ಕೊಡಗು: ನಾಲ್ಕು ಮಕ್ಕಳು ಸೇರಿ ಆರು ಜನ ಸಜೀವ ದಹನ; ಓರ್ವನ ಸ್ಥಿತಿ ಚಿಂತಾಜನಕ

ಮಡಿಕೇರಿ, ಏಪ್ರಿಲ್ 3: ಕೊಡಗು ಜಿಲ್ಲೆ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿರುವ ಕೊಳೇರ ವಸಂತ ನವರ ಲೈನ್ ಮನೆಯಲ್ಲಿ ವಾಸವಿದ್ದ ಎರವರ ಮಂಜು ಎಂಬುವವರ ಮನೆಗೆ ಅವರ ತಂದೆಯೇ ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಬೆಳಗಿನ ಜಾವ 2 ಗಂಟೆಗೆ ಮಂಜು ಅವರ ಕುಟುಂಬ ಸದಸ್ಯರು ಮತ್ತು ಅವರಲ್ಲಿಗೆ ಬಂದ ಸಂಬಂಧಿಕರು ಸೇರಿ ಎಂಟು ಜನ ಮಲಗಿದ್ದ ಸಮಯದಲ್ಲಿ ಮಂಜುವಿನ ತಂದೆ ಎರವರ ಬೋಜ ಪಾನಮತ್ತನಾಗಿ ಲೈನ್ ಮನೆಯ ಬಾಗಿಲು ಕಿಟಕಿಯನ್ನು ಹೊರಗಿನಿಂದ ಹಾಕಿ ಮನೆ ಮೇಲೆ ಹತ್ತಿ ಹಂಚು ತೆಗೆದು ಪೆಟ್ರೋಲ್ ಸುರಿದು ಬೈಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಇದರ ಪರಿಣಾಮ ಸ್ಥಳದಲ್ಲಿಯೇ ಆರು ವರ್ಷದ ಹೆಣ್ಣು ಮಗು ಸೇರಿ ಮೂವರು ಸಜೀವ ದಹನವಾಗಿದ್ದಾರೆ. ಮೂರು ಮಂದಿಯನ್ನು ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಈರ್ವರು ಮಕ್ಕಳು ಮೃತಪಟ್ಟಿದ್ದಾರೆ.

Madikeri: Six People Including Four Children Killed In Fire Accident

Recommended Video

      ರಾಮನಗರ:ಕಾಡಾನೆಗಳ ದಾಳಿಗೆ ರೈತರು ಕಂಗಾಲು | Oneindia Kannada

      ಇನ್ನು ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಕೂಡಲೇ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+