ಮಡಿಕೇರಿ ಅಪ್ರಾಪ್ತೆಯೊಂದಿಗೆ ಆಟೋ ಚಾಲಕ ಸರಸ: ಬಂಧನ
ಹೊಲಿಗೆ ತರಬೇತಿಗೆಂದು ಬರುತ್ತಿದ್ದ ಅಪ್ರಾಪ್ತ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಪುಸಲಾಯಿಸಿ ಸುಳ್ಯಕ್ಕೆ ಕರೆದೊಯ್ದು ಸರಸಕ್ಕೆ ಮುಂದಾದ ವಿವಾಹಿತ ಆಟೋ ಚಾಲಕ ಜೈಲು ಸೇರಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ, ಮೇ 09: ಹೊಲಿಗೆ ತರಬೇತಿಗೆಂದು ಬರುತ್ತಿದ್ದ ಅಪ್ರಾಪ್ತ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಪುಸಲಾಯಿಸಿ ಸುಳ್ಯಕ್ಕೆ ಕರೆದೊಯ್ದು ಸರಸಕ್ಕೆ ಮುಂದಾದ ವಿವಾಹಿತ ಆಟೋ ಚಾಲಕ ಜೈಲು ಸೇರಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ತ್ಯಾಗರಾಜ ಕಾಲೋನಿ ನಿವಾಸಿ, ಮಹಮ್ಮದ್ ಗೌಸ್ ಎಂಬವರ ಪುತ್ರ ವಾಝಿದ್ (24) ಎಂಬಾತನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದು, ಮಡಿಕೇರಿಗೆ ಸಮೀಪದ ಹೆಬ್ಬೆಟ್ಟಿಗೇರಿ ಗ್ರಾಮದಿಂದ ಹೊಲಿಗೆ ತರಬೇತಿಗೆಂದು ಮಡಿಕೇರಿಗೆ ಬರುತ್ತಿದ್ದ ದಲಿತ ಕುಟುಂಬದ ಅಪ್ರಾಪ್ತ ಯುವತಿಯನ್ನು ಪರಿಚಯಿಸಿಕೊಂಡಿದ್ದಾನೆ. ಇದಾದ ನಂತರ ಈತ ಆಕೆಯೊಂದಿಗೆ ಸುತ್ತಾಡುತ್ತಾ ದಿನ ಕಳೆದಿದ್ದು, ಮಡಿಕೇರಿ ಪಟ್ಟಣದಲ್ಲಿ ಪರಿಚಿತರೇ ಜಾಸ್ತಿಯಿರುವುದರಿಂದ ಬೇರೆಯವರಿಗೆ ತಿಳಿಯುತ್ತದೆ ಎಂಬ ಉದ್ದೇಶದಿಂದ ಆಕೆಯನ್ನು ತನ್ನ ಆಟೋ (ಕೆ.ಎ. 12 ಬಿ. 4304) ದಲ್ಲಿಯೇ ಕರೆದುಕೊಂಡು ಸುಳ್ಯಕ್ಕೆ ಹೋಗಿದ್ದಾನೆ.[ಪ್ರೀತಿಯ ಹೆಸರಲ್ಲಿ ಮೋಸ: ಮಡಿಕೇರಿಯ ಇಬ್ಬರು ನ್ಯಾಯಾಂಗ ಬಂಧನಕ್ಕೆ]

ಬಳಿಕ ಲಾಡ್ಜ್ ನಲ್ಲಿ ತಂಗಲು ಲಾಡ್ಜ್ ಹುಡುಕಾಟ ನಡೆಸುತ್ತ ವೇಳೆ ಇಬ್ಬರನ್ನೂ ಗಮನಿಸಿದ ಸಾರ್ವಜನಿಕರಿಗೆ ಸಂಶಯ ಬಂದು, ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಸುಳ್ಯ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ, ಆಟೋ ಚಾಲಕನ ಸಹಿತ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆಕೆಯನ್ನು ಪುಸಲಾಯಿಸಿ ಕರೆತಂದು ಲಾಡ್ಜ್ ನಲ್ಲಿ ಅತ್ಯಾಚಾರ ಎಸಗುವ ದುರುದ್ದೇಶ ಬಯಲಾಗಿದೆ.
ನಂತರ ಮಡಿಕೇರಿ ಗ್ರಾಮಾಂತರ ಪೊಲೀಸರನ್ನು ಸಂಪರ್ಕಿಸಿ ಆರೋಪಿಯನ್ನು ಪೋಕ್ಸೊ' ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಯುವತಿಯ ಪೋಷಕರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಹೆತ್ತವರ ವಶಕ್ಕೆ ಒಪ್ಪಿಸಲಾಗಿದೆ.












Click it and Unblock the Notifications