ಹಾರಂಗಿ ಡ್ಯಾಮ್ ಒಡೆದಿಲ್ಲ, ಕೊಡಗಿನಲ್ಲಿ ಭೂಕಂಪವಾಗಲ್ಲ: ಸಿಎಂ ಟ್ವೀಟ್
Recommended Video

ಮಡಿಕೇರಿ, ಆಗಸ್ಟ್ 19: ಸತತ ಮಳೆಯಿಂದ ತತ್ತರಿಸಿರುವ ಕಿತ್ತಲೆ ನಾಡು ಕೊಡಗಿನಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಹಾರಂಗಿ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಸುಳ್ಳು ಸುದ್ದಿಯೊಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಕಿಡಿಗೇಡಿಗಳು ಹಬ್ಬಿಸಿರುವ ಈ ಸುಳ್ಳು ಸುದ್ದಿಯ ಬಗ್ಗೆ ಕಾವೇರಿ ನೀರಾವರಿ ನಿಗಮ ನಿಯಮಿತ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಆರ್ ಕೆ ರಾಜೇಗೌಡ ಅವರು ಸ್ಪಷ್ಟನೆ ನೀಡಿದ್ದು, ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.
ಇಂಥ ವದಂತಿಗೆ ಕಿವಿಗೊಡಬೇಡಿ, ಅಣೆಕಟ್ಟು ಸುಭದ್ರವಾಗಿದೆ ಎಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಆರ್ ರಾಜೇಗೌಡ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಮಳೆ ಸಂತ್ರಸ್ತ ಕೊಡಗು ಜನತೆಗೆ ನೆರವು ಎಲ್ಲೆಡೆಯಿಂದ ಹರಿದು ಬರುತ್ತಿದೆ. ಭಾರತೀಯ ಸೇನೆ, ವಿಪತ್ತು ನಿರ್ವಹಣಾ ದಳ, ಆರೆಸ್ಸೆಸ್, ಸ್ವಯಂ ಸೇವಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ನೆರವಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೆರೆ ಪರಿಹಾರ ಕಾರ್ಯವನ್ನು ಗಮನಿಸುತ್ತಿದ್ದಾರೆ. ಈ ನಡುವೆ ಆತಂಕ ಸೃಷ್ಟಿಸುವ ಇಂಥ ಸುದ್ದಿಗಳನ್ನು ನಂಬಬೇಡಿ ಎಂದು ಸಾರ್ವಜನಿಕರು ಕೂಡಾ ಮನವಿ ಮಾಡಬೇಕಾಗಿದೆ.
ಕೊಡಗು ಜಿಲ್ಲೆಯಲ್ಲಿ ಭೂಕಂಪನವಾಗಲಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದಾಗಿ ಕೊಡಗು ಜಿಲ್ಲೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.#KarnatakaRains pic.twitter.com/an61SUnUYQ
— CM of Karnataka (@CMofKarnataka) August 18, 2018
ಕೊಡಗು ಜಿಲ್ಲೆಯಲ್ಲಿ ಭೂಕಂಪವಾಗಲಿದೆ ಎಂಬ ಸುದ್ದಿ ನಂಬಬೇಡಿ ಎಂದು ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸಂದೇಶ












Click it and Unblock the Notifications