ಅಧ್ಯಾಯ ಎಲ್ಲಿ ಫ್ರಾರಂಭವಾಗಿತ್ತೋ ಅಲ್ಲೇ ಮುಕ್ತಾಯ.. ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನೇಮರ್ ಕಣ್ಣೀರಿನ ವಿದಾಯ
Neymar: ಫಿಫಾ ವಿಶ್ವಕಪ್ 2026ರಿಂದ ಬ್ರೆಜಿಲ್ ತಂಡವು ಹೊರಬಿದ್ದ ಬೆನ್ನಲ್ಲೇ ಆ ದೇಶದ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹಾಗಾದ್ರೆ ಅವರು ವಿದಾನ ಹೇಳಲು ಕಾರಣ ಏನು ಹಾಗೂ ಸಾಧನೆಯ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಫಿಫಾ ವಿಶ್ವಕಪ್ 2026ರ ಪ್ರಿ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಪಂದ್ಯದಲ್ಲಿ ನಾರ್ವೆ ತಂಡದ ವಿರುದ್ಧ ಬ್ರೆಜಿಲ್ 2-1 ಗೋಲುಗಳ ಅಂತರದಿಂದ ಸೋಲನುಭವಿಸಿತು. ನಾರ್ವೆ ಪರ ಎರ್ಲಿಂಗ್ ಹಾಲೆಂಡ್ ಭರ್ಜರಿ ಪ್ರದರ್ಶನ ನೀಡಿ ಎರಡು ಗೋಲುಗಳನ್ನು ಗಳಿಸಿದರು. ಈ ಪಂದ್ಯ ಮುಗಿದ ತಕ್ಷಣ ಮೈದಾನದಲ್ಲೇ ಕಣ್ಣೀರು ಹಾಕಿದ 34 ವರ್ಷದ ನೇಮರ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು.

ನೇಮರ್ ಭಾವುಕ
ಬಳಿಕ ಮಾತನಾಡಿದ ಭಾವುಕರಾಗಿ ಈ ಬಗ್ಗೆ ಮತಾನಡಿದ ಅವರು, 'ನಾನು ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ತುಂಬಾ ಪ್ರಯತ್ನಿಸಿದೆ. ಆದರೆ ವಿಧಿ ಬೇರೆಯೇ ಇತ್ತು. ಎಲ್ಲಿ ನನ್ನ ಜರ್ನಿ ಆರಂಭವಾಗಿತ್ತೋ, ಅಲ್ಲೇ ಮುಗಿಸಿದ್ದೇನೆ,' ಎಂದು ಕಣ್ಣೀರು ಹಾಕಿದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.
ಅಂತಾರಾಷ್ಟ್ರೀಯ ಫುಟ್‌ಬಾಲ್ ಪಯಣ ಆರಂಭವಾಗಿದ್ದು ಎಲ್ಲಿಂದ?
ನೇಮರ್ ತಮ್ಮ ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನವನ್ನು 2010ರಲ್ಲಿ ಇದೇ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಅಮೆರಿಕ ವಿರುದ್ಧದ ಪಂದ್ಯದ ಮೂಲಕ ಆರಂಭಿಸಿದ್ದರು. ಈಗ ಅದೇ ಕ್ರೀಡಾಂಗಣದಲ್ಲಿ ಅವರ ಕೊನೆಯ ಪಂದ್ಯವೂ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಅವರು ಪೆನಾಲ್ಟಿ ಮೂಲಕ ಬ್ರೆಜಿಲ್ ಪರ ಒಂದು ಗೋಲು ಗಳಿಸಿದರಾದರೂ ಅದು ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಬ್ರೆಜಿಲ್ ಪರ ಪರ ನೇಮರ್ ದಾಖಲೆಗಳು
ಬ್ರೆಜಿಲ್ ಪರ 16 ವರ್ಷಗಳ ಕಾಲ ಆಡಿದ ನೆಯ್ಮಾರ್ ಒಟ್ಟು 129 ಪಂದ್ಯಗಳಿಂದ 80 ಗೋಲುಗಳನ್ನು ಗಳಿಸುವ ಮೂಲಕ ಬ್ರೆಜಿಲ್ ದೇಶದ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ದಿಗ್ಗಜ ಪೀಲೆ (77 ಗೋಲುಗಳು) ಅವರ ದಾಖಲೆಯನ್ನು ಹಿಂದಿಕ್ಕಿದ್ದರು.
ಅಭಿಮಾನಿಗಳಿಗೆ ಶಾಕ್
ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದಿರುವ ನೇಮರ್, ಸದ್ಯ ತಮ್ಮ ಹಳೆಯ ಕ್ಲಬ್ ಆದ ಸ್ಯಾಂಟೋಸ್ ಎಫ್‌ಸಿ ಪರ ಕ್ಲಬ್ ಫುಟ್‌ಬಾಲ್ ಆಡುವುದನ್ನು ಮುಂದುವರಿಸಲಿದ್ದಾರೆ. ಆದರೆ ಪ್ರತಿ ಸೀಸನ್ ಮುಗಿದ ಬಳಿಕ ತಮ್ಮ ಫಿಟ್ನೆಸ್ ಮತ್ತು ಆಸಕ್ತಿಯ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇದೀಗ ನೆಯ್ಮಾರ್ ಅವರ ಈ ದಿಢೀರ್ ನಿವೃತ್ತಿ ನಿರ್ಧಾರ ಜಾಗತಿಕ ಫುಟ್‌ಬಾಲ್ ಅಭಿಮಾನಿಗಳಿಗೆ ಶಾಕ್ ನೀಡಿದಂತಾಗಿದೆ. ಇನ್ನು ಬ್ರೆಜಿಲ್ 5 ಬಾರಿ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡು ಈ ಪಟ್ಟಿಯಲ್ಲಿ ನಂಬರ್ ಸ್ಥಾನದಲ್ಲಿದೆ.
ಬ್ರೆಜಿಲ್ ಯಾವಾಗೆಲ್ಲಾ ಫಿಫಾ ವಿಶ್ವಕಪ್ ಗೆದ್ದಿದೆ?
* 1958
* 1962
* 1970
* 1994
* 2002












Click it and Unblock the Notifications