ಕುರುಬರಹಳ್ಳಿ ರೌಡಿ ಪ್ರಶಾಂತ್ ಕೊಲೆ ಆರೋಪಿಗಳ ಬಂಧನ

ಮಂಡ್ಯ, ಜೂನ್ 11: ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿ ರೌಡಿಶೀಟರ್ ಪ್ರಶಾಂತ್ (30) ಎಂಬಾತನನ್ನು ನಾಗಮಂಗಲದಲ್ಲಿ ಕೊಲೆ ಮಾಡಿದ್ದು, ಈ ಸಂಬಂಧ ನಾಲ್ವರನ್ನು ಬಿಂಡಿಗನವಿಲೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬೆಂಗಳೂರಿನ ಶ್ರೀಕಾಂತ್, ದೇವರಾಜು, ಜಾಕಿ ಉ. ಅಜಯ್ ಹಾಗೂ ಬಿಂಡಿಗನವಿಲೆ ಗ್ರಾಮದ ಶ್ರೀಧರ್ ಗೌಡ ಎನ್ನಲಾಗಿದೆ. ರೌಡಿಶೀಟರ್ ಪ್ರಶಾಂತ್ ಎಂಬಾತನಿಗೂ ಇನ್ನೊಂದು ಗುಂಪಿನ ಶ್ರೀಕಾಂತ್ ಎಂಬಾತನ ನಡುವೆ ಕಿರಿಕ್‍ಗಳಾಗುತ್ತಿದ್ದವು.

Four arrested in Kurubarahalli rowdy sheeter Prashanth murder case

ಪ್ರಶಾಂತ್ ನನ್ನು ಮುಗಿಸಲೇಬೇಕೆಂಬ ತೀರ್ಮಾನಕ್ಕೆ ಬಂದಿದ್ದ ಶ್ರೀಕಾಂತ್ ತನ್ನ ಸಹಚರರಾದ ದೇವರಾಜು, ಅಜಯ್, ಬಿಂಡಿಗನವಿಲೆ ಗ್ರಾಮದ ಶ್ರೀಧರ್ ಗೌಡ ಅವರೊಂದಿಗೆ ಜೂ.6 ರಂದು ನಾಗಮಂಗಲ ತಾಲೂಕಿನ ನಾಗತಿಹಳ್ಳಿಗೆ ಆರೋಪಿಗಳು ರೌಡಿಶೀಟರ್ ಪ್ರಶಾಂತ್ ಬೈಕ್ ನಲ್ಲಿ ಬರುತ್ತಿದ್ದಂತೆಯೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಬಿಂಡಿಗನವಿಲೆ ಪೊಲೀಸರು. ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹಂತಕರನ್ನು ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+