ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಟ್ಟನೂರು ವಿಮಾನ ನಿಲ್ದಾಣ ಕೊಡಗಿಗೂ ಅನುಕೂಲ..

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 17: ಕೊಡಗಿನ ಜನತೆಗೆ ಸಿಹಿಸುದ್ದಿ, ಕೇರಳದ ಮಟ್ಟನೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡಲಿದ್ದು, ಇದರಿಂದ ಕೊಡಗಿನ ಜನರಿಗೆ ಅನುಕೂಲವಾಗಲಿದೆ.

ಸುಮಾರು ರು. 1900 ಕೋಟಿ ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವಿಮಾನ ನಿಲ್ದಾಣದ ಕಾಮಗಾರಿ ಮುಗಿದು ಕಾರ್ಯಾರಂಭವಾದರೆ ಇದರಿಂದ ಹೆಚ್ಚಿನ ಅನುಕೂಲ ಕೊಡಗಿಗೆ ಆಗಲಿದೆ.[ಕೇರಳದಲ್ಲಿ ವಿಮಾನ ನಿಲ್ದಾಣ.. ಕೊಡಗಿನವರಿಗೆ ವರದಾನ..]

ಮಡಿಕೇರಿಯಿಂದ ಮಟ್ಟನ್ನೂರಿನ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 130 ಕಿ.ಮೀ. ದೂರವಿದೆ. ವಿರಾಜಪೇಟೆ ಕಡೆಯಿಂದ ಇನ್ನುಹೆಚ್ಚಿನ ಸಮೀಪವಾಗಲಿದೆ. ಹೀಗಾಗಿ ಕೊಡಗಿಗೂ ಸಮೀಪವಾಗುತ್ತದೆ. ಇದರಿಂದ ಕೊಡಗಿನ ಪ್ರದೇಶಗಳ ಉತ್ಪನ್ನಗಳ ವ್ಯಾಪಾರಕ್ಕೆ, ಭೂಮಿಗೆ, ವಿದೇಶಿ ಪ್ರಯಾಣಕ್ಕೆ ಬೇಡಿಕೆ ಹೆಚ್ಚುತ್ತದೆ. ಅಲ್ಲದೆ ಕೊಡಗಿನ ಜನರ ಆರ್ಥಿಕ ಜೀವನ ಮಟ್ಟ ಸುಧಾರಿಸಿ, ಉದ್ಯೋಗ ಸೃಷ್ಟಿಯಾಗಲಿದೆ.

ಈ ವಿಮಾನ ನಿಲ್ದಾಣ ಮಂಗಳೂರಿಗಿಂತ ಹತ್ತಿರವಾಗುವುದರಿಂದ ಇದನ್ನು ಬಳಸಲು ಕೊಡಗಿನವರಿಗೆ ಅನುಕೂಲವಾಗಲಿದೆ.

ಬೆಟ್ಟಗಳನ್ನು ಅಗೆದು ನಿಲ್ದಾಣ ನಿರ್ಮಾಣ

ಬೆಟ್ಟಗಳನ್ನು ಅಗೆದು ನಿಲ್ದಾಣ ನಿರ್ಮಾಣ

2013ರಲ್ಲಿ ಆರಂಭಗೊಂಡ ಮಟ್ಟನೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಬಿಡುವಿಲ್ಲದೆ ಸಾಗುತ್ತಿದೆ. ಮಟ್ಟನ್ನೂರಿನಿಂದ ವಿಮಾನ ನಿಲ್ದಾಣಕ್ಕೆ 2 ಕಿ. ಮೀ ದೂರವಿರುವ ಮುರುಗನ್ (ಹಾವು) ಪರಂಬು ಎಂಬಲ್ಲಿ ಎರಡು ಬೆಟ್ಟಗಳನ್ನು ಅಗೆದು ಸಮತಟ್ಟು ಮಾಡಿ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ.

1200 ಎಕರೆ ಭೂಮಿ ಬಳಕೆ

1200 ಎಕರೆ ಭೂಮಿ ಬಳಕೆ

ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಾಥಮಿಕ ಹಂತದಲ್ಲಿ 1200 ಎಕರೆ ಭೂಮಿಯನ್ನು ಬಳಕೆ ಮಾಡಲಾಗಿದೆಯಾದರೂ ಒಟ್ಟು 2 ಸಾವಿರಗಳಷ್ಟು ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲಾಗಿದೆ. ನಿಲ್ದಾಣದೊಳಗೆ ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಟರ್ಮಿನಲ್‍ವರೆಗೆ ಫ್ಲೈಓವರ್‍ನ್ನು ನಿರ್ಮಿಸಲಾಗಿದೆ. ಜೊತೆಗೆ ಅದರ ಮುಂಭಾಗದಲ್ಲಿ ಕಾರ್ ಪಾರ್ಕಿಂಗ್ ಸಿದ್ಧವಾಗಿದೆ. ನಿಲ್ದಾಣದ ಎಡಭಾಗದಲ್ಲಿ "ಏರ್ ಪೋರ್ಟ್ ಟ್ರಾಫಿಕ್ ಕಂಟ್ರೋಲ್" ಕಟ್ಟಡವನ್ನು ನಿರ್ಮಿಸಲಾಗಿದೆ.

ವ್ಯವಸ್ಥಿತ ರನ್ ವೇ

ವ್ಯವಸ್ಥಿತ ರನ್ ವೇ

3050ಮೀ. ಉದ್ದದ ವ್ಯವಸ್ಥಿತ ರನ್ ವೇ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದನ್ನು ಭವಿಷ್ಯದ ದಿನಗಳಲ್ಲಿ 4000 ಮೀಟರ್ ಗೆ ಹೆಚ್ಚಿಸುವ ಉದ್ದೇಶವನ್ನು ಹೊಂದಿರುವುದರಿಂದ ಇದರ ಯೋಜನೆ ಸಿದ್ದವಿದೆ. ಆಕಸ್ಮಿಕವಾಗಿ ವಿಮಾನ ರನ್‍ ವೇಯಲ್ಲಿ ಜಾರಿ ಹೊರಗೆ ಬಂದಾಗ ಅವುಗಳ ವೇಗವನ್ನು ನಿಯಂತ್ರಿಸಿ ನಿಲುಗಡೆಗೊಳಿಸಲು ಸುಮಾರು 250 ಚದರ ಅಡಿಗಳಷ್ಟು ರನ್‍ ವೇಯನ್ನು ಸೇಫ್ಟಿ ಏರಿಯಾವನ್ನಾಗಿ ಮೀಸಲಿರಿಸಲಾಗಿದೆ.

ಭಾರೀ ಗಾತ್ರದ ವಿಮಾನ ನಿಲುಗಡೆಗೆ ಅವಕಾಶ

ಭಾರೀ ಗಾತ್ರದ ವಿಮಾನ ನಿಲುಗಡೆಗೆ ಅವಕಾಶ

ಟರ್ಮಿನಲ್ ಅಲ್ಲಿ 9 ಲಕ್ಷ ಚದರ ಅಡಿ ನಿವೇಶನದಲ್ಲಿ ಏರ್ ಟರ್ಮಿನಲ್ ನಿರ್ಮಿಸಲಾಗಿದೆ. ಇದು ಕೂಡ ನಿರ್ಮಾಣದ ಹಂತದಲ್ಲಿದೆ. ಇಲ್ಲಿಯ ನಿಲ್ದಾಣದೊಳಗೆ ಸುಮಾರು 20 ಸಣ್ಣ ವಿಮಾನಗಳು 14 ಭಾರೀ ಗಾತ್ರದ ವಿಮಾನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವಿಮಾನಗಳಿಗೆ ಇಂಧನ ತುಂಬಿಸಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನ ಎರಡು ಬೃಹತ್ ಗಾತ್ರದ ಟ್ಯಾಂಕ್‍ ಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ವಿದೇಶಗಳಾದ ದುಬೈ, ಅಬುದಾಬಿ, ಬೆಹರೇನ್, ಕುವೈತ್, ಮುಂಬೈ ಹಾಗೂ ಕೊಡಗು ಸೇರಿದಂತೆ ಚಿಕ್ಕಮಗಳೂರು, ಮೈಸೂರು, ಮಂಗಳೂರು, ಕಣ್ಣೂರು ಮತ್ತು ಸುತ್ತಮುತ್ತಲಿನ ಊರುಗಳ ಪ್ರಯಾಣಿಕರು ಸೇವೆಯನ್ನು ಪಡೆಯಬಹುದಾಗಿದೆ.

ಅಗ್ನಿ ಆಕಸ್ಮಿಕ ತಡೆಗೆ ವಿಶೇಷ ತಂತ್ರಜ್ಞಾನ

ಅಗ್ನಿ ಆಕಸ್ಮಿಕ ತಡೆಗೆ ವಿಶೇಷ ತಂತ್ರಜ್ಞಾನ

ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದಲ್ಲಿ ಅದನ್ನು ತಡೆಗಟ್ಟುವ ಉದ್ದೇಶದಿಂದ ಓಸ್ಟ್ರಿಯಾ ಮೆಷಿನ್ ತಯಾರಕರು ಅತ್ಯಾಧುನಿಕವಾಗಿ ತಂತ್ರಜ್ಞಾನವನ್ನು ಹೊಂದಿದಂತೆ ತಯಾರಿಸಿರುವ ಓಲ್ವೋ ಎಂಜಿನ್ ಅನ್ನು ಹೊಂದಿರುವ ಅಗ್ನಿಶಾಮಕ 4 ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಈ ಒಂದು ಅಗ್ನಿಶಾಮಕ ವಾಹನಕ್ಕೆ ರು.5 ಕೋಟಿ ಗಳಾಗಿದ್ದು, ಇದು 1500 ಕಿಮೀ ವೇಗದಿಂದ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

English summary
Coorgians are awaiting the completion of International Airport Construction work at Mattanur of Kerala, which may get ready by December. According to them, after the completion of air port, the real estate in Coorg gets boomed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X