ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ: ಕಂಬಳಿ ಹುಳುವಿನ ಉಪಟಳ-ಹೈರಾಣಾದ ಗ್ರಾಮೀಣ ಜನತೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜುಲೈ 21: ಜಿಲ್ಲೆಯಲ್ಲಿ ಹಲವೆಡೆ ಕಂಬಳಿ ಹುಳುವಿನ ಕಾಟ ತೀವ್ರಗೊಂಡಿದ್ದು, ಹುಳಗಳು ಗ್ರಾಮೀಣ ಭಾಗದ ಜನಜೀವನದ ಮೇಲೆ ನೇರ ಪರಿಣಾಮ ಉಂಟುಮಾಡಿದ್ದು, ಪರಿಹಾರಕ್ಕಾಗಿ ಹಾತೊರೆಯುವಂತಾಗಿದೆ. ಮಂಗಳೂರು ಹೆಂಚಿನ ಮನೆಯವರಿಗೆ ಮಾತ್ರ ಕಂಬಳಿ ಉಪಟಳ ಕಡಿಮೆ ಇದೆ. ಆದರೆ ನಾಡಂಚಿನ ಮನೆಯವರಿಗೆ ಕಂಬಳಿ ಹುಳುವಿನ ಉಪಟಳವೇ ಹೆಚ್ಚಾಗಿದೆ. ಇದರಲ್ಲಿ ಬೀದಿ, ಮನೆಯ ಜಗುಲಿ ಹಾಗೂ ಗೋಡೆಗಳ ಮೇಲೆ ಸೇರಿದಂತೆ ಹೆಂಚುಗಳ ಮೇಲೆ ಮತ್ತು ಕೆಳಗೆ ಕಂಬಳಿ ಹುಳು ಆಶ್ರಯ ಪಡೆದು ಕುಟುಂಬಸ್ಥರು ಬೆಚ್ಚಿ ಬೀಳುವಂತಾಗಿದೆ.

ಕಂಬಳಿ ಹುಳುವಿನ ಉಪಟಳವು ಇಷ್ಟಕ್ಕೆ ಕಡಿಮೆ ಆಗುವುದಿಲ್ಲ, ಮನೆಯ ಹೊರಗೆ ಕಾಣುವ ಹುಳಗಳನ್ನು ಸಾಯಿಸಲಾಗುತ್ತದೆ. ಆದರೆ ಹೆಂಚಿನ ಮೇಲೆ ಇರುವ ಹುಳುಗಳನ್ನು ಸಾಹಿಸುವುದು ದುಸ್ಸಾಹಸವೇ ಸರಿ. ಕಂಬಳಿ ಹುಳಗಳಿಂದ ರಕ್ಷಣೆ ಪಡೆಯಲು ಕ್ರಿಮಿ ನಾಶಕ ಸಿಂಪಡಣೆ, ಲಕ್ಷ್ಮಣ ರೇಖೆ ಸೇರಿದಂತೆ ಇತರೆ ಕ್ರಿಮಿ ನಾಶಕ ಬಳಸಿದರೂ ಈ ಹುಳಗಳು ಕಡಿಮೆ ಆಗುತ್ತಿಲ್ಲ ಎಂದು ಕಂಬಳಿ ಹುಳದಿಂದ ಹೈರಾಣಾದ ರಾಗಿಮುದ್ದನಹಳ್ಳಿ ದಿನೇಶ್, ದೇವಮ್ಮ, ಚಿಕ್ಕತಾಯಮ್ಮ, ಮಧು, ನವೀನ್, ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರಿಗೆ ವರದಾನವಾಗಲಿದೆ ದ್ರವರೂಪದ ನ್ಯಾನೋ ಯೂರಿಯಾ ಗೊಬ್ಬರರೈತರಿಗೆ ವರದಾನವಾಗಲಿದೆ ದ್ರವರೂಪದ ನ್ಯಾನೋ ಯೂರಿಯಾ ಗೊಬ್ಬರ

ಅಡುಗೆ ತಯಾರಿಗೂ ಕಷ್ಟ
ಅಡುಗೆ ಮನೆಯಲ್ಲಿ ಅಡುಗೆ ತಯಾರಿ ನಡೆಸುವುದು ಕಷ್ಟವಾಗಿದೆ, ಮನೆಯ ಹೆಂಚುಗಳನ್ನೆಲ್ಲಾ ಆವರಿಸಿಕೊಂಡಿರುವ ಕಂಬಳಿ ಹುಳುಗಳು ಎಲ್ಲಿ ಅಡುಗೆ ತಯಾರಿ ಸಂದರ್ಭದಲ್ಲಿ ಪಾತ್ರೆಯೊಳಗೆ ಸೇರಿಕೊಂಡಿವೆಯೋ ಎಂಬ ಆತಂಕವೂ ಇದೆ. ಕೆಲವೊಮ್ಮೆ ವಿದ್ಯುತ್ ಇಲ್ಲದ ರಾತ್ರಿ ಸಮಯದಲ್ಲಿ ಅಡುಗೆ ತಯಾರಿಸುವುದು ಸಹ ಕಷ್ಟ ಎನಿಸಿದೆ. ಮನೆಯೊಳಗಿನ ಅಲ್ಮೇರಾಗಳಲ್ಲಿ ಜೋಡಿಸಿಟ್ಟಿರುವ ಬಟ್ಟೆಗಳ ಮಧ್ಯದಲ್ಲೂ ಸಹ ಹುಳುಗಳು ಕಂಡುಬರುತ್ತಿದ್ದು, ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Caterpillar Create many Problems in Mandya District

ಗ್ರಾಮ ಮಚಾಯಿತಿ ಸದಸ್ಯರ ಗಮನಕ್ಕೆ ತರಲಾಗಿ, ಪಂಚಾಯಿತಿಯ ಪಿಡಿಒ ಸೇರಿದಂತೆ ಸಿಬ್ಬಂದಿ ಬಂದು ಮನೆಯ ಗೋಡೆ ಮೇಲಿರುವ ಕಂಬಳಿ ಹುಳುವಿನ ಫೋಟೋ ತೆಗೆದುಕೊಂಡು ಹೋಗಿದ್ದಾರೆ ಅಷ್ಟೆ. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ವರ್ಷಕ್ಕೊಮ್ಮೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಈ ಹುಳುವಿನ ಕಾಟ ವಿಪರೀತವಾಗಿದೆ. ಇವುಗಳು ಮೈ ಸೋಕಿದರೆ ಸಾಕು ಆ ಭಾಗದಲ್ಲಿ ಕೆಂಪು ಗುಳ್ಳೆಗಳಾಗಿ ತಡೆಯಲಾರದ ನವೆ ಉಂಟಾಗುತ್ತದೆ ಎಂದು ಕಂಬಳಿ ಹುಳುವಿನಿಂದ ಬಾಧಿತರಾದ ಕುಮಾರ, ಶಿವು, ಮಹೇಶ ಅಸಮಾಧಾನ ವ್ಯಕ್ತಪಡಿಸಿದರು.

ಕಾಫಿ ಕಾಯಿ ಉದುರುವಿಕೆ, ಮುಂಗಾರಿನ ಕೊಳೆ ರೋಗಗಳ ನಿರ್ವಹಣೆ ಸಲಹೆಕಾಫಿ ಕಾಯಿ ಉದುರುವಿಕೆ, ಮುಂಗಾರಿನ ಕೊಳೆ ರೋಗಗಳ ನಿರ್ವಹಣೆ ಸಲಹೆ

ಈಗ ಮಳೆಗಾಲ ಆರಂಭವಾಗಿದೆ ಇಂತಹ ವಾತಾವರಣದಲ್ಲಿ ಕಂಬಳಿ ಹುಳುವಿನ ಉಪಟಳ ಹೆಚ್ಚಿರುತ್ತದೆ. ಬಹುತೇಕ ಗ್ರಾಮೀಣ ಭಾಗದ ನಾಡು ಹಂಚಿನ ಮನೆಗಳಲ್ಲಿ ಜಾಸ್ತಿಯಾಗಿರುತ್ತದೆ. ಈಗಾಗಲೇ ನಮ್ಮ ಭಾಗದ ಗ್ರಾಮಗಳಲ್ಲಿ ಸರ್ವೇ ಮಾಡಿದ್ದೇನೆ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈ ವಾತಾರಣವದಲ್ಲಿ ಕರಿಕಂಬಳಿ ಹುಳುಗಳು ಹೆಚ್ಚಿದ್ದು, ಬಿಸಿಲು ಬಂದ ಕ್ಷಣ ಕಡಿಮೆ ಆಗುತ್ತದೆ. ಜೊತೆಗೆ ಸಾಯುತ್ತವೆ. ಆದರೂ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಿ.ಸ್ವಾಮಿ ಹೇಳಿದರು.

ಕಾಂಕ್ರಿಟ್ ಮನೆಗಳಿಗೆ ಕರಿ ಕಂಬಳಿ ಹುಳುಗಳು ಅಷ್ಟೇನು ಇರುವುದಿಲ್ಲ, ನಾಡು ಹಂಚಿನ ಮನೆಯಲ್ಲಿ ಸಂತಾನೋತ್ಪತ್ತಿ ಇರುತ್ತದೆ. ಬಿಸಿಲು ಬಂದರೆ ಅದರ ತಾಪಮಾನಕ್ಕೆ ಹುಳುಗಳು ಸಾಯುತ್ತವೆ. ಮನೆಯ ರೂಮುಗಳಲ್ಲಿ ಹಾಗೂ ರಾಸುಗಳ ಕೊಟ್ಟಿಗೆಯಲ್ಲಿ ಜಾಸ್ತಿ ಇರುತ್ತವೆ. ಬೀದಿಯಲ್ಲಿ ಹಾಗೂ ಹೊರಾಂಡದಲ್ಲಿ ಕಂಬಳಿ ಹುಳುಗಳಿರುವ ಕಡೆ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಮನೆಯ ಒಳಗಡೆ ಸಿಂಪಡಣೆ ಮಾಡುವುದರಿಂದಲೂ ಅನಾರೋಗ್ಯ ಕಾಡಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.

Recommended Video

Rocky Pointing ಟೀಂ ಇಂಡಿಯಾ ಕೋಚ್ ಆಗಿದ್ದಿದ್ರೆ Virat Kohli ಗೆ ಏನ್ ಮಾಡ್ತಿದ್ರು? | *Cricket | OneIndia

English summary
Across the Mandya District many villagers Suffer from Caterpillar, people urged Local authorities to Solve the problem,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X