ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ:ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಉಪನೋಂದಣಿ ಅಧಿಕಾರಿ

|
Google Oneindia Kannada News

ಮಡಿಕೇರಿ ಸೆಪ್ಟೆಂಬರ್ 16: ಸಹಕಾರ ಸಂಘ ನೋಂದಣಿ ಮಾಡಿಕೊಡೋದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಬಾಲಭವನದ ಬಳಿ ಇರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ನಿರೀಕ್ಷಕ ಮಂಜುನಾಥ್‌ರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ

ಮಡಿಕೇರಿಯ ಜಿಲ್ಲಾ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ನೋಂದಣಿಗಾಗಿ ನೌಕರ ದೇವಯ್ಯ ಎಂಬುವವರು ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಸಂಘದ ನೋಂದಣಿಗಾಗಿ ತೆರಳಿದ್ದ ವೇಳೆ ಹಿರಿಯ ನಿರೀಕ್ಷಕ ಮಂಜುನಾಥ್ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

Breaking: ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹೆಚ್ಚುವರಿ ಶಿರಸ್ತೇದಾರ್Breaking: ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹೆಚ್ಚುವರಿ ಶಿರಸ್ತೇದಾರ್

ಲಂಚಕ್ಕೆ ಭೇಡಿಕೆಯಿಟ್ಟಿದ್ದ ಅಧಿಕಾರಿ ಮಂಜುನಾಥ್ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದಿಂದ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಹೊರಗುತ್ತಿಗೆ ನೌಕರರಿಂದ 8 ಸಾವಿರ ಲಂಚವನ್ನು ಪಡೆಯುವ ಸಂದರ್ಭದಲ್ಲಿ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುನಾಥ್‌ರನ್ನು ಸಾಕ್ಷಿ ಸಮೇತ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.

Senior inspector of co-operative societies caught by Lokayukta in Madikeri

ಮೈಸೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ಪವನ್, ನಿರೀಕ್ಷಕ ಲೋಕೇಶ್, ಹೆಡ್‍ಕಾನ್ಸ್‍ಟೇಬಲ್ ಗಳಾದ ಲೋಕೇಶ್, ಮಂಜುನಾಥ್, ಕಾನ್ಸ್‍ಟೇಬಲ್ ಗಳಾದ ಪೃತ್ವೇಶ್, ಸಲಾವುದ್ದೀನ್, ಎ.ಹೆಚ್.ಸಿ.ಗಳಾದ ಅರುಣ್, ಶಶಿ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.

English summary
Co-operative Societies Senior official caught by Lokayukta in Madikeri when taking bribe from Outsourced employees of the Health Department,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X