ರೌಡಿ ಫಣೀಶ್ ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳ ಬಂಧನ
ಮಂಡ್ಯ, ಜೂನ್ 29: ರೌಡಿ ಫಣೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ಜಿಮ್ ಶಿವು ಉರುಫ್ ಎಂ.ಸಿ.ಶಿವಪ್ರಸಾದ್, ಎಂ.ಪವನ್ ಕುಮಾರ್(20), ಪುರುಷೋತ್ತಮ್ (26), ಗೌಡಗೆರೆ ಗ್ರಾಮದ ಜಿ.ಕಿರಣ (20), ರವಿಕಿರಣ (20) ಹಾಗೂ ಕೆ.ಕೌಶಿಕ್ (18) ಬಂಧಿತ ಆರೋಪಿಗಳು. ಬಂಧಿತರಿಂದ 4 ಲಾಂಗ್, 1 ಚಾಕು, 3 ಮೊಬೈಲ್, 1 ಮೋಟಾರು ಬೈಕ್ ಹಾಗೂ ಸ್ಕಾರ್ಫಿಯೋ ವಶಪಡಿಸಿಕೊಳ್ಳಲಾಗಿದೆ.
'ತಿಥಿ ಬಿಡಿ, ಸಸಿ ನೆಡಿ...' ಮಂಡ್ಯದಲ್ಲೊಂದು ವಿಭಿನ್ನ ಕಾರ್ಯಕ್ರಮ
ಜೂನ್ 2ರಂದು ಫಣೀಶ್ ವಾಕಿಂಗ್ ಗೆ ಬಂದಿದ್ದ ಸಂದರ್ಭದಲ್ಲಿ ಮಳವಳ್ಳಿ ಹೊರವಲಯದ ಸವಿಗಂಗಾ ಕಲ್ಯಾಣ ಮಂಟಪದ ಬಳಿ ಸ್ಕಾರ್ಪಿಯೋದಲ್ಲಿ ಬಂದ ಆರೋಪಿಗಳು ಖಾರದ ಪುಡಿ ಎರಚಿ, ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಅದರಂತೆ ಡಿವೈಎಸ್ಪಿ ಮ್ಯಾಥೀವ್ ಥಾಮಸ್ ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಶ್ರೀಕಾಂತ್ ಪಿಎಸ್ ಐಗಳಾದ ರವಿಕುಮಾರ್, ಶ್ರೀಧರ್, ಅಯ್ಯನಗೌಡ, ಸಿಬ್ಬಂದಿ ಸಿದ್ದರಾಜು, ಅಂಜನ್ ಮೂರ್ತಿ, ರಾಜು, ಮಾದೇಶ, ನಟರಾಜು, ಪ್ರಭುಸ್ವಾಮಿ, ರಿಯಾಜ್ ಪಾಷ್ ಮತ್ತಿತರರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.