ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾರ್ಯಾರಂಭ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಅಕ್ಟೋಬರ್ 13: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ 13 ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ (ಆಕ್ಸಿಜನ್) ಘಟಕವು ಮಂಗಳವಾರದಿಂದ ಕಾರ್ಯಾರಂಭವಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗಲು ಈ ಘಟಕವನ್ನು ನಿರ್ಮಿಸಲಾಗಿದೆ. ಲಿಕ್ವಿಡ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ 13 ಸಾವಿರ ಲೀಟರ್ ಆಗಿದ್ದು, ಈ ಸ್ಥಾವರದಲ್ಲಿ 15 ದಿನಗಳವರೆಗೆ ಆಮ್ಲಜನಕ ಸಂಗ್ರಹ ಇರುತ್ತದೆ. ಮುಂದಿನ ದಿನಗಳಲ್ಲಿ ಕೋವಿಡ್ ಆಸ್ಪತ್ರೆ ಬ್ಲಾಕ್ ನಲ್ಲಿ ಒಂದು ಬಾರಿ ಸಂಗ್ರಹವಾದ ಲಿಕ್ವಿಡ್ ಆಕ್ಸಿಜನ್ ಅ‍ನ್ನು 300 ಆಕ್ಸಿಜನ್ ಹಾಸಿಗೆಗಳಿಗೆ ನಿರಂತರವಾಗಿ 15 ದಿನಗಳ ಕಾಲ ಪೂರೈಕೆ ಮಾಡಬಹುದಾಗಿದೆ.

ಕೊಡಗು; ಇನ್ನು ಮೈಸೂರಿನಿಂದ ಆಕ್ಸಿಜನ್ ತರಿಸುವುದು ಬೇಡಕೊಡಗು; ಇನ್ನು ಮೈಸೂರಿನಿಂದ ಆಕ್ಸಿಜನ್ ತರಿಸುವುದು ಬೇಡ

ಆಸ್ಪತ್ರೆಯಲ್ಲಿನ ಬಳಕೆಗೆ ಅನುಗುಣವಾಗಿ ಮತ್ತು ಅಗತ್ಯವಿದ್ದಾಗ ಅದನ್ನು ಪುನಃ ತುಂಬಿಸಲಾಗುತ್ತದೆ. ಪ್ರವಾಹ ಪರಿಸ್ಥಿತಿ ಅಥವಾ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರೂ ಆಸ್ಪತ್ರೆಯಲ್ಲಿ ಆಮ್ಲಜನಕದ ಉತ್ತಮ ಸಂಗ್ರಹವಿರುತ್ತದೆ. ಆಸ್ಪತ್ರೆಯಲ್ಲಿ ಅವಶ್ಯವಿರುವಷ್ಟು ಆಮ್ಲಜನಕದ ಸಂಗ್ರಹ ಇರುವುದರಿಂದ ಕೊಡಗು ಜಿಲ್ಲೆಯ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Kodagu: Liquid Oxygen Plant In District Hospital Started Operations Today

Recommended Video

RR Nagar , by electionಗೆ JDS ಅಭ್ಯರ್ಥಿ ಘೋಷಣೆ | Oneindia Kannada

ಜಿಲ್ಲೆಯ ಕೊರೊನಾ ಪ್ರಕರಣಗಳು: ಕೊಡಗು ಜಿಲ್ಲೆಯಲ್ಲಿ ಇಂದು 151 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3848ಕ್ಕೆ ಏರಿದೆ. ಇದುವರೆಗೂ 3108 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 688 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಒಟ್ಟು 52 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

English summary
The 13,000 liter capacity oxygen plant in the Kodagu district hospital premises has been started its operation today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X