ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಇನ್ನೂ ಒಂದು ವಾರ ಮುಂದುವರಿಯಲಿದೆ ಮಳೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 2: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗುವ ಸೂಚನೆ ದೊರತಿದೆ. ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎನ್ ಡಿಆರ್ ಎಫ್ ತಂಡಕ್ಕೆ ಸಿದ್ಧವಾಗಿರಲು ಸೂಚನೆ ನೀಡಲಾಗಿದೆ.

Recommended Video

ರಾಮಮಂದಿರ ಸಿದ್ಧವಾಗ್ತಿದೆ. ಆದ್ರೆ ಬಾಬ್ರಿ ದ್ವಂಸ ಮಾಡಿದವರ ಗತಿ..! | Oneindia Kannada

ಕಳೆದ ತಿಂಗಳಷ್ಟೇ ಕೊಡಗು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದ ಪ್ರವಾಹ ಏರ್ಪಟ್ಟಿತ್ತು. ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಪ್ರಾಣ ಹಾನಿಯೂ ಆಗಿತ್ತು. ನಂತರ ಮಳೆ ಕ್ರಮೇಣ ಕಡಿಮೆಯಾಗಿತ್ತು. ಇದೀಗ ಜಿಲ್ಲೆಯ ಜನ ನಿಟ್ಟುಸಿರುಬಿಡುತ್ತಿರುವಾಗಲೇ ಇನ್ನೂ ಒಂದು ವಾರಗಳ ಕಾಲ ಮಳೆಯಾಗುವ ಸೂಚನೆ ದೊರೆತಿದೆ.

ಕೊಡಗು: ಯಾವ ತಾಲೂಕಿನಲ್ಲಿ ಹೆಚ್ಚು ಮಳೆ ಬರ್ತಿದೆ? ಕೊಡಗು: ಯಾವ ತಾಲೂಕಿನಲ್ಲಿ ಹೆಚ್ಚು ಮಳೆ ಬರ್ತಿದೆ?

ಮಳೆ ಮತ್ತೆ ಮುಂದುವರಿದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಎನ್‍ಡಿಆರ್ ಎಫ್ ತಂಡವನ್ನು ಸಿದ್ಧವಾಗಿರಲು ಸೂಚಿಸಲಾಗಿದೆ. ಭಾರೀ ಮಳೆ ಸೂಚನೆಯಿದ್ದರಿಂದ ಜಿಲ್ಲಾಡಳಿತ ಜೂನ್ ತಿಂಗಳಿನಲ್ಲಿಯೇ ಎನ್ ಡಿಆರ್ ಎಫ್ ತಂಡವನ್ನು ಕರೆಸಿಕೊಂಡಿತ್ತು. ಮಳೆ ಕಡಿಮೆಯಾದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ತಂಡ ವಾಪಸ್ ಆಗುವ ಆಲೋಚನೆಯಿತ್ತು. ಆದರೆ ಮಳೆ ಒಂದು ವಾರಗಳ ಕಾಲ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಇನ್ನೂ 15 ದಿನಗಳ ಕಾಲ ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Kodagu: Rain Expected To Continue For Another Week

ಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಸಣ್ಣ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಜನರಿಗೆ ಧೈರ್ಯ ಹೇಳಿದೆ.

English summary
Rain expected to continue for another week in kodagu district. NDRF team has been instructed to be ready as a precautionary measure,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X