ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ನಟ ದರ್ಶನ್, ಎಚ್‌ಡಿಕೆ ಪರ ಇನ್ನೂ ಪ್ರಚಾರಕ್ಕಿಳಿಯದ ಸುಮಲತಾ.!
ಮಂಡ್ಯ, ಏಪ್ರಿಲ್, 18: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣಗಳು ದಿನದಿಂದ ದಿನಕ್ಕೆ ಸುಡು ಬಿಸಲಿಲಿನಂತೆ ರಂಗೆರುತ್ತಿವೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಮಾಡಲು ಸಿನಿಮಾ ಸ್ಟಾರ್‌ಗಳು ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಹಲಗೂರಿನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಈ ವಿಚಾರ ಇದೀಗ ಭಾರೀ ಸಂಚಲನ ಮೂಡಿಸಿದೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದರಾಗಿದ್ದರು. ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆ ಈ ಕ್ಷೇತ್ರದಿಂದ ಸುಮಲತಾ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಟಿಕೆಟ್ ಕೈತಪ್ಪಿದ್ದು, ಕೊನೆಗೂ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಯಿತು.

ಈ ಎಲ್ಲಾ ಮುನಿಸು ಮರೆತು ಕೊನೆಗೂ ಸಂಸದೆ ಸುಮಲತಾ ಅವರು ಬಿಜೆಪಿಗೆ ಸೇರ್ಪಡೆಯಾದರು. ಇನ್ನು ಬಿಜೆಪಿ ಸೇರ್ಪಡೆಯಾಗಿರುವ ಸಂಸದೆ ಸುಮಲತಾರನ್ನು ಅಮ್ಮಾ ಅಂತಲೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಇಂದು (ಏಪ್ರಿಲ್ 18) ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದಿರುವುದು ಕುತೂಹಲ ಕೆರಳಿಸಿದೆ.
ಮತ್ತೊಂದೆಡೆ ನೋಡುವುದಾದರೆ, ಮೈತ್ರಿ ಅಭ್ಯರ್ಥಿ ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿಯವರ ಪರ ಸುಮಲತಾ ಇನ್ನೂ ಪ್ರಚಾರಕ್ಕಿಳಿದಿಲ್ಲ. ಬಿಜೆಪಿಯ ರಾಜ್ಯ, ಕೇಂದ್ರ ನಾಯಕರು ಹೇಳಿದರೆ ಮಾತ್ರ ಕುಮಾರಸ್ವಾಮಿಯವೆ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಪ್ರಚಾರಕ್ಕಿಳಿಯದೆ ಮೌನದಲ್ಲಿದ್ದಾರೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರಕ್ಕಿಳಿದಿದ್ದು, ಈ ವಿಚಾರ ಕುತೂಹಲ ಮೂಡಿಸಿದೆ.
ಲೋಕಸಭೆ ಚುನಾವಣೆಯಲ್ಲಿ ನನಗೆ ಗೆಲುವು ಖಚಿತ: ಎರಡನೇ ನಾಮಪತ್ರವನ್ನು ಅಪಾರ ಬೆಂಬಲಿಗರೊಂದಿಗೆ, ಕ್ಷೇತ್ರದ ಜನತೆಯ ಅಪೇಕ್ಷೆ ಮೇರೆಗೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಟಿಕೆಟ್ ತಪ್ಪಿದ ಬಳಿಕ ಜನರು ಪಕ್ಷೇತರ ನಿಲ್ಲಬೇಕೆಂದು ಜನರು ಒತ್ತಾಯ ಮಾಡಿದ್ದರು. ಅವರ ಅಪೇಕ್ಷೆ ಮೇರೆಗೆ ಉಮೇದುವಾರಿಕೆ ಸಲ್ಲಿಸಿದ್ದೇನೆ ಎಂದು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಜಿ.ವಿನಯ್‌ಕುಮಾರ್ ಹೇಳಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಸಾವಿರಾರು ಜನರು ಬಂದಿದ್ದಾರೆ. ಕಿಲೋ ಮೀಟರ್‌ವರೆಗೆ ನಡೆದುಕೊಂಡು ಬಂದರು. ಕುಣಿದು ಕುಪ್ಪಳಿಸಿದರು. ಇದೆಲ್ಲವನ್ನೂ ನೋಡಿದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನನಗೆ ಗೆಲುವು ಖಚಿತ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕನಿಷ್ಠ ಹತ್ತರಿಂದ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಎಷ್ಟೇ ಒತ್ತಡ ಬಂದರೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾಮಪತ್ರ ವಾಪಸ್ ಪಡೆಯುವುದೂ ಇಲ್ಲ. ನನಗೆ ಗೆಲುವಿನ ವಾತಾವರಣ ಇದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಜನರಷ್ಟೇ ಅಲ್ಲ, ನಗರ ಭಾಗದ ಜನರು ಬಂದಿದ್ದರು. ನಾನು ಬರುವಾಗ ಅಂಗಡಿಯಲ್ಲಿದ್ದವರು, ಮುಂದೆ ನಿಂತವರು, ತಾಯಂದಿರು, ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು ಗೆಲುವಿನ ಸಿಂಬಲ್ ಅನ್ನು ನನಗೆ ತೋರಿಸಿದ್ದು ಕಂಡು ಬಂತು. ನಾನು ದಾವಣಗೆರೆ ಸಂಸದನಾಗುವ ನಂಬಿಕೆ ಇದೆ, ವಿಶ್ವಾಸವೂ ಇದೆ ಎಂದರು.
ನನಗೆ ಕಳೆದ ಎರಡರಿಂದ ಮೂರು ದಿನಗಳಲ್ಲಿ ಯಾವುದೇ ಕರೆಗಳು ಬಂದಿಲ್ಲ. ಯಾವುದೇ ಒತ್ತಡವೂ ಇಲ್ಲ. ಸ್ವತಂತ್ರವಾಗಿ ಪ್ರಚಾರ ಮಾಡುತ್ತಿದ್ದೇನೆ. ಅಪಾರ ಜನಬೆಂಬಲ, ಪ್ರೀತಿ ಸಿಗುತ್ತಿದೆ. ಒಂದು ಮತದ ಅಂತರದಲ್ಲಿ ಗೆದ್ದರೂ ಗೆಲುವೇ. ಕನಿಷ್ಠ ಹತ್ತರಿಂದ ಹದಿನೈದು ಸಾವಿರ ಮತಗಳಲ್ಲಿ ಗೆಲ್ಲುವ ವಿಶ್ವಾಸ ಕಂಡು ಬರುತ್ತಿದೆ. ಬಿಜೆಪಿ ಅಭ್ಯರ್ಥಿ, ಬಿಜೆಪಿ ನಾಯಕರು ನನ್ನನ್ನು ಭೇಟಿಯಾಗಿಲ್ಲ. ಕಾಂಗ್ರೆಸ್‌ನವರು ಸಂಧಾನಕ್ಕೆ ಬಂದದ್ದು ನಿಜ. ಆದರೆ ಯಶಸ್ವಿಯಾಗಿಲ್ಲ ಎಂದು ತಿಳಿಸಿದರು.
ನಾನು ಯಾರನ್ನು ಸೋಲಿಸಲು ಬಂದಿಲ್ಲ, ಗೆಲ್ಲಲು ಬಂದಿದ್ದೇನೆ. ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಸ್ಪರ್ಧೆಯಿಂದ ಭಯ ಶುರುವಾಗಿದೆ. ದಾವಣಗೆರೆ ಜನತೆ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದ್ದೇನೆ. ಮುಂದೆಯೂ ಉಳಿಸಿಕೊಳ್ಳುತ್ತೇನೆ. ದಾವಣಗೆರೆ ಅಭಿವೃದ್ಧಿಗೆ ಸ್ವಾಭಿಮಾನದ ನಡೆ, ಅಭಿವೃದ್ಧಿ ಕಡೆ ಎಂದು ಹೇಳಬಹುದು. ಅಭಿವೃದ್ಧಿಗಾಗಿ ನನ್ನದೇ ಆದ ಗುರಿ ಇಟ್ಟುಕೊಂಡಿದ್ದೇನೆ ಎಂದರು.
ಗ್ರಾಮೀಣ ಭಾಗದಲ್ಲಿ ನೂರಾರು ಹಳ್ಳಿಗಳಿಗೆ ಈಗಿನ ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಅವರು ಭೇಟಿ ನೀಡಿಲ್ಲ. ಅಭಿವೃದ್ಧಿಯನ್ನೂ ಮಾಡಿಲ್ಲ. ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಕ್ಷೇತ್ರದಲ್ಲೂ ಇನ್ನೂ ಹಲವು ಸಮಸ್ಯೆಗಳಿವೆ. ಎಷ್ಟೋ ಗ್ರಾಮಗಳಿಗೆ ಹೋಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಎರಡೂ ಪಕ್ಷಗಳು ವಿಫಲವಾಗಿವೆ ಎಂದರು.
ದಾವಣಗೆರೆ ವಲಯದಲ್ಲಿ ಹೊಸ ಶಕ್ತಿ, ನಾಯಕತ್ವ ಬೇಕು ಎಂಬ ಅಪೇಕ್ಷೆ ಇದೆ. ಅವಕಾಶ ಇರುವವರು, ಉಳ್ಳವರೇ ಬೆಳೆಯುತ್ತಿದ್ದಾರೆ. ಶೇಕಡಾ 70ರಿಂದ 75 ಜನರು, ಬಡವರು ರಾಜಕೀಯದಲ್ಲಿ ಬೆಳೆದಿಲ್ಲ. ಅಭಿವೃದ್ಧಿಯಿಂದ ವಂಚಿತರಾದವರಿಗೆ ಅಭಿವೃದ್ಧಿ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ದಾವಣಗೆರೆ ಇತಿಹಾಸದಲ್ಲಿ ನಾಮಪತ್ರ ಹಾಕಲು ಹೋದಾಗ ಇಷ್ಟೊಂದು ಜನರು ಬಂದಿಲ್ಲ. ಪಕ್ಷೇತರ ಅಭ್ಯರ್ಥಿಗೆ ಇಷ್ಟೊಂದು ಬೆಂಬಲ ಸಿಕ್ಕಿದೆ ಎಂದರೆ ಅದಕ್ಕೆ ಜನರ ಪ್ರೀತಿ ಕಾರಣ. ಕಳೆದ ಒಂದು ವರ್ಷದ ಹಿಂದೆ ಬಂದವನು. ನನಗೆ ರಾಜಕೀಯ ಹಿನ್ನೆಲೆ ಇಲ್ಲ. ಅಪ್ಪ, ಅಮ್ಮ ರಾಜಕೀಯದಲ್ಲಿ ಇಲ್ಲ. ನನ್ನ ವ್ಯಕ್ತಿತ್ವ, ನನ್ನ ಗುರಿ, ನನ್ನ ಕೆಲಸ ನೋಡಿ ಬಂದಿರುವುದು ಎಂದರು.
ಒತ್ತಡ ಆಗಬಹುದು. ಒತ್ತಡಕ್ಕೊಳಗಾಗಲ್ಲ. ಸೇವೆ ಮಾಡಲು ಬಂದಿರುವವನು ನಾನು ಎಂದು ಹೇಳಿದರು.
ಚಿಹ್ನೆ ಇನ್ನೂ ಬಂದಿಲ್ಲ. 22ರ ಮಧ್ಯಾಹ್ನ 3 ಗಂಟೆಗೆ ಬರುತ್ತದೆ. ಚಿಹ್ನೆ ಮುಖ್ಯವಲ್ಲ, ಜಿ.ಬಿ.ವಿನಯ್ ಕುಮಾರ್ ಬ್ರಾಂಡ್ ಆಗಿದೆ. ಚಿಹ್ನೆ ಯಾವುದೇ ಸಿಕ್ಕರೂ ಕಪ್ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications