ಸುಳ್ಯದಿಂದ ಮಡಿಕೇರಿಗೆ ಬಸ್ ಸಂಚಾರ ಆರಂಭ
ಸುಳ್ಯ, ಆಗಸ್ಟ್ 23: ಕೊಡಗಿನಲ್ಲಿ ಸುರಿದ ಭಾರಿ ಮಳೆ, ಪ್ರವಾಹ, ಭೂ ಕುಸಿತದ ಪರಿಣಾಮ ಹಲವಾರು ಗ್ರಾಮಗಳು, ಜಿಲ್ಲೆಗಳ ನಡುವಿನ ರಸ್ತೆ ಸಂಪರ್ಕ ಕಡಿದುಕೊಂಡಿದೆ.
ಮೈಸೂರು-ಮಡಿಕೇರಿ ಮೂಲಕ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯಕ್ಕೆ ಸಂಪರ್ಕ ಒದಗಿಸುತ್ತಿದ್ದ ಹೆದ್ದಾರಿ ಈಗ ಸಂಪೂರ್ಣ ಹಾಳಾಗಿದೆ. ಕನಿಷ್ಟ ಆರು ತಿಂಗಳಾದರೂ ಸಮ ಸ್ಥಿತಿಗೆ ತರುವುದು ಕಷ್ಟ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ, ರಸ್ತೆ ಮಧ್ಯ ಹೊಂಡ ಬೀಳುವ ಭೀತಿಯೂ ಇದೆ.
ಮಡಿಕೇರಿ : 10 ದಿನದ ಬಳಿಕ ಶಾಲೆಗಳು ಪುನಃ ಆರಂಭ
ಸದ್ಯ ಮಳೆ ಕೊಂಚ ತಗ್ಗಿದ್ದರಿಂದ ಸುಳ್ಯದಿಂದ ಮಡಿಕೇರಿಗೆ ಕೆಎಸ್ಸಾರ್ಟಿಸಿ ವತಿಯಿಂದ ಮಿನಿ ಬಸ್ ಸೇವೆ ಬುಧವಾರವೇ ಆರಂಭಿಸಲಾಯಿತು. ಮಡಿಕೇರಿ ಭಾಗಮಂಡಲ ಕರಿಕೆ ಸುಳ್ಯಕ್ಕೆ. ಕೆ.ಎಸ್.ಆರ್. ಟಿ.ಸಿ ವತಿಯಿಂದ ಮಿನಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್ಸಾರ್ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.
ಕೊಡಗಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ನಿರಾಶ್ರಿತರೊಂದಿಗೆ ಮಾತುಕತೆ
ಮಾರ್ಗ ಮಧ್ಯದಲ್ಲಿ ಯಾವುದೇ ತೊಂದರೆ ಉಂಟಾಗದ ಕಾರಣ, ಶುಕ್ರವಾರದಂದು 5 ಬಸ್ ಆರಂಭಿಸಲಾಗಿದೆ. 60 ಕಿಮೀ ಮಾರ್ಗ ಈಗ ಸುತ್ತಿ ಬಳಸಿ ನೂರಿಂದ ನೂರಿಪ್ಪತ್ತು ಕಿ.ಮೀ ಆಗಲಿದೆ. 90 ರೂ ಚಾರ್ಜ್,ಅಂದಾಜು 4 ಗಂಟೆ ಜರ್ನಿ. ಬಸ್ ಸಮಯ ನಿಗದಿಯಾಗಿಲ್ಲ ಮಾರ್ಗ: ಸುಳ್ಯ - ಕಲ್ಲಪಳ್ಳಿ - ಪಾನತೂರು - ಕರಿಕೆ - ಭಾಗಮಂಡಲ - ಮಡಿಕೇರಿ ಗೆ ಪಯಣ.
ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು, ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಏಳು ಬಸ್ ಗಳನ್ನು ಮಡಿಕೇರಿ ಡಿಪೋದಿಂದ ಹಾಕಲಾಗಿದ್ದು ವೇಳಾಪಟ್ಟಿ ಈ ರೀತಿಯಾಗಿದೆ.
ಮಡಿಕೇರಿ to ಸುಳ್ಯ
7.15am
8.0am
9.0am
11.15am
12.0noon
4.0pm
4.30 pm
ಸುಳ್ಯ to ಮಡಿಕೇರಿ
7.00am
7.45am
11.45am
12.15pm
1.15pm
3.30pm
4.30pm
ಪ್ರಯಾಣದ ಅವಧಿ 4.00 ಗಂಟೆ (ಅಂದಾಜು)
ಟಿಕೆಟ್ ದರ 90 ರು
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !