• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ನಿಖಿಲ್ ಪರ ಮತಯಾಚಿಸಿದ ದೇವೇಗೌಡ, ಕುಮಾರಸ್ವಾಮಿ

|

ಮಂಡ್ಯ, ಏ.13: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನೂ ನಾಲ್ಕೇ ದಿನ ಬಾಕಿ ಉಳಿದಿದೆ.

ಎಲ್ಲಾ ಪಕ್ಷಗಳು ಮತ ಬೇಟೆ ಆರಂಭಿಸಿದ್ದಾರೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಇಂದು ಮತಯಾಚಿಸಿದರು.

ಮಂಡ್ಯದಲ್ಲಿ ನಿಖಿಲ್‌ಗೆ ಸಿಪಿಐ(ಎಂ) ಬೆಂಬಲ, ಸುಮಲತಾಗೆ ಅಲ್ಲ

ದೇವೇಗೌಡರು ಮಾತನಾಡಿ, ಅಂಬರೀಶ್ ಮಾಡಿರುವ ಅರ್ಧ ಕೆಲಸವನ್ನು ನಾವು ಪೂರ್ಣಗೊಳಿಸಲು ಬಂದಿರುವುದಾಗಿ ಹೇಳುತ್ತಿದ್ದಾರೆ, ಯಾವ ಕೆಲಸ, ಏನು ಕೆಲಸ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಟಾಂಗ್ ನೀಡಿದರು.

ಕೆ.ಹೊನ್ನಲಗೆರೆ, ಕೆ.ಎಂ.ದೊಡ್ಡಿಯ ಭಾರತೀನಗರ ಮತ್ತಿತರ ಕಡೆ ತೆರೆದ ವಾಹನದಲ್ಲಿ ಗೌಡರು ಮತ್ತು ಕುಮಾರಸ್ವಾಮಿ ಚುನಾವಣಾ ಪ್ರಚಾರ ಕೈಗೊಂಡರು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಸಾಥ್ ನೀಡಿದರು.

ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕೆನ್ನೆಗೆ ಮುತ್ತು

ಕನ್ನಂಬಾಡಿ ಕಟ್ಟೆಯನ್ನು ವಿಶ್ವೇಶ್ವರಯ್ಯ ಕಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರದವರು ಏನು ಮಾಡಿದ್ದಾರೆ, ನಮ್ಮ ರೈತರು ಎರಡು ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ಇದ್ದಾಗ ಉಗ್ರ ಹೋರಾಟ ಮಾಡಿದ್ದೇವೆ. ನಾವು ಮಾಡಿದ ಹೋರಾಟ ರೈತರಿಗಾಗಿ ಅಲ್ಲವೇ ಎಂದರು.

English summary
Former Prime minister HD Deve Gowda and Chief Minister HD Kumaraswamy campaigned for Nikhil in Mandya today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X