ಕೊಡಗು ಮಳೆ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟದ 30 ಸಾವಿರ ಲೀ. ಹಾಲು

ಮಡಿಕೇರಿ, ಆಗಸ್ಟ್ 19: ಹಾಸನ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಹಾಲು, 5 ಸಾವಿರ ಬಿಸ್ಕತ್, 200 ಕ್ವಿಂಟಲ್ ಅಕ್ಕಿ ಮತ್ತು ತೊಗರಿ ಬೇಳೆ, ಒಂದು ಸಾವಿರ ಬಾಕ್ಸ್ ಕುಡಿಯುವ ನೀರನ್ನು ನಿರಾಶ್ರಿತರಿಗೆ ಪೂರೈಸಲಾಗಿದೆ. ಅಡುಗೆ ಎಣ್ಣೆ ಮತ್ತು ಬಟ್ಟೆ ಪೂರೈಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಅತಿವೃಷ್ಟಿಯಿಂದ ನಿರಾಶ್ರಿತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಾಶ್ರಿತರಿಗೆ ಸರಕಾರ ನೆರವು ನೀಡಲಿದೆ. ಅತಿವೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಕುಸಿದಿವೆ. ಮಳೆ ನಿಂತ ನಂತರ ಈ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂದಿದ್ದಾರೆ.

ಲೋಕೋಪಯೋಗಿ ಇಲಾಖೆ ರಸ್ತೆಗೆ ಸಂಬಂಧಿಸಿದಂತೆ 150 ಕೋಟಿ ರುಪಾಯಿನಷ್ಟು ನಷ್ಟ ಉಂಟಾಗಿದೆ. ಅತಿವೃಷ್ಟಿಯಿಂದ ಸುಮಾರು 500 ಕೋಟಿ ರುಪಾಯಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮಡಿಕೇರಿ-ಮಂಗಳೂರು ರಸ್ತೆ ಕಾಮಗಾರಿಯನ್ನು ಮಳೆ ನಿಂತ ನಂತರವೇ ಆರಂಭಿಸಲು ಸಾಧ್ಯ. ಸದ್ಯಕ್ಕೆ ಲಘು ವಾಹನಗಳ ಓಡಾಟಕ್ಕೆ ಎಲ್ಲಾ ರೀತಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

Kodagu calamity: 30 thousand litre milk contributed by Hassan milk federation

ಸದ್ಯ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಎರಡು ಉಪ ವಿಭಾಗಗಳ ಕಚೇರಿ, ಮಡಿಕೇರಿಯಲ್ಲಿ ಒಂದು ವಿಶೇಷ ವಿಭಾಗದ ಕಚೇರಿ ತೆರೆಯಲಾಗಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+