ವೈಭವದಿಂದ ನಡೆದ ಚಲುವನಾರಾಯಣಸ್ವಾಮಿ ತೊಟ್ಟಿಲಮಡು ಜಾತ್ರಾ ಮಹೋತ್ಸವ

ಮೇಲುಕೋಟೆ, ನವೆಂಬರ್‌ 23: ಶ್ರೀಚೆಲುವನಾರಾಯಣಸ್ವಾಮಿಯವರ ಕಾರ್ತಿಕಮಾಸದ ತೊಟ್ಟಿಲಮಡು ಜಾತ್ರಾಮಹೋತ್ಸವವೆಂದೇ ಪ್ರಖ್ಯಾತವಾದ ''ಅಷ್ಠತೀರ್ಥೋತ್ಸವ'' ಬುಧವಾರ ವೈಭವದಿಂದ ನೆರವೇರಿತು.

ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಮತ್ತು ದಶಮಿತಿಥಿ ಕೂಡಿದ ವಿಶೇಷ ದಿನದಂದು ಶ್ರೀಚೆಲುವನಾರಾಯಣನ ಬಂಗಾರದ ಪಾದುಕೆಗೆ ಪಂಚಕಲ್ಯಾಣಿ, ವೈಕುಂಠಗಂಗೆ ಹಾಗೂ ಎಲ್ಲಾ ಎಂಟು ತೀರ್ಥಗಳಲ್ಲಿ ವೇದಘೋಷದೊಂದಿಗೆ ಅಭಿಷೇಕ ನೆರವೇರಿಸಲಾಯಿತು.

Chaluvanarayanaswamys Tottilamadu Jatra Mahotsava held with grandeur

ರಾಜ್ಯದ ವಿವಿಧಭಾಗಗಳು ಮತ್ತು ಆಂದ್ರಪ್ರದೇಶದಿಂದ ಭಕ್ತರು ಹಾಗೂ ಮಕ್ಕಳಭಾಗ್ಯ ಅಪೇಕ್ಷಿಸಿ ಮಡಿಲು ತುಂಬಿ ಹರಕೆ ಹೊತ್ತ ನೂರಾರು ದಂಪತಿಗಳು, ಕಂಕಣಭಾಗ್ಯ ಅಪೇಕ್ಷಿತರು, ಪಾದುಕೆಯ ಪಲ್ಲಕ್ಕಿಯೊಡನೆ 20ಕಿಮಿಗೂ ಹೆಚ್ಚು ಗಿರಿಶಿಖರಗಳ ದಾರಿಯನ್ನು ಕ್ರಮಿಸಿ ಅಷ್ಠತೀರ್ಥಗಳಲ್ಲಿ ಪವಿತ್ರಸ್ನಾನ ಮಾಡಿದರು. ಇಡೀ ದಿನವೇದಪಾರಾಯಣ ನಡೆದರೆ ರಾತ್ರಿ ಶ್ರೀಯೋಗಾನರಸಿಂಹಸ್ವಾಮಿ ಗಿರಿಪ್ರದಕ್ಷಿಣೆವೇಳೆ ವಿಷ್ಣುಸಹಸ್ರನಾಮ ಪಾರಾಯಣಮಾಡಲಾಯಿತು.

ಅಷ್ಠತೀರ್ಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಬೆಳಗಿನಜಾವ 5-30ಕ್ಕೆ ನಿತ್ಯಪೂಜಾಕೈಂಕರ್ಯಗಳನ್ನು ಆರಂಭಿಸಲಾಯಿತು. 8-30ಕ್ಕೆ ವೇದಾಂತದೇಶಿಕರ ಸನ್ನಿಧಿಗೆ ಪಾದುಕೆಯಪಲ್ಲಕ್ಕಿಯ ಮಂಟಪೋತ್ಸವ ನೆರವೇರಿತು. 9ಗಂಟೆಗೆ ಆಚಾರ್ಯರಾಮಾನುಜರನ್ನೊಳಗೊಂಡು ವಜ್ರಖಚಿತರಾಜಮುಡಿ ಉತ್ಸವ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿತು. ಅಲ್ಲಿನ ಗಜೇಂದ್ರವರದನ ಸನ್ನಿಧಿಯ ಬಳಿ ಸ್ವಾಮಿಯ ಪಾದುಕೆಗೆ ಲೋಕಲ್ಯಾರ್ಥವಾಗಿ ಹಾಗೂ ಹರಕೆಹೊತ್ತಭಕ್ತರ ಇಷ್ಠಾರ್ಥನೆರವೇರಲಿ ಎಂದು ಪ್ರಾರ್ಥಿಸಿ ವಿಶೇಷ ಆರಾಧನೆಮಾಡಿ ಕಲ್ಯಾಣಿಯಲ್ಲಿ ಅಭಿಷೇಕ ಮಾಡಲಾಯಿತು. ಸಾವಿರಾರು ಭಕ್ತರು ಕಲ್ಯಾಣಿಯಲ್ಲಿ ಪವಿತ್ರಸ್ನಾನಮಾಡಿದ ನಂತರ ಅಷ್ಠತೀರ್ಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗಿರಿಶಿಖರಗಳ ಮಧ್ಯೆ ಇರುವೆಯ ಸಾಲಿನಂತೆ ಸಾಲಾಗಿ ಸಾಗುತ್ತಿದ್ದ ಭಕ್ತಸಮೂಹ ದೃಶ್ಯವೈಭವ ಸೃಷ್ಠಿಸಿ ಭಕ್ತಿಯ ಚಿಲುಮೆ ಉಕ್ಕಿಸುತ್ತಿತ್ತು. ಪ್ರಥಮವಾಗಿ ವೇದಪುಷ್ಕರಣಿಯಲ್ಲಿ ನಂತರ 500 ಅಡಿ ಎತ್ತರದಲ್ಲಿರುವ ರಾಮ ಸೀತೆಗಾಗಿ ಬಾಣಬಿಟ್ಟು ತೀರ್ಥ ತರಿಸಿದ ಧನುಷ್ಕೋಟಿಯಲ್ಲಿ ಸ್ನಾನ ಮಾಡಿದರು. ನಂತರ ಬೆಟ್ಟ ಇಳಿದು ಬೃಹತ್ ಬೆಟ್ಟದ ಸಾಲುಗಳಲ್ಲಿ ಸಾಗಿ ಯಾದವಾತೀರ್ಥ, ದರ್ಭತೀರ್ಥ, ಪಲಾಶತೀರ್ಥ ಪದ್ಮತೀರ್ಥದಲ್ಲಿ ಅಭಿಷೇಕದಲ್ಲಿ ಪಾಲ್ಗೊಂಡರು ಪಲಾಶತೀರ್ಥದಲ್ಲಿ ಯತಿರಾಜದಾಸರ್ ಗುರುಪೀಠದಿಂದ ಭಕ್ತರಿಗೆ ಹಾಲು ಹಣ್ಣು ವಿತರಿಸಲಾಯಿತು.

ಮದ್ಯಾಹ್ನ 3 ಗಂಟೆಗೆ ನರಸಿಂಹ ಮತ್ತು ನಾರಾಯಣ ತೀರ್ಥದಲ್ಲಿ ಅಭಿಷೇಕ ನೆರವೇರಿತು ಸಂಜೆ 5ಗಂಟೆ ಸುಮಾರಿಗೆ ತೊಟ್ಟಿಲಮಡು ವೈಕುಂಠಗಂಗೆಯಲ್ಲಿ ಸಮಾರೋಪ ಅಭಿಷೇಕ ನೆರವೇರಿತು. ಈ ವೇಳೆ ಮೇಲುಕೋಟೆಯ ವಿಶಿಷ್ಠ ಪ್ರಸಾದವಾದ ಕದಂಬ ಮತ್ತು ಮೊಸರನ್ನವನ್ನು ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ನೀಡಲಾಯಿತು, ವಿವಿಧ ಜನಾಂಗದವತಿಯಿಂದ ಪ್ರಸಾದವಿತರಣೆ ಸೇವೆ ಅನೂಚಾನ ಸಂಪ್ರದಾಯದಂತೆ ಏರ್ಪಡಿಸಲಾಗಿತ್ತು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಎಸ್ ಮಹೇಶ್ ವಿಶೇಷವಾಗಿ ಶ್ರಮಿಸಿ ಅಷ್ಠತೀರ್ಥಗಳು ಹಾಗೂ ಪಲ್ಲಕ್ಕಿ ಸಾಗುವ ಮಾರ್ಗದಲ್ಲಿ ಶುಚಿತ್ವಮಾಡಿದ್ದರೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಮತ್ತು ಜನಪ್ರತಿನಿಧಿಗಳ ತಂಡ ಆಸಕ್ತಿವಹಿಸಿ ತೊಟ್ಟಿಲಮಡುಬಳಿ, ಕುಡಿಯುವ ನೀರು, ಸ್ವಚ್ಚತೆ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿತ್ತು.

ಮೇಲುಕೋಟೆ ಇನ್ಸ್‌ಪೆಕ್ಟರ್ ಸಿದ್ಧಪ್ಪ ಪೊಲೀಸ್ ಭದ್ರತೆ ಮಾಡಿದ್ದರು, ಉತ್ಸವದ ಧಾರ್ಮಿಕ ಕೈಂಕರ್ಯಗಳು ಸಮಯಕ್ಕೆ ಸರಿಯಾಗಿ ನಡೆಯಲು ದೇವಾಲಯದ ಪಾರುಪತ್ತೇಗಾರರುಗಳಾದ ಸ್ಥಾನೀಕಂ ಶ್ರೀನಿವಾಸನರಸಿಂಹನ್‌ಗುರೂಜಿ ಮತ್ತು ಪರಿಚಾರಕ ಎಂ.ಎನ್ ಪಾರ್ಥಸಾರಥಿ ಸಿಬ್ಬಂದಿಗಳ ಸಹಕಾರದಲ್ಲಿ ಶ್ರಮಿಸಿದ್ದರು. ರಾಜಮುಡಿ ಬ್ರಹ್ಮೋತ್ಸವ 25ರಶನಿವಾರ ತೀರ್ಥಸ್ನಾನ ನೆರವೇರುವುದರೊಂದಿಗೆ ಮುಕ್ತಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+