Mysuru Dasra 2024: ಜಂಬೂಸವಾರಿಗೆ ಮೆರಗು ನೀಡಿದ ಸ್ತಬ್ದ ಚಿತ್ರ, ಜನಪದ ನೃತ್ಯಗಳು ಹೇಗಿದ್ದವು?-ಇಲ್ಲಿದೆ ಮಾಹಿತಿ
Mysuru Dasra 2024: ನಂದಿ ಧ್ವಜ ಪೂಜೆಯೊಂದಿಗೆ ದಸರಾ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೊದಲಿಗೆ ಮಹೇಂದ್ರ ಆನೆ ನಿಶಾನೆ ಆನೆಯಾಗಿ ಸಾಗಿದರೆ, ಮೆರವಣಿಗೆಯಲ್ಲಿ ಜಂಬೂಸವಾರಿಗೆ ಜನಪದ ಕಲಾತಂಡಗಳ ಜೊತೆಗೆ 51 ಸ್ತಬ್ದ ಚಿತ್ರಗಳು ಮೆರಗು ತಂದವು. ಅರಮನೆ ಆವರಣದಲ್ಲಿ ಸಾಗಿ ಬಲರಾಮ ದ್ವಾರದ ಮೂಲಕ ಈ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದ ಕಡೆಗೆ ತೆರಳಿದ್ದು, ನರೆದಿದ್ದ ಜನ ಇದನ್ನು ಕಣ್ತುಂಬಿಕೊಂಡರು.
ಜಂಬೂಸವಾರಿಯಲ್ಲಿ 1. ಯಾದಗಿರಿ ಜಿಲ್ಲೆ-ತಿಂಥಣಿ ಮೌನೇಶ್ವರ ದೇವಾಲಯ, 2. ಕೊಡಗು ಜಿಲ್ಲೆ-ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ -ಕಾಳುಮೆಣಸು ತೋಟ ಹಾಗೂ ಆನೆ ಕ್ಯಾಂಪ್, 3.ರಾಯಚೂರು ಜಿಲ್ಲೆ - ಮುದ್ಗಲ್ ಕೋಟೆ ಮತ್ತು ಗಾಣದಾಳ ಪಂಚಮುಖಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.

4. ಚಾಮರಾಜನಗರ ಜಿಲ್ಲೆ - ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು, 5. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ - ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ, 6. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ - ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ.
7. ವಿಜಯನಗರ ಜಿಲ್ಲೆ - ವಿಜಯನಗರ ಸಾಮ್ರಾಜ್ಯದ ವೈಭವ, 8. ಬೆಂಗಳೂರು ನಗರ ಜಿಲ್ಲೆ - ರಾಷ್ಟಪಿತ ಮಹಾತ್ಮಗಾಂಧೀಜಿ ಮತ್ತು ವಿಧಾನಸೌಧ, 9. ಬೀದರ್ ಜಿಲ್ಲೆ - ಕನ್ನಡ ಪಟ್ಟದೇವರು ಪೂಜ್ಯಶ್ರೀ ಮದ್ ಘನಲಿಂಗ ಚಕ್ರವರ್ತಿ ಚೆನ್ನಬಸವ ಪಟ್ಟದೇವರು, 10. ಕೊಪ್ಪಳ ಜಿಲ್ಲೆ - ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ, ಹಿರೇಬೆಣಕಲ್ ಶಿಲಾ ಸಮಾಧಿ, ಇಟಗಿಯ ಮಹದೇವ ದೇವಾಲಯ.
11. ಪ್ರವಾಸೋದ್ಯಮ ಇಲಾಖೆ - ಒಂದು ರಾಜ್ಯ ಹಲವು ಜಗತ್ತುಗಳು. 12. ಡಾಕ್ಟರ್ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ - ನಿಗಮದ ಉತ್ಪನ್ನಗಳ ಮಾದರಿ. 13. ಉತ್ತರ ಕನ್ನಡ ಜಿಲ್ಲೆ - ಮುರುಡೇಶ್ವರದ ಬೃಹತ್ ಶಿವನ ಮೂರ್ತಿ, 14. ಬೆಂಗಳೂರು ಗ್ರಾಮಾಂತರ ಜಿಲ್ಲೆ - ಪೊಕ್ಕುಂದ/ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ಲು ದುರ್ಗ, ಬಿನ್ನ ಮಂಗಲ ದೇವಸ್ಥಾನ.
15. ದಾವಣಗೆರೆ ಜಿಲ್ಲೆ - ನಾವು ಮನುಜರು, 16. ಕೋಲಾರ ಜಿಲ್ಲೆ - ವಿಶ್ವವಿಖ್ಯಾತ ಶ್ರೀ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪರಿಚಯ, 17. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ - ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ ಎಂಬ ಸ್ತಬ್ಧಚಿತ್ರ ಪ್ರದರ್ಶನ.
18. ಕಾರ್ಮಿಕ ಇಲಾಖೆ - ಕಾರ್ಮಿಕರ ಹಿತ ರಕ್ಷಣೆ, 19. ಉಡುಪಿ ಜಿಲ್ಲೆ - ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು, 20. ಶಿವಮೊಗ್ಗ ಜಿಲ್ಲೆ - ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ, 21. ಬಳ್ಳಾರಿ ಜಿಲ್ಲೆ - ಕುರುಗೋಡು ದೇವಸ್ಥಾನ, 22. ಬಾಗಲಕೋಟೆ ಜಿಲ್ಲೆ - ರತ್ನನ ಕಾವ್ಯ ಗದಾಯುದ್ಧ, 23. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ - ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು.
24. ಸಮಾಜ ಕಲ್ಯಾಣ ಇಲಾಖೆ -ಸಮ ಸಮಾಜ ನಿರ್ಮಾಣಕ್ಕಾಗಿ, 25. ಹಾವೇರಿ ಜಿಲ್ಲೆ -ಏಲಕ್ಕಿ ಕಂಪಿನ ನಾಡು ಹಾಗೂ ಸಂತರ, ಸಾಹಿತಿಗಳ ನೆಲೆಬೀಡು, 26. ಮಂಡ್ಯ ಜಿಲ್ಲೆ - ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು, 27. ರಾಮನಗರ ಜಿಲ್ಲೆ - ರಾಮನಗರ ಜಿಲ್ಲಾ ವೈವಿಧ್ಯತೆಗಳು.
28. ಕಲಬುರ್ಗಿ ಜಿಲ್ಲೆ - ತೊಗರಿಯ ಕಣಜ ಕಲಬುರ್ಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು, 29. ಕಾವೇರಿ ನೀರಾವರಿ ನಿಗಮ - ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ, 30. ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ - ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ.
31. ವಿಜಯಪುರ ಜಿಲ್ಲೆ - ಬಸವನಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ, 32. ದಕ್ಷಿಣ ಕನ್ನಡ ಜಿಲ್ಲೆ - ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ, 33. ಮೈಸೂರು ಜಿಲ್ಲೆ - ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ, 34. ಬೆಳಗಾವಿ ಜಿಲ್ಲೆ - ಕಿತ್ತೂರು ಕದನದ 200ನೇ ವರ್ಷಾಚರಣೆ.
35. ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ - ಸಿಎಫ್‌ಟಿಆರ್‌ಐ ಮೈಸೂರು - ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ, 36. ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ - ಇಲಾಖೆಯ ಕಿರು ಪರಿಚಯ ಸ್ತಬ್ಧಚಿತ್ರಗಳ ಪ್ರದರ್ಶನ ಮಾಡಲಾಯಿತು.
37. ಚಿತ್ರದುರ್ಗ ಜಿಲ್ಲೆ - ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು, 38. ಚಿಕ್ಕ ಬಳ್ಳಾಪುರ ಜಿಲ್ಲೆ - ನಂದಿರೋಪ್ ವೇ, 39. ಗದಗ ಜಿಲ್ಲೆ - ಗ್ರಾಮ ಸಭೆ-ಹಳ್ಳಿಯ ವಿಧಾನಸಭೆ, 40. ಧಾರವಾಡ ಜಿಲ್ಲೆ - ಇಸ್ರೋ, ಗಗನಯಾನದಲ್ಲಿ ಹಣ್ಣಿನ ನೊಣಗಳು.
41. ಭಾರತೀಯ ರೈಲ್ವೆ - ವಂದೇ ಭಾರತ್ ಎಕಗ್ಸ್‌ಪ್ರೆಸ್, 42. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಹೆಣ್ಣು ಭ್ರೂಣಹತ್ಯೆ ತಡೆ ಅಂಧತ್ವ ಶ್ರವಣ ದೋಷ ನಿವಾರಣ ಕಾರ್ಯಕ್ರಮ, 43. ಹಾಸನ ಜಿಲ್ಲೆ - ವಿಶ್ವ ಪಾರಂಪರಿಕ ತಾಣ ಬೇಲೂರು ಮತ್ತು ಹಳೆಬೀಡು, 44. ಚಿಕ್ಕಮಗಳೂರು ಜಿಲ್ಲೆ - ತೇಜಸ್ವಿ ವಿಸ್ಮಯ ಲೋಕ.
45. ತುಮಕೂರು ಜಿಲ್ಲೆ - ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ದರಬೆಟ್ಟ ಮತ್ತು ಬಯಲುಸೀಮೆಯನ್ನಾಳಿದ ಹೆಮ್ಮೆಯ ಅರಸರು, 46. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ - ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳು.
47. ವಾರ್ತಾ ಇಲಾಖೆ - ವಿಶ್ವಗುರು ಬಸವಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, 48. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ - ನಿಮ್ಮ ಮನೆಯೇ ನಿರಂತರ ಪಾಠಶಾಲೆ, 49. ಕೌಶಲ್ಯಾಭಿವೃದ್ಧಿ ಇಲಾಖೆ - ಕೌಶಲ್ಯ ಕರ್ನಾಟಕ, 50. ಸ್ತಬ್ದಚಿತ್ರ ಉಪ ಸಮಿತಿ - ಸಾಮಾಜಿಕ ನ್ಯಾಯ, 51. ಸ್ತಬ್ದಚಿತ್ರ ಉಪಸಮಿತಿ - ಆನೆ ಬಂಡಿಗಳು ಗಮನಸೆಳೆದವು.
ಇವುಗಳಿಗೆ ವಿವಿಧ ಜನಪದ ಕಲಾ ಪ್ರಕಾರಗಳಾದ ಜಗಲಿ, ಕಂಸಾಳೆ, ಕೊಡವ ನೃತ್ಯ, ಸುಗ್ಗಿಕುಣಿತ, ಡೊಳ್ಳುಕುಣಿತ, ವೀರಗಾಸೆ, ಪಟದ ಕುಣಿತ, ಹುಲಿವೇಷ, ಯಕ್ಷಗಾನ, ಗೊರವ ಕುಣಿತ, ಹುಲಿವೇಶ, ಹಗಲುವೇಷ, ಮರಗಾಲು, ನವಿಲು ಕುಣಿತ, ಕಂಸಾಳೆ, ನಗಾರಿ ನೃತ್ಯ, ಪಟದ ಕುಣಿತ, ಪೂಜಾ ಕುಣಿತ, ಕೊರಗ ಕುಣಿತ ಮೊದಲಾದವಿ ಸಾಥ್ ನೀಡಿದ್ದು ವಿಶೇಷವಾಗಿತ್ತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications