ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ:ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಡಿಬಾಸ್

|
Google Oneindia Kannada News

Recommended Video

ಮಂಡ್ಯದಲ್ಲಿ ರಣಕಹಳೆ ಊದಿದ ಡಿ ಬಾಸ್..!

ಮಂಡ್ಯ, ಏಪ್ರಿಲ್ 1: ಇಂದಿನಿಂದ ಮಂಡ್ಯ ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಸುಮಲತಾ ಅಂಬರೀಷ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕೈಗೊಂಡಿದ್ದಾರೆ. ದಾಸ ದರ್ಶನ್ ಬಿರು ಬಿಸಿಲನ್ನು ಲೆಕ್ಕಿಸದೇ ಮತ ಯಾಚಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಅರಳಿಕಟ್ಟೆಯಿಂದ ದರ್ಶನ್ ಪ್ರಚಾರ ಆರಂಭಿಸಿದ್ದು, ಕೆಆರ್ಎಸ್, ಬೆಳಗೊಳ ಸೇರಿದಂತೆ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

'ನಟ ದರ್ಶನ್ ಅವರನ್ನು ಕೆಣಕಿದರೆ ಸುಮ್ಮನಿರಲ್ಲ, ಹುಷಾರ್''ನಟ ದರ್ಶನ್ ಅವರನ್ನು ಕೆಣಕಿದರೆ ಸುಮ್ಮನಿರಲ್ಲ, ಹುಷಾರ್'

ಕಣದಲ್ಲಿ ಈ ಬಾರಿ ಮೂರ್ನಾಲ್ಕು ಸುಮಲತಾ ಹೆಸರುಗಳಿವೆ. ಹಾಗಾಗಿ ನಾನು ಹೆಸರನ್ನು ಮತ್ತು ಕ್ರಮ ಸಂಖ್ಯೆಯನ್ನು ಒತ್ತಿ ಹೇಳುತ್ತಿದ್ದೇನೆ. ಗೊಂದಲ ಸೃಷ್ಟಿಸಲು ಈ ಬಾರಿ ಇದನ್ನು ಮಾಡಿದ್ದಾರೆ.ಆ ಕಾರಣದಿಂದ ನೋಡಿ ಮತ ಚಲಾಯಿಸಿ. ಹಿರಿಯರು, ವೃದ್ದರು ಮತ್ತು ಅನಕ್ಷರಸ್ಥರಿಗೆ ಯುವಕರು ತಿಳಿ ಹೇಳಿ. ಯಾವುದೇ ಕಾರಣಕ್ಕೂ ಮತದಾರರು ಗೊಂದಲಕ್ಕೀಡಾಗಬಾರದು ಎಂದು ತಿಳಿಸಿದರು.

Challenging Star Darshan started campaign in favor of Sumalatha

ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ. ಯಾವುದೇ ಅಧಿಕಾರದ ದಾಹವಿಲ್ಲದೆ ಎಲೆಕ್ಷನ್ ಗೆ ಅಮ್ಮ ನಿಂತಿದ್ದಾರೆ. ಎಲ್ಲಾ ರೀತಿಯ ಅಧಿಕಾರವನ್ನು ಅಪ್ಪಾಜಿ ಅನುಭವಿಸಿದ್ದಾರೆ. ಕ್ಷೇತ್ರದ ಸಾಕಷ್ಟು ಅಭಿವೃದ್ಧಿಗಳು ಅಮ್ಮನಿಂದ ಆಗಬೇಕಿದೆ. ಹೀಗಾಗಿ ಸುಮಲತಾ ಅಮ್ಮನಿಗೆ ನಿಮ್ಮ ಮತ ನೀಡಿ ಎಂದು ದರ್ಶನ್ ಮನವಿ ಮಾಡಿದರು.

Challenging Star Darshan started campaign in favor of Sumalatha

 ಯಶ್-ದರ್ಶನ್ ಬಾಡಿಗೆ ಜೋಡೆತ್ತುಗಳು: ಸಚಿವ ನಾಡಗೌಡ ಯಶ್-ದರ್ಶನ್ ಬಾಡಿಗೆ ಜೋಡೆತ್ತುಗಳು: ಸಚಿವ ನಾಡಗೌಡ

ಇದೇ ವೇಳೆ ಊರಿನಲ್ಲಿ ಎಲ್ಲರೂ ತಂಬಿಟ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ದರ್ಶನ್, ನನ್ನ ಬಾಯಲ್ಲಿ ನೀರು ಬರುತ್ತಿದೆ, ತಂಬಿಟ್ಟು ತಿನ್ನಬೇಕೆಂಬ ಆಸೆ ಆಗುತ್ತಿದೆ. ನನಗೂ ತಂಬಿಟ್ಟು ಕೊಡಿ ತಿಂದುಕೊಂಡು ಹೋಗುತ್ತೇನೆ" ಎಂದು ಗ್ರಾಮಸ್ಥರಲ್ಲಿ ಕೇಳಿಕೊಂಡರು. ದರ್ಶನ್ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ತಂಬಿಟ್ಟು ಕೊಟ್ಟರು.

English summary
Challenging Star Darshan started campaign in favor of independent candidate Sumalatha Ambareesh from Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X