ಬಸ್‌ನಲ್ಲಿ ಚುಡಾಯಿಸಿದವನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಮಂಡ್ಯ ಹುಡುಗಿ
ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಸ್ಥಳೀಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆ ಜೊತೆ ಪದೇ ಪದೇ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಹಲವು ಬಾರಿ ಎಚ್ಚರಿಕೆ ನೀಡಿದ ಬಳಿಕವೂ ಆತ ಪದೇ ಪದೇ ಚುಡಾಯಿಸಲು ಪ್ರಯತ್ನಿಸಿದ್ದಾನೆ. ಮಹಿಳೆಯನ್ನು ಮುಟ್ಟುವ ಮೂಲಕ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ.

ಹಲವು ಬಾರಿ ಎಚ್ಚರಿಕೆ ಕೊಟ್ಟ ನಂತರವೂ ಹುಡುಗನ ಪುಂಡಾಟ ನಿಲ್ಲದ ಕಾರಣ ಮಹಿಳೆಯ ಸಹನೆಯ ಕಟ್ಟೆ ಒಡೆಯಿತು. ತಾಳ್ಮೆ ಕಳೆದುಕೊಂಡ ಮಹಿಳೆ ಹುಡುಗನ ಕಪಾಳಕ್ಕೆ ಹೊಡೆಯಲು ಶುರು ಮಾಡಿದಳು. ಬಸ್ಸಿನಲ್ಲಿದ್ದ ಯಾರೊಬ್ಬರೂ ಕೂಡ ಮಹಿಳೆಯ ಸಹಾಯಕ್ಕೆ ಬರಲಿಲ್ಲ. ಆದರೆ, ಮಹಿಳೆ ಒಬ್ಬಳೇ ಪುಂಡನಿಗೆ ಹಿಗ್ಗಾ ಮುಗ್ಗಾ ಥಳಿಸಿದಳು. ಪ್ರಯಾಣಿಕರೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.
A woman beat her eve teaser at KR Pete bus stand in #Mandya. The lady was travelling in the local bus - the unidentified man was teasing her and tried to touch her inappropriately. Even after she warned- he continued to touch her (1/2) pic.twitter.com/69wEWFuTgZ
— Imran Khan (@KeypadGuerilla) June 3, 2023
ಮಹಿಳೆ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ
ಇನ್ನು ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳೆಯರನ್ನು ಚುಡಾಯಿಸುವ ಪುಂಡರಿಗೆ ಇದೇ ರೀತಿ ಮಾಡಬೇಕು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ವಿಡಿಯೋ ಬಗ್ಗೆ ಕಮೆಂಟ್ ಮಾಡಿದ್ದು, ಮಂಡ್ಯ ಹುಡುಗಿಯ ಧೈರ್ಯಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿದ್ದು, ಅಷ್ಟೆಲ್ಲಾ ಆಗುತ್ತಿದ್ದರು ಬಸ್‌ನಲ್ಲಿ ನೋಡಿಕೊಂಡು ಸುಮ್ಮನೆ ಕೂತಿದ್ದ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಧೈರ್ಯ ಇಲ್ಲದ ಹೇಡಿಗಳು ಎಂದು ಕಿಡಿ ಕಾರಿದ್ದಾರೆ.












Click it and Unblock the Notifications