ಹುತಾತ್ಮ ಯೋಧ ಗುರು ಪುಣ್ಯತಿಥಿಯಂದೇ ಉಗ್ರರನ್ನು ಚೆಂಡಾಡಿದ ಸೇನೆ
Recommended Video

ಮಂಡ್ಯ, ಫೆ 26: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಪುಣ್ಯತಿಥಿ ಇಂದು (ಫೆ 26) ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿ ನಡೆಯಲಿದ್ದು, ಕಾಕತಾಳೀಯ ಎನ್ನುವಂತೆ, ಇಂದೇ ಭಾರತೀಯ ವಾಯುಸೇನೆ, ಪಾಕಿಸ್ತಾನದೊಳಗೆ ನುಗ್ಗಿ, ಉಗ್ರರನ್ನು ಸದೆಬಡಿದಿದೆ.
1971ರ ನಂತರ ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ, ಪಾಕಿಸ್ತಾನದ ಗಡಿದಾಟಿ ದಾಳಿ ನಡೆಸಿದೆ. ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇನ್ನಷ್ಟು ಲಭ್ಯವಾಗಬೇಕಿದೆ. ಆದರೆ, ಕಾರ್ಯಾಚರಣೆ ಹಂಡ್ರೆಡ್ ಪರ್ಸೆಂಟ್ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆಯ ಸಲಹೆಗಾರ ಅಜಿತ್ ಧೋವಲ್ ಹೇಳಿದ್ದಾರೆ.
ನಾನು ಸೈನ್ಯಕ್ಕೆ ಸೇರಿ ಪಾಪಿ ಉಗ್ರರ ರುಂಡ ಚೆಂಡಾಡ್ತಿನಿ ಎಂದು ಪುಲ್ವಾಮದಲ್ಲಿ ವೀರ ಯೋಧನಾಗಿ ಮಡಿದ ಗುರು ಪತ್ನಿ ಕಲಾವತಿ ತಮ್ಮ ಮನದಾಳದ ಮಾತುಗಳನ್ನಾಡಿದ್ದರು. ಈಗ, ಆ ಕೆಲಸವನ್ನು ಭಾರತೀಯ ಸೇನೆ ಮಾಡಿದೆ.

ಗುರು ಅವರ ಹನ್ನೊಂದನೆ ದಿನದ ತಿಥಿ ಕಾರ್ಯ ಮಂಗಳವಾರ ನಡೆಯಲಿದ್ದು, ಗುರು ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಈ ಕಾರ್ಯ ನಡೆಯಲಿದೆ. ಸಾರಿಗೆ ಸಚಿವ ಮತ್ತು ಮದ್ದೂರು ಶಾಸಕ ಡಿ ಸಿ ತಮ್ಮಣ್ಣ, ಈ ಎಲ್ಲಾ ಕಾರ್ಯದ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.
ಗುರು ತಿಥಿ ಕಾರ್ಯಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಬಂದವರಿಗೆಲ್ಲಾ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಸಿಬ್ಬಂದಿ ಗುರು ಅವರ ಅಂತ್ಯ ಸಂಸ್ಕಾರ ಸಕಲ ಗೌರವದೊಂದಿಗೆ ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ಫೆಬ್ರವರಿ 16ರಂದು ನಡೆದಿತ್ತು.
ನನ್ನ ಗಂಡನಿಗೆ ಪೊಲೀಸ್ ಡ್ರೆಸ್ ಅಂದ್ರೆ ತುಂಬಾ ಇಷ್ಟ. ಕೊನೆಗೂ ಅವರಿಷ್ಟದಂತೆ ಆ ಪೊಲೀಸ್ ಡ್ರೆಸ್ ಹಾಕೊಂಡೆ ಪ್ರಾಣ ಕೊಟ್ರು. ದೇಶಕ್ಕಾಗಿ ಹುಟ್ಟಿ, ದೇಶಕ್ಕಾಗಿ ಹೋರಾಡಿ, ದೇಶಕ್ಕಾಗಿ ಪ್ರಾಣ ಬಿಟ್ಟರು ನನ್ನ ಗಂಡ ಎಂಬ ಹೆಮ್ಮೆ ನನಗಿದೆ ಎಂದು ಗುರು ಪತ್ನಿ ಹೇಳಿದ್ದರು.












Click it and Unblock the Notifications