ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಪು ವ್ಯತಿರಿಕ್ತವಾದರೆ ಉಗ್ರ ಹೋರಾಟ : ಮಾದೇಗೌಡ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್ 18 : ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದ ವಿರುದ್ಧವೇ ಆದೇಶ ನೀಡುತ್ತಿದ್ದಾರೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಪದೇ ಪದೇ ನಮ್ಮನ್ನು ಪರೀಕ್ಷೆ ಮಾಡುತ್ತಿದೆ. ಗಾಳಿ, ನೀರು, ಬೆಳಕು ಯಾರ ಸ್ವತ್ತೂ ಅಲ್ಲ. ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯಾ? ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದು, ನಾಳೆವರೆಗೂ ಆದೇಶ ಪಾಲಿಸೋಣ. ನಾಳಿನ ಆದೇಶ ಏನು ಬರುತ್ತದೋ ಕಾದು ನೋಡೋಣ. ಅಲ್ಲಿವರೆಗೂ ತಾಳ್ಮೆಯಿಂದ ಇರುತ್ತೇವೆ ಎಂದು ಅವರು ನುಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡುತ್ತೀವಿ. ಬುಧವಾರದ ಆದೇಶ ಏನಾದರೂ ಕರ್ನಾಟಕದ ವಿರುದ್ಧವಾಗಿ ಬಂದರೆ, ಸರಕಾರ ಮತ್ತೆ ನೀರು ಬಿಡುವ ನಿರ್ಧಾರ ತೆಗೆದುಕೊಂಡರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. [ಲಬೋಲಬೋ ಎಂದು ಹೊಯ್ದುಕೊಂಡ ಮಂಡ್ಯದ ರೈತರು]

Cauvery issue : G Madegowda warns Siddaramaiah govt

ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್

ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರವೂ ಕಾವೇರಿ ನದಿ ನೀರಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾದ್ಯಂತ ಸಂಪೂರ್ಣ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸುಮಾರು 2700 ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾಡಳಿತ ನಿಯೋಜನೆ ಮಾಡಿದೆ. ಕೃಷ್ಣರಾಜ ಸಾಗರ ಜಲಾಶಯದ ಬಳಿ ಒಬ್ಬ ಎಎಸ್ಪಿ, 10 ಮಂದಿ ಸಿಪಿಐ, ಎರಡು ಆರ್‌ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಹೆದ್ದಾರಿ ತಡೆಯುವವರ ಮೇಲೆ ನಿಗಾ ವಹಿಸುವುದಕ್ಕಾಗಿ 6 ಸಂಚಾರಿ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದರು. [ತಮಿಳುನಾಡಿಗೆ ದಿನ ನೀರು ಬಿಡಿ ಎಂದ ಸುಪ್ರೀಂ, ಓಕೆ ಎಂದ ಕರ್ನಾಟಕ]

ಕೆ.ಆರ್.ಎಸ್. ಇಂದಿನ ಮಟ್ಟ ಹೀಗಿದೆ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ - 81.55 ಅಡಿ (11.4 ಟಿಎಂಸಿ)
ಒಳ ಹರಿವು - 1127 ಕ್ಯೂಸೆಕ್ಸ್
ಹೊರ ಹರಿವು - 240 ಕ್ಯೂಸೆಕ್ಸ್

English summary
Cauvery Hitarakshana Samiti president G Madegowda has warned Karnataka that the farmers of Mandya will intensify protest again if Supreme Court of India passes order against the interest of Mandya farmers and Siddaramaiah releases water to Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X