• search
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನ ಕಾಫಿ ತೋಟಗಳ ಮಧ್ಯೆ ಧೂಳೆಬ್ಬಿಸಿದ ಜೀಪ್‌ rally

By Manjunatha
|

ಕೊಡಗು, ಜುಲೈ 20: ವೈನಾಡು ಜಿಲ್ಲೆಯ ಕಲ್ಪೆಟ್ಟದ ಕಾಫಿತೋಟಗಳ ನಡುವೆ ನಡೆದ 5ನೇ ವರ್ಷದ ದಿ ವೈನಾಡ್ ಜೀಪ್ ಕ್ಲಬ್ ಮಾನ್ಸುನ್ rally ನೋಡುಗರಲ್ಲಿ ರೋಮಾಂಚನ ಉಂಟುಮಾಡಿತು.

rallyಯಲ್ಲಿ ಟೀಮ್ ಚಾಂಪಿಯನ್ಸ್ ತಂಡದ ನಾಯಕ ವಿಜಯವಾಡದ ವಂಶಿಮೆರ್ಲ ಹಾಗೂ ಕೊಡಗಿನ ಮೂವರು rally ಪಟುಗಳಾದ ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ, ಅಮ್ಮತ್ತಿಯವರಾದ ಕೊಂಗಂಡ ಗಗನ್ ಕರುಂಬಯ್ಯ ಹಾಗೂ ಉದ್ದಪಂಡ ಚೇತನ್ rallyಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸಿದ್ದಾರೆ.

ಡೀಸಲ್ ಕ್ಲಾಸ್ ಪ್ರಥಮ ಹಾಗೂ ಓವರಾಲ್ ಚಾಂಪಿಯನ್ ಆಫ್ ದ ಈವೆಂಟ್ ನ್ನು ಕೊಂಗೇಟಿರ ಬೋಪಯ್ಯ ಪಡೆದರೆ ಡೀಸಲ್ ಕ್ಲಾಸ್‍ನಲ್ಲಿ ಉದ್ದಪಂಡ ಚೇತನ್ ಎರಡನೇಯ ಸ್ಥಾನವನ್ನು ಹಾಗೂ ಎಸ್‌ಯುವಿ ಕ್ಲಾಸ್‌ನಲ್ಲಿ ಕೊಂಗಂಡ ಗಗನ್ ಕರುಂಬಯ್ಯ ಮೊದಲ ಸ್ಥಾನವನ್ನು, ವಂಶಿಮೆರ್ಲ ಎರಡನೆಯ ಸ್ಥಾನವನ್ನು ಹಾಗು ಉದ್ದಪಂಡ ತಿಮ್ಮಣ್ಣ ಮೂರನೇ ಸ್ಥಾನ ಪಡೆದರು.

Vainad Jeep club mansoon rally organied in Kodagu

ವೈನಾಡಿನ ಕಾಫಿತೋಟಗಳ ನಡುವೆ ಹೊಸದಾಗಿ ಟ್ರಾಕ್‌ಗಳನ್ನು ಮಾಡಲಾಗಿದ್ದು, ಕಿರಿದಾದ ಕೆಸರು ತುಂಬಿರುವ ರಸ್ತೆಗಳ ಜೊತೆಗೆ ಏರುತಗ್ಗುಗಳು ಬಾರೀ ಇಳಿಜಾರಿನ ನಡುವೆ ಚಾಲಕರು ತಮ್ಮ ವಾಹನಗಳನ್ನು ಚಲಾಯಿಸಿದರು. ದಕ್ಷಿಣ ಭಾರತದ ನುರಿತ 40 rally ಪಟುಗಳು ಭಾಗವಹಿಸಿದ್ದು ಕೊನೆಹಂತದ ಗುರಿಯನ್ನು ಕೇವಲ 6 ರಿಂದ 7 ವಾಹನಗಳು ತಲುಪಲು ಸಾಧ್ಯವಾಯಿತು. ಅದರಲ್ಲಿ ಕೊಡಗಿನ ಮೂವರು rally ಪಟುಗಳು ತಮ್ಮ ಸಾಹಸವನ್ನು ಮೆರೆದಿದ್ದಾರೆ.

Vainad Jeep club mansoon rally organied in Kodagu

ಪ್ರಥಮ ಬಹುಮಾನವಾಗಿ ರೂ.15 ಸಾವಿರ ನಗದು, ಸರ್ಟಿಫಿಕೇಟ್ ಹಾಗು ಪ್ರತಿಸ್ಠಿತ ಕಂಪನಿಗಳ ಗಿಫ್ಟ್ ಓಚರ್ಸ್‌ಗಳನ್ನು ನೀಡಲಾಯಿತು. ವೈನಾಡಿನಲ್ಲಿ ಭಾಗವಹಿಸಿದ rallyಯಲ್ಲಿ ರೋಚಕ ಅನುಭವವಾಗಿದೆಂದು ಕೊಡಗಿನಿಂದ ಭಾಗವಹಿಸಿದ rally ಪಟುಗಳು ಹೇಳುತ್ತಾರೆ.

Vainad Jeep club mansoon rally organied in Kodagu

ಕೊಂಗೇಟಿರ ಬೋಪಯ್ಯ, ಕೊಂಗಂಡ ಗಗನ್ ಕರುಂಬಯ್ಯ ಹಾಗು ಉದ್ದಪಂಡ ಚೇತನ್‍ರವರು ಹಲವು ಐಎನ್‍ಆರ್‌ಎಸ್‌ rallyಗಳಲ್ಲಿ, ವಿವಿಧ ಅಪ್‌ರೋಡ್‌ ಗಳಲ್ಲಿ, ಆಟೋಕ್ರಾಸ್ ಗಳಲೆಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶವನ್ನು ನೀಡಿದರು. ಆಗಸ್ಟ್ ಮೂರು ನಾಲ್ಕರಂದು ಕೊಯಮತ್ತೂರುನಲ್ಲಿ ನಡೆಯುವ ಇಂಡಿಯನ್ ನ್ಯಾಷನಲ್ rally ಚಾಂಪಿಯನ್‌ ಶಿಪ್‌ನ rallyಯಲ್ಲಿ ಈ ಮೂವರು ಭಾಗವಹಿಸಲಿದ್ದಾರೆ. ಅಲ್ಲದೆ ಹಿರಿಯ rally ಪಟುಗಳಾದ ಮಾಳೇಟಿರ ಜಗತ್ ನಂಜಪ್ಪ ಹಾಗು ಉದ್ದಪಂಡ ಚೇತನ್‍ರವರು ಜುಲೈ21ರಿಂದ ಗೋವಾದಲ್ಲಿ ನಡೆಯಲಿರುವ ಅಂತರಾಷ್ಟೀಯ ಮಟ್ಟದ ರೇನ್ ಫಾರೆಸ್ಟ್ ಚ್ಯಾಲೆಂಜ್‌ನಲ್ಲಿ ಭಾಗವಹಿಸುತ್ತಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vainad Jeep club mansoon rally organied in Kodagu recently and 3 Kodagu riders won in the rally. Total 40 riders participated in the rally and only 7 drivers completed the rally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more