ಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ: ಶಿವರಾಮೇಗೌಡ
Recommended Video

ಮಂಡ್ಯ, ಏ 12: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಶುಕ್ರವಾರ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಒಂದೇ ಸಮನೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ದ ಹರಿಹಾಯುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಿಂದೆ ಕೂಡಾ, ಮಾತಿನ ಭರದಲ್ಲಿ ಜಾತಿ ವಿಚಾರವನ್ನು ಎತ್ತಿದ್ದ ಮಂಡ್ಯದ ಹಾಲೀ ಸಂಸದ ಶಿವರಾಮೇಗೌಡ, ಇಂದು ಮತ್ತೊಮ್ಮೆ ಸುಮಲತಾ ವಿರುದ್ದ ಅಸಂಬದ್ದ ಪದವನ್ನು ಬಳಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ ಎಂದಿರುವ ಶಿವರಾಮೇಗೌಡ್ರು, ಚುನಾವಣೆ ಗೆಲ್ಲಲು ಸುಳ್ಳು ಹೇಳಿಕೊಂಡು ನೀಚಬುದ್ದಿಯನ್ನು ಅವರು ತೋರಿಸುತ್ತಿದ್ದಾರೆಂದು ಗೌಡ್ರು ಹೇಳಿದ್ದಾರೆ.

ಚಲನಚಿತ್ರ ಮಂಡಳಿಯವರು ಏಪ್ರಿಲ್ ಹದಿನೆಂಟರ ನಂತರ ಸುಮಲತಾ ಹಿಂದೆ ಇರುತ್ತಾರಾ? ಮಂಡ್ಯದ ಅಭಿವೃದ್ದಿ ಆಗಬೇಕಿದ್ದರೆ ಅದು ಮೈತ್ರಿ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದನ್ನು ಜನರು ಮೊದಲು ಅರಿತುಕೊಳ್ಳಲಿ ಎಂದು ಶಿವರಾಮೇಗೌಡರು ಹೇಳಿದ್ದಾರೆ.
ಅಂಬರೀಶ್ ಏನೋ ಗೌಡ, ಒಪ್ಪಿಕೊಳ್ಳೋಣ. ಆದರೆ, ಸುಮಲತಾ, ನಾಯ್ಡು ಕುಟುಂಬದವರು, ಅವರು ಹೇಗೆ ಗೌಡ್ತಿ ಆಗಲು ಸಾಧ್ಯ. ಗೌಡ್ರ ಕುಟುಂಬದ ಹುಡುಗ, ನಾಯ್ಡು ಜನಾಂಗದ ಹೆಣ್ಣನ್ನು ಮದುವೆಯಾದ ಮಾತ್ರಕ್ಕೆ ಆಕೆ ಗೌಡ್ತಿ ಆಗಲು ಸಾಧ್ಯವೇ ಎನ್ನುವ ಹೇಳಿಕೆಯನ್ನು ಶಿವರಾಮೇಗೌಡ್ರು ನೀಡಿದ್ದರು.
ಸುಮಲತಾ ಅವರು ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಈ ನಾಯ್ಡುಗಳು ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ ಎನ್ನುವ ವಿವಾದಕಾರಿ ಹೇಳಿಕೆಯನ್ನು ಶಿವರಾಮೇಗೌಡ್ರು ನೀಡಿದ್ದರು.












Click it and Unblock the Notifications