ಮುಕ್ತಿ ಸಿಗದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣ
ಮಡಿಕೇರಿ, ಆಗಸ್ಟ್ 28: ಕೊಡಗು ಜಿಲ್ಲೆಯಲ್ಲಿ ಈ ಮೊದಲು ಜಿಲ್ಲಾಧಿಕಾರಿ ಆಗಿದ್ದ ಅನುರಾಗ್ ತಿವಾರಿ ಅವರ ಸಂಶಯಾಸ್ಪದ ಸಾವಿನ ಪ್ರಕರಣ ನಾಲ್ಕು ವರ್ಷ ಕಳೆದರೂ ಅಂತ್ಯವಾಗುವಂತೆ ಕಾಣುತ್ತಿಲ್ಲ.
Recommended Video
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸೂಕ್ತ ಸಾಕ್ಷ್ಯ ಇಲ್ಲದ ಕಾರಣ ಮುಕ್ತಾಯಗೊಳಿಸಲು ಉತ್ತರಪ್ರದೇಶ ಹೈಕೋರ್ಟ್ ಗೆ ಸಿಬಿಐ ತನಿಖಾ ತಂಡ ಅರ್ಜಿ ಸಲ್ಲಿಸಿತ್ತು.
ಆದರೆ ಉತ್ತರಪ್ರದೇಶ ಹೈಕೋರ್ಟ್ ಈ ಬಗ್ಗೆ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸದೇ ಮುಂದುವರಿಸಿ, ಸೆಪ್ಟೆಂಬರ್ ಹತ್ತರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣವನ್ನು ಮುಕ್ತಾಯಗೊಳಿಸಲು ಮುಂದಾಗಿದ್ದ ಸಿಬಿಐ ಕ್ರಮದ ವಿರುದ್ಧ ತಿವಾರಿ ಸಹೋದರ ಮಾಯಾಂಕ್ ತಿವಾರಿ ಹೈಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.

ಇದೀಗ ಮತ್ತೆ ಸಿಬಿಐ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯ ಕಲೆಹಾಕಲು ತನಿಖೆ ಮುಂದುವರಿಸಬೇಕಾಗಿದೆ. ಅನುರಾಗ್ ತಿವಾರಿ ಅವರು ಉತ್ತರಪ್ರದೇಶದ ಲಖನೌ ರಸ್ತೆ ಬದಿಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.












Click it and Unblock the Notifications