ಮಡಿಕೇರಿ; ಗುಂಡು ಹಾರಿಸಿ, ಕತ್ತು ಸೀಳಿ ಹಸುಗಳ ಹತ್ಯೆ
ಮಡಿಕೇರಿ, ಏಪ್ರಿಲ್ 19; ಮೂರು ಹಸುಗಳನ್ನು ಅಮಾನುಷವಾಗಿ ಕೊಂದು ಹಾಕಿರುವ ಘಟನೆ ಗೋಣಿಕೊಪ್ಪ ವ್ಯಾಪ್ತಿಯ ಹೆಬ್ಬಾಲೆ ದೇವರಪುರದ ಎಸ್ಟೇಟ್ ವೊಂದರಲ್ಲಿ ನಡೆದಿದೆ. ಹಸುಗಳ ಮೌಲ್ಯ ಸುಮಾರು 50 ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಹಸುಗಳ ಮೃತದೇಹ ಸಿಕ್ಕಿದ್ದು, ಗುಂಡು ಹಾರಿಸಿ, ಕುತ್ತಿಗೆಯನ್ನು ಕತ್ತರಿಸಲಾಗಿದೆ. ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂಬ ಸಂಶಯ ವ್ಯಕ್ತವಾಗಿದ್ದು, ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಹಸುಗಳನ್ನು ಹತ್ಯೆ ಮಾಡಿದವರು ಮೃತ ದೇಹಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಈ ಹಸುಗಳು ಕಳ್ಳಿಚ್ಚಂಡ ರಮೇಶ್, ಕಳ್ಳಿಚ್ಚಂಡ ಸಾಬು ಗಣಪತಿ ಮತ್ತು ಎರವರ ಚುಬ್ರ ಎಂಬುವವರಿಗೆ ಸೇರಿದ್ದಾಗಿದೆ. ಹಸುವಿನ ಕುತ್ತಿಗೆಯನ್ನೂ ಕೊಯ್ಯಲಾಗಿದ್ದು ಇದನ್ನು ಹಲಾಲ್ ಮಾಡಿ ಸಾಗಿಸಲು ಸಾಧ್ಯವಾಗದೇ ಬಿಟ್ಟು ಹೋಗಿದ್ದಾರೆ ಎಂದು ಸಾಬು ಗಣಪತಿ ಆರೋಪಿಸಿದ್ದಾರೆ.

ಹಸುಗಳ ಹತ್ಯೆಗೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತ ರಾಸುಗಳ ಮೌಲ್ಯ ರೂ. 50 ಸಾವಿರಕ್ಕೂ ಅಧಿಕ ಎನ್ನಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿ ಗ್ರಾಮಸ್ಥರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications