BPL Card Cancel: 7,088 ಬಿಪಿಎಲ್ ಕಾರ್ಡ್‌ಗಳ ರದ್ದು
BPL Card: ರಾಜ್ಯದಲ್ಲಿ ಸದ್ಯ ಇದೀಗ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ಮುಂದುವರೆದಿದೆ. ಹಾಗೆಯೆ ಇದೀಗ ಈ ಭಾಗದಲ್ಲಿ 7,088 ಈ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಹಾಗಾದ್ರೆ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯ ಬಿಪಿಎಲ್ ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನು ಅನರ್ಹರು ಕೂಡ ಪಡೆದುಕೊಂಡು ಬಡವರಿಗೆ ಸಿಗಬೇಕಾದ ಅನ್ನ ಹಾಗೂ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಅನರ್ಹರು ಪಡೆದುಕೊಂಡಿದ್ದ 7,088 ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಎಪಿಎಲ್‌ಗೆ ಪರಿವರ್ತನೆ ಮಾಡಿದ್ದಾರೆ. ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ ದೂರುಗಳು ಕೇಳಿಬಂದ ಹಿನ್ನೆಲೆ ಆಹಾರ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯವನ್ನು ಸೆಪ್ಟೆಂಬರ್ 17ರಿಂದ ಆರಂಭಿಸಿದೆ. ಈ ಮೂಲಕ ಅನರ್ಹರಿಗೆ ಕಡಿವಾಣ ಹಾಕುವ ಕೆಲಸವನ್ನು ಮುಂದುವರೆಸಿದೆ.
ಜಿಲ್ಲೆಯಲ್ಲಿ 690 ಅಂತ್ಯೋದಯ ಅನ್ನ ಯೋಜನೆ ಮತ್ತು 6,398 ಬಿಪಿಎಲ್ ಕಾರ್ಡ್‌ಗಳು ಆಹಾರ ಅನರ್ಹರು ಕಬಳಿಸಿದ್ದರು. ಇವುಗಳನ್ನು ಪತ್ತೆ ಮಾಡಿದ ಅಧಿಕಾರಿಗಳು ಇವುಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 82 ಅಂತ್ಯೋದಯ ಮತ್ತು 11 ಬಿಪಿಎಲ್ ಸೇರಿದಂತೆ ಒಟ್ಟು 93 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಈ ಕಾರ್ಡ್‌ಗಳು 150 ಸದಸ್ಯರನ್ನು ಹೊಂದಿದ್ದವು. ಜೊತೆಗೆ 47 ಕಾರ್ಡ್‌ಗಳನ್ನು ರದ್ದಪಡಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 33,248 ಅಂತ್ಯೋದಯ ಕಾರ್ಡ್‌ಗಳು 1.36 ಲಕ್ಷ ಸದಸ್ಯರನ್ನು ಹಾಗೂ 65,776 ಎಪಿಎಲ್ ಕಾರ್ಡ್‌ಗಳು 2.25 ಲಕ್ಷ ಸದಸ್ಯರನ್ನು ಒಳಗೊಂಡಿವೆ. 4,33,596 ಬಿಪಿಎಲ್ ಕಾರ್ಡ್‌ಗಳಿದ್ದು, 14.16 ಲಕ್ಷ ಕುಟುಂಬ ಸದಸ್ಯರನ್ನು ಹೊಂದಿವೆ. ಒಟ್ಟು ಜಿಲ್ಲೆಯಲ್ಲಿ 5,32,620 ಕಾರ್ಡ್‌ಗಳಿದ್ದು, 17.77 ಲಕ್ಷ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,32,620 ಪಡಿತರ ಚೀಟಿಗಳಿವೆ. ಈ ಪೈಕಿ 4.33 ಲಕ್ಷ ಬಿಪಿಎಲ್, 33,248 ಅಂತ್ಯೋದಯ ಕಾರ್ಡ್‌ಗಳು ಇವೆ ಎಂದು ವರದಿಯಾಗಿದೆ.
ಸಾರ್ವಜನಿಕ ಪಡಿತರ ವಿತರಣಾ ಪದ್ಧತಿ ಅಡಿಯಲ್ಲಿ ಎಪಿಎಲ್ ಕುಟುಂಬಗಳನ್ನು ಗುರುತಿಸಲು ಪ್ರಸ್ತುತ ಇರುವ ಹೊರಗಿಡುವ ಮಾನದಂಡಗಳನ್ನು ಅನುಸರಿಸಲಾಗಿದೆ. ಅನರ್ಹರ ಬಳಿಯಿದ್ದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಈ ಮಾನದಂಡಗಳ ಅನುಸಾರ ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಯಾರೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು?
* ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
* ಕುಟುಂಬದ ವಾರ್ಷಿಕ ಆದಾಯವು 1.2 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು
* ಒಂದು ಕುಟುಂಬವು 3 ಹೆಕ್ಟೇರ್‌ಗಳಿಗಿಂತ (7.5 ಎಕರೆ) ಹೆಚ್ಚು ಕೃಷಿ ಭೂಮಿಯನ್ನು ಹೊಂದಿರಬಾರದು
* ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರಬಾರದು
* ಕುಟುಂಬವು 4 ಚಕ್ರದ ವಾಹನನ್ನು ಹೊಂದಿರಬಾರದು.
* ಆದಾಯ ತೆರಿಗೆ ಪಾವತಿಸುತ್ತಿರಬಾರದು
* ಮಾಸಿಕ ವಿದ್ಯುತ್ ಬಿಲ್ 450 ರೂಪಾಯಿಗಿಂತ ಹೆಚ್ಚಿರಬಾದು.












Click it and Unblock the Notifications