ಕೊಡಗಿನಲ್ಲಿ ಬಿಡುವು ನೀಡಿದ ವರುಣ ಮತ್ತೆ ಅಬ್ಬರಿಸುತ್ತಾನಾ?

ಮಡಿಕೇರಿ, ಜುಲೈ 12; ಮೃಗಶಿರಾ ಮಳೆಯ ನಂತರ ಆರಿದ್ರಾ ಮಳೆ ಸುರಿಯದ ಕಾರಣ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಕೊಡಗು ಜಿಲ್ಲೆಯ ರೈತರು ನೀರಿಲ್ಲದೆ ಕಂಗಾಲಾಗಿದ್ದರು. ಇದೀಗ ಪುನರ್ವಸು ಮಳೆ ಬಿರುಸು ಪಡೆಯುತ್ತಿದ್ದು, ಮತ್ತೆ ಮಳೆಗಾಲದ ವಾತಾವರಣ ಕಾಣಿಸುತ್ತಿದೆ.

ಧಾರಾಕಾರವಲ್ಲದಿದ್ದರೂ ನಿಧಾನವಾಗಿ ಮಳೆ ವೇಗ ಪಡೆದುಕೊಳ್ಳುತ್ತಿದ್ದು ಜುಲೈ ತಿಂಗಳ ಕೊನೆ ಹಾಗೂ ಆಗಸ್ಟ್ ತಿಂಗಳ ಮೊದಲ ವಾರದ ನಡುವಿನ ಅವಧಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುವುದು ಸಾಮಾನ್ಯವಾಗಿದೆ. ಈಗಿನ ವಾತಾವರಣವನ್ನು ಗಮನಿಸಿದರೆ ಪುನರ್ವಸು ಮತ್ತು ಪುಷ್ಯ ಮಳೆಗಳು ಅಬ್ಬರಿಸುವ ಸಾಧ್ಯತೆಯಿರುವ ಕಾರಣ ಜಿಲ್ಲಾಡಳಿತ ಅಗತ್ಯ ಕ್ರಮ ಸಹ ಕೈಗೊಂಡಿದೆ.

ಮಳೆ ಸುರಿದು ಭೂಮಿಯಿಂದ ಅಂತರ್ಜಲ ಹೆಚ್ಚಿದರೆ ಮಾತ್ರ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಇಲ್ಲಿನ ಹೆಚ್ಚಿನ ಜನರು ಮಳೆಯ ನೀರನ್ನೇ ನಂಬಿ ಭತ್ತದ ಕೃಷಿ ಮಾಡುತ್ತಿದ್ದು, ಮೊದಲಿನಂತೆ ಸಮಯಕ್ಕೆ ಸರಿಯಾಗಿ ಮಳೆ ಸುರಿಯದ ಕಾರಣ ಕೃಷಿ ಮಾಡುವುದು ಕಷ್ಟವಾಗುತ್ತದೆ. ಮಳೆಗಾಲದಲ್ಲಿ ಮಳೆ ಬಾರದೆ ಇತರೆ ಸಮಯಗಳಲ್ಲಿ ಮಳೆ ಸುರಿದು ಭತ್ತದ ಬೆಳೆಗೆ ಹಾನಿಯಾಗುತ್ತದೆ. ಇದರಿಂದ ನಿರೀಕ್ಷಿತ ಇಳುವರಿ ಸಿಗದೆ ನಷ್ಟ ಅನುಭವಿಸುವಂತಾಗಿದೆ.

Kodagu Farmers Have Hope On July Rain For Agriculture Activities

ಈ ಬಾರಿ ಜೂನ್ ತಿಂಗಳಲ್ಲಿ ಮೃಗಶಿರಾ ಮಳೆ ಉತ್ತಮವಾಗಿ ಸುರಿದು ನದಿ, ತೊರೆಗಳು ಉಕ್ಕಿ ಹರಿದಿದ್ದವು ಇದರಿಂದ ಗದ್ದೆಗೆ ನೀರು ಹರಿದು ಬಂದಿತ್ತು. ಆದರೆ ಮೃಗಶಿರಾ ಮಳೆಯ ನಂತರ ಆರಿದ್ರಾ ನಕ್ಷತ್ರದ ಮಳೆ ಸುರಿಯದೆ ಸುಮಾರು ಎರಡು ವಾರಗಳ ಕಾಲ ಬಿಡುವು ನೀಡಿದ್ದರಿಂದ ಕಾವೇರಿ ನದಿ ಸೇರಿದಂತೆ ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಅಷ್ಟೇ ಅಲ್ಲ ಹಾರಂಗಿ ಜಲಾಶಯಕ್ಕೆ ಒಳ ಹರಿವು ಕೂಡ ಇಳಿಮುಖವಾಯಿತು.

ಒಂದು ವೇಳೆ ಮಳೆಯ ಅಬ್ಬರ ಅದೇ ರೀತಿ ಮುಂದುವರೆದಿದ್ದರೆ ಇಷ್ಟರಲ್ಲಿಯೇ ಹಾರಂಗಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇತ್ತಲ್ಲದೆ, ಕೆಆರ್‌ಎಸ್ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿತ್ತು. ಆದರೆ ಒಮ್ಮೆಲೇ ಮಳೆ ಬಿಡುವು ನೀಡುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಇದೀಗ ಮಳೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಅಬ್ಬರಿಸಿ ಇನ್ಯಾವ ರೀತಿಯ ಅನಾಹುತ ಮಾಡಿ ಬಿಡುತ್ತದೆಯೋ? ಎಂಬ ಭಯವೂ ಈಗ ಆರಂಭವಾಗಿದೆ.

Kodagu Farmers Have Hope On July Rain For Agriculture Activities

ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 14.11 ಮಿ. ಮೀ. ಮಳೆ ಸುರಿದಿದೆ. ಅತಿ ಹೆಚ್ಚು 36 ಮಿ. ಮೀ. ಮಳೆ ಕೊಡಗಿನ ಗಡಿಭಾಗ ಸಂಪಾಜೆಯಲ್ಲಿ ಸುರಿದಿದೆ. ಸದ್ಯ ಸಾಧಾರಣವಾಗಿ ಮಳೆ ಸುರಿಯುತ್ತಿರುವುದು ನೆಮ್ಮದಿ ತಂದಿದೆ. ಹೀಗೆಯೇ ಮುಂದುವರೆದರೆ ರೈತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+