಡರ ಮನೆಯಲ್ಲಿದ್ದ 400 ಬ್ಯಾಗ್‌ಗಳು ಹಾಗೂ ಕೊಡಿಯಾಲ ಗ್ರಾಮದ ರೈಸ್‌ ಮಿಲ್‌ನಲ್ಲಿ 180 ಬ್ಯಾಗ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್. ಸಚ್ಚಿದಾನಂದ ಅವರ ಭಾವಚಿತ್ರವಿರುವ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದು, ಮನೆ ಹಾಗೂ ರೈಸ್ ಮಿಲ್ ಮಾಲೀಕನ ವಿರುದ್ಧಅರಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ನಿರ್ಧಾರ ಮುಂದಾಗಿದ್ದಾರೆ. ಹಾಗೆಯೇ ಬೇರೆಡೆಯೂ ಕೂಡ ಪೊಲೀಸ್ ಕಾರ್ಯಾಚರಣೆ ಭರದಿಂದ ಸಾಗಿದೆ.

Gift politics from BJP in Srirangapatna: Election commission staff seized more than 500 Gift bags

ಅಕ್ರಮವಾಗಿ ಹಣ ಸಾಗಾಟ

ಯಾವುದೇ ದಾಖಲಾತಿ ಇಲ್ಲದೇ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟ್‌ನಲ್ಲಿ ನಡೆದಿತ್ತು. ಕೇರಳದ ಎರ್ನಾಕುಲಂ ನಿವಾಸಿ ಸಜಿ ಬಿನ್ ವರ್ಗೀಸ್ ಹಣ ಸಾಗಾಟ ಮಾಡುತ್ತಿದ್ದ ಆರೋಪಿಯಾಗಿದ್ದಾನೆ. ದಾಖಲೆ ಇಲ್ಲದೆ ಗುಂಡ್ಲುಪೇಟೆ ಕಡೆಗೆ ಹಣ ಸಾಗಾಟ ಮಾಡುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಚಾಮರಾಜನಗರ ಪೂರ್ವ ಠಾಣೆ ಪಿಐ ಶ್ರೀಕಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯಿಂದ 45 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಆರೋಪಿ ಎನ್ನಲಾದ ಸಜಿ ಬಿನ್ ವರ್ಗೀಸ್‌ ವಿರುದ್ಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಬಳಿಯಿದ್ದ ಕಾರನ್ನೂ ಕೂಡ ಜಪ್ತಿ ಮಾಡಿದ್ದಾರೆ.

ಹೈ ಅಲರ್ಟ್ ಆದ ಅಬಕಾರಿ ಇಲಾಖೆ

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಮದ್ಯ, ಹಣ ಹಂಚುವ ಕಾರ್ಯ ಹೆಚ್ಚಾಗಿದೆ. ಇದನ್ನರಿತ ಚಾಮರಾಜನಗರ ಅಬಕಾರಿ ಇಲಾಖೆಯು ಹೈ ಅಲರ್ಟ್ ಆಗಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿದೆ. ಚುನಾವಣೆ ಹತ್ತಿರ ಬಂತೆಂದರೆ ಸಾಕು ಮದ್ಯ, ಹಣ ಹಂಚುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಎಚ್ಚೆತ್ತ ಅಬಕಾರಿ ಇಲಾಖೆ ಈಗಿನಿಂದಲೇ ಕಾರ್ಯಚರಣೆ ಮುಂದುವರೆಸಿದೆ.

ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು, ಅಕ್ರಮ ಮದ್ಯ ಹಂಚಿಕೆ ಆಗಬಾರದೆಂದು ಈಗಿನಿಂದಲೇ ಅಲರ್ಟ್ ಆಗಿರುವ ಅಬಕಾರಿ ಇಲಾಖೆ ಕಳೆದ ಒಂದು ತಿಂಗಳಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 115 ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ 58 ಜನರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ‌.

ಕಳೆದ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 115 ಕಡೆ ದಾಳಿ ನಡೆಸಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 58 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಸಂಬಂಧ 85 ಪ್ರಕರಣಗಳು ಕೂಡ ದಾಖಲಾಗಿದ್ದು, ಕಾರ್ಯಾಚರಣೆ ವೇಳೆ 96 ಲೀಟರ್‌ ಮದ್ಯ 1 ಲೀಟರ್‌ ಬಿಯರ್ ಸೇರಿದಂತೆ 3 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಶಪಡಿಸಿಕೊಂಡ ಮದ್ಯ, ವಾಹನಗಳ ಒಟ್ಟು ಮೌಲ್ಯವೂ ಒಂದೂವರೆ ಲಕ್ಷ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಹಳೇ ಹಾಗೂ ಹೊಸ ಆರೋಪಿಗಳು ಸೇರಿದಂತೆ ಒಟ್ಟು 40 ಆರೋಪಿಗಳಿಂದ ಬಾಂಡ್ ಅನ್ನು ಅಬಕಾರಿ ಇಲಾಖೆ ಪಡೆದಿದೆ. ಅಷ್ಟೇ ಅಲ್ಲದೇ ಕೊಳ್ಳೇಗಾಲ ತಾಲೂಕಿನಲ್ಲಿ 10, ಚಾಮರಾಜನಗರ ತಾಲೂಕಿನಲ್ಲಿ 12, ಗುಂಡ್ಲುಪೇಟೆ ತಾಲೂಕಿನಲ್ಲಿ 14 ಸೂಕ್ಷ್ಮ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ.

ಯಳಂದೂರಿನ ಗುರುಕೃಪ ವೈನ್ಸ್ ಎಂಬ ಸನ್ನದಿಗೆ ದಿಢೀರ್ ದಾಳಿ ನಡೆಸಿ ದಾಸ್ತಾನು ಸಂಖ್ಯೆ ತಾಳೆಯಾಗದಿರುವುದರಿಂದ 1555 ಲೀಟರ್‌ ಮದ್ಯ, 670 ಲೀಟರ್‌ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 8 ಲಕ್ಷ ರೂಪಾಯಿ ಎಂದು ಅಬಕಾರಿ ಆಯುಕ್ತರಾದ ನಾಗಶಯನ ಮಾಹಿತಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+