ಮದ್ದೂರು: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿ 14 ಮಂದಿ ಅಸ್ವಸ್ಥ
ಮಂಡ್ಯ, ನ.28: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 14 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಹೊಸಕೊಪ್ಪಲು ಬಳಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕಬ್ಬು ಕಡಿಯುವ ಕೂಲಿ ಕಾರ್ಮಿಕರಾದ ಚಂದ್ರನಾಯ್ಕ (26), ಮೀನಾಕ್ಷಿ ಬಾಯಿ (26), ಶಾಂತಾಬಾಯಿ (30), ಪಾಂಡುನಾಯ್ಕ (25), ರೇಣುಕಾನಾಯ್ಕ(25), ಸತ್ಯನಾಯ್ಕ (28), ಸೀತಾಬಾಯಿ (8), ಯೋಗೀಶ (10), ಅಂಬರೀಶ, ಯಕ್ಷ (5), ಸಂಜೀವ (8 ತಿಂಗಳು), ಬಾಲಾಜಿ (5), ಶರತ್ (6), ಆರತಿಬಾಯಿ (3) ಎನ್ನುವವರು ಅಸ್ವಸ್ಥರಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬಿಡಿಸಲು ಸಿಗದ ಕೂಲಿ ಕಾರ್ಮಿಕರು, ರೈತರಿಗೆ ಆತಂಕ
ಬಳ್ಳಾರಿ ಮೂಲದ 30 ಕೂಲಿ ಕಾರ್ಮಿಕರು ಮಕ್ಕಳನ್ನು ಕರೆದುಕೊಂಡು ಮದ್ದೂರು ತಾಲೂಕಿನ ಕೊಪ್ಪಗೆ ಕಬ್ಬು ಕಟಾವಿಗೆ ಬಂದಿದ್ದರು. ಬಳ್ಳೇಕೆರೆ ಸಮೀಪದಲ್ಲಿರುವ ರೈಸ್‌ಮಿಲ್ ಬಳಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.
ಸಮೀಪದಲ್ಲಿರುವ ಗದ್ದೆಯಲ್ಲಿ ದೊಡ್ಡ ಡ್ರಂ ಇರುವುದನ್ನು ಕಂಡ ಕೂಲಿ ಕಾರ್ಮಿಕರು ಜಮೀನಿನ ಮಾಲೀಕನನ್ನು ಕೇಳಿ ನೀರು ತುಂಬಿಕೊಳ್ಳಲು ಡ್ರಂ ಪಡೆದಿದ್ದರು. ಅದರಲ್ಲಿ ನೀರು ತುಂಬಿಟ್ಟುಕೊಂಡಿ ಕುಡಿದಿದ್ದಾರೆ.
ಜಮೀನು ಮಾಲೀಕ ಮನೆಗೆ ಬಂದು ತನ್ನ ಮಗನಿಗೆ ಕೂಲಿ ಕಾರ್ಮಿಕರಿಗೆ ಡ್ರಂ ನೀಡಿರುವ ವಿಚಾರ ತಿಳಿಸಿದ್ದ. ಆಗ ಆ ಡ್ರಂನಲ್ಲಿಗದ್ದೆಗೆ ಸಿಂಪಡಿಸಲು ಕ್ರಿಮಿನಾಶಕ ತುಂಬಿದ್ದನ್ನು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಜಮೀನು ಮಾಲೀಕ ಗದ್ದೆ ಬಳಿ ಬಂದು ಕೂಲಿ ಕಾರ್ಮಿಕರಿಗೆ ನೀರು ಕುಡಿಯದಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕೆಲವರು ನೀರು ಕುಡಿದಿದ್ದ ಕೆಲವರು ಹೊಟ್ಟೆ ಉರಿಯಿಂದ ಬಳಲುತ್ತಿದ್ದರು.
ತಕ್ಷಣ ಅವರನ್ನು ಸಮೀಪದ ಕೊಪ್ಪ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್‌ಗೆ ದಾಖಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.