ಕೊಡಗಿನಲ್ಲಿ 500 ರೂಪಾಯಿಯ ನಕಲಿ ನೋಟು ಪತ್ತೆ

Posted By: ಬಿಎಂ ಲವಕುಮಾರ್
Subscribe to Oneindia Kannada

ಮಡಿಕೇರಿ, ಅಕ್ಟೋಬರ್ 22: ಕೊಡಗಿನ ನಾಪೋಕ್ಲುವಿನಲ್ಲಿ ವ್ಯಕ್ತಿಯೊಬ್ಬರಿಗೆ ಸಿಕ್ಕಿರುವ 500 ಮುಖ ಬೆಲೆಯ ನೋಟೊಂದು ಆತಂಕಕ್ಕೆ ಕಾರಣವಾಗಿದೆ.

ನಾಪೋಕ್ಲು ಪ್ರಮುಖ ವಾಣಿಜ್ಯ ವಹಿವಾಟುಗಳ ಕೇಂದ್ರವಾಗಿದ್ದು, ಕೇರಳದ ನಂಟಿರುವ ಕಾರಣದಿಂದಾಗಿ ಇಲ್ಲಿ ನಕಲಿ ನೋಟು ಚಲಾವಣೆಗೆ ಬಂದಿರಬಹುದೆಂಬುದು ಹಲವರ ಅಭಿಪ್ರಾಯವಾಗಿದೆ.

Rs. 500 counterfeit note found in Kodagu

ಮೋದಿ ಅವರು 500 ಮತ್ತು 1000 ರೂ.ಗಳ ನೋಟನ್ನು ಅಮಾನ್ಯಗೊಳಿಸಿದರೂ ನೂತನ ನೋಟನ್ನೇ ಖದೀಮರು ನಕಲಿ ಮಾಡಿರುವುದರಿಂದ ನಕಲಿ ನೋಟು ಇಲ್ಲಿಗೆ ಬಂದಿರಬಹುದು ಎಂದುಕೊಳ್ಳಲಾಗಿದೆ.

ಇಷ್ಟಕ್ಕೂ ಆಗಿರುವುದೇನೆಂದರೆ, ನಾಪೋಕ್ಲು ನಿವಾಸಿ ಬಿಜೆಪಿ ಮುಖಂಡರೂ ಆದ ಪಾಡಿಯಮ್ಮಂಡ ಮನುಮಹೇಶ್ ಎಂಬುವರಿಗೆ 500 ರೂ. ಮುಖಬೆಲೆಯ ನೋಟೊಂದು ಇತರೆ ನೋಟುಗಳ ನಡುವೆ ಬಂದಿತ್ತು. ಈ ನೋಟು ಮಾಮೂಲಿ 500ರ ನೋಟಿಗಿಂತ ಉದ್ದದಲ್ಲಿ ಕಡಿಮೆಯಿದೆಯಂತೆ. ಜತೆಗೆ ನೋಟಿನ ಮೇಲ್ಭಾಗದಲ್ಲಿ ಮುದ್ರಣವಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗೆ ಸೆಂಟ್ರಲ್ ಗವರ್ನಮೆಂಟ್ ಎಂಬ ಪದದಲ್ಲಿ ಸೆಂಟ್ರಲ್‍ನ ಆರಂಭಿಕ ಅಕ್ಷರ ಸಿ ಬದಲಿಗೆ ಜಿ ಎಂದಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಲ್ಲಿಂಗ್ ನಲ್ಲೂ ವ್ಯತ್ಯಾಸವಿದೆ.

ಇನ್ನು ಗಾಂಧೀಜಿ ಭಾವಚಿತ್ರದ ಒಳಗೆ ಬರೆದಿರುವ 500 ಅಕ್ಷರ ಅಸಲಿ ನೋಟಿನಲ್ಲಿ ಎರಡು ಸುತ್ತಿನಲ್ಲಿದ್ದು. ನಕಲಿ ನೋಟಿನಲ್ಲಿ ಒಂದೇ ಸುತ್ತಿನಲ್ಲಿದೆ. ಹೀಗಾಗಿ ಇದು ನಕಲಿ ನೋಟಾಗಿದೆ ಎಂಬುದು ಮನು ಮಹೇಶ್ ಅಭಿಪ್ರಾಯ. ಹೀಗಾಗಿ ನೋಟುಗಳನ್ನು ಪಡೆಯುವ ಮುನ್ನ ಪರಿಶೀಲಿಸುವಂತೆ ಅವರು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕೂಲಿ ಕಾರ್ಮಿಕರಿದ್ದು, ಅವರಿಗೆ ಇಂತಹ ನೋಟುಗಳನ್ನು ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಜನತೆ ಎಚ್ಚರವಾಗಿರುವುದು ಒಳಿತು. ಜತೆಗೆ ಜಿಲ್ಲಾಡಳಿತ ಇತ್ತ ಗಮನಹರಿಸಿ ತನಿಖೆ ನಡೆಸುವ ಅಗತ್ಯವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 500 rupee counterfeit note was found in Napoklu in Kodagu.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ