ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಭಟನಾ ಸ್ಥಳದ ವಿದ್ಯುತ್ ಕಟ್ ಮಾಡಿದ ಸಿದ್ದಾಪುರ ಗ್ರಾ.ಪಂ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 11: ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯ ಪ್ರವಾಹದಿಂದಾಗಿ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ ಸಂತ್ರಸ್ತರು ಸಿದ್ದಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿದರು.

ಆರು ತಿಂಗಳು ಕಳೆದರೂ ಮನೆ ಬಾಡಿಗೆ, ಪರಿಹಾರ, ಶಾಸ್ವತ ಸೂರು ಸಿಗದೆ ಸಂತ್ರಸ್ಥರು ಕಂಗಾಲಾಗಿದ್ದಾರೆ. ಶಾಶ್ವತ ಸೂರು ಸಿಗುವವರೆಗೂ ಅಹೋರಾತ್ರಿ ಪ್ರತಿಭಟನೆ ಮುಂದುವರಿಕೆಯ ಎಚ್ಚರಿಕೆ ಕೊಟ್ಟಿದ್ದಾರೆ.

ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಕೊಡಗಿನ ಮೂಲದ ಟೆಕ್ಕಿ ಕಣ್ಮರೆಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಕೊಡಗಿನ ಮೂಲದ ಟೆಕ್ಕಿ ಕಣ್ಮರೆ

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಯ್ಯ ಗ್ರಾಮದ 302 ಸಂತ್ರಸ್ಥ ಕುಟುಂಬಗಳು ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂದೆ ಎರಡನೇ ದಿನದ ಅಹೋರಾತ್ರಿ ಪ್ರತಿಭಟನೆ ಮಾಡಿದ್ದಾರೆ. ಪ್ರವಾಹ ಸಂದರ್ಭದಲ್ಲಿ 89 ಮನೆಗಳು ಸಂಪೂರ್ಣ ನಾಶವಾಗಿದ್ದು. 150 ಮನೆಗಳಿಗೆ ಹಾನಿಯಾಗಿದೆ.

Electricity Cut On Protest Site In Siddapura Gram Panchayat

ಸೂರು ಸಂತ್ರಸ್ಥ ಕುಟುಂಬಗಳು ಪ್ರತಿಭಟನೆ ವೇಳೆ ಪಂಚಾಯಿತಿ ಮುಂಭಾಗದಲ್ಲಿದ್ದ ವಿದ್ಯುತ್ ದೀಪವನ್ನು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕಟ್ ಮಾಡಿದ್ದಾರೆ. ಇದರಿಂದ ಪಂಚಾಯಿತಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಣದ ಬತ್ತಿ ಹಚ್ಚಿ ಕರಡಿಗೊಡು, ಗುಯ್ಯ ಕಾವೇರಿ ನದಿ ದಡ ಸಂತ್ರಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

English summary
The victims Lost of their houses and property due to heavy rains in August. Therefore Protest in front Of Siddapura village Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X