ಮೇಲುಕೋಟೆ ಕ್ಷೇತ್ರದಿಂದ ದರ್ಶನ್ ಪುಟ್ಟಣ್ಣಯ್ಯ ಕಣಕ್ಕೆ
ಮೇಲುಕೋಟೆ, ಮಾರ್ಚ್ 15: ರೈತಸಂಘದ ನಾಯಕ, ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಹಾದಿಯಲ್ಲೇ ಮುಂದುವರೆಯಲು ಅವರ ಮಗ ದರ್ಶನ್ ಪುಟ್ಟಣ್ಣಯ್ಯ ನಿರ್ಧರಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ 'ಸ್ವರಾಜ್ ಇಂಡಿಯಾ'ದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ದರ್ಶನ್ ಪುಟ್ಟಣ್ಣಯ್ಯ ಇಂದು ಘೋಷಿಸಿದ್ದಾರೆ.
ಕ್ಯಾತನಹಳ್ಳಿಯ ತೋಟದಲ್ಲಿರುವ ಪುಟ್ಟಣ್ಣಯ್ಯನವರ ಸಮಾಧಿ ಮುಂದೆ ದರ್ಶನ್ ಪುಟ್ಟಣ್ಣಯ್ಯ ಈ ಘೋಷಣೆ ಮಾಡಿದ್ದಾರೆ.

"ಮೇಲುಕೋಟೆ ಕ್ಷೇತ್ರದಿಂದ 'ಸ್ವರಾಜ್ ಇಂಡಿಯಾ' ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ನಮ್ಮ ಕುಟುಂಬದಿಂದ ನಾನು ಅಥವಾ ಪುತ್ರ ಕಣಕ್ಕಿಳಿಯಬೇಕೆಂಬುದು ಕಾರ್ಯಕರ್ತರ ಒತ್ತಡವಾಗಿದೆ," ಎಂದು ಶಾಸಕ, ರೈತನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯನವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಈ ಹಿಂದೆ ಹೇಳಿದ್ದರು.
"ತಮ್ಮ ಕುಟುಂಬದಿಂದಲೇ ಯಾರಾದರೂ ಸ್ಪರ್ಧಿಸಬೇಕೇ ಅಥವಾ ಬೇರೆಯವರು ಕಣಕ್ಕಿಳಿಯಬೇಕೇ ಎಂಬ ಬಗ್ಗೆ ರೈತಸಂಘ, ಹಸಿರು ಸೇನೆ, ಸ್ವರಾಜ್ ಇಂಡಿಯಾದ ಮುಖಂಡರು ಹಾಗೂ ಕಾರ್ಯಕರ್ತರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ," ಎಂದು ಅವರು ಹೇಳಿದ್ದರು.
ಇದೀಗ ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧಿಸುವುದು ಅಂತಿಮವಾಗಿದೆ.












Click it and Unblock the Notifications