ಟಿಪ್ಪು ಸುಲ್ತಾನ್ ಕುಟುಂಬದ ಸದಸ್ಯ ಡಿಕೆ ಶಿವಕುಮಾರ್: ಹೊಸ ಕತೆ ಹೇಳಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ
ಕೊಡಗು, ಮೇ 06: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ವಿರೋಧ ಪಕ್ಷ ಕಾಂಗ್ರೆಸ್ ಕರ್ನಾಟಕವನ್ನು 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ದ ಕಣಿವೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಶರ್ಮಾ ಆರೋಪಿಸಿದರು.
ಇದೇ ವೇಳೆ, ಕರ್ನಾಟಕ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ಹೊಸ ವಾಗ್ದಾಳಿ ನಡೆಸಿದರು. ಡಿಕೆ ಶಿವಕುಮಾರ್ ಅವರು ಟಿಪ್ಪು ಸುಲ್ತಾನ್ ಕುಟುಂಬದವರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕ ಪಿಎಫ್‌ಐ ಕಣಿವೆಯಾಗುತ್ತದೆ ಎಂದು ಶರ್ಮಾ ಅವರು ಕೊಡಗು ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಗುಡುಗಿದರು.

ಆ ಕಾಲದ ಹಿಂದೂ ಸಮುದಾಯವನ್ನು ಭಯಭೀತಗೊಳಿಸಿ ಸಾವಿರಾರು ಜನರನ್ನು ಬಲವಂತವಾಗಿ ಮತಾಂತರಗೊಳಿಸಿದ ನಿರಂಕುಶಾಧಿಕಾರಿ ಟಿಪ್ಪು ಸುಲ್ತಾನ್ ಎಂದು ಆರೋಪಿಸಿದರು.
ಅಸ್ಸಾಂ ಮೊಘಲರ ದಾಳಿಗೆ ಒಳಗಾಗಿದೆ ಎಂದು ಶರ್ಮಾ ಹೇಳಿದರು. ಆದರೆ ಈಶಾನ್ಯ ರಾಜ್ಯವು ಆಕ್ರಮಣದ ಅನೇಕ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿತು. ಅದೇ ರೀತಿ, ಕರ್ನಾಟಕದ ಕೊಡವ (ಕೊಡಗು ಜಿಲ್ಲೆಯಿಂದ) ಜನರು ಟಿಪ್ಪು ಸುಲ್ತಾನ್‌ನನ್ನು ಹಲವಾರು ಬಾರಿ ಸೋಲಿಸಿದ್ದಾರೆ. 80,000 ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ತಿಳಿಸಿದರು.
ಈಗ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವುದಾಗಿ ಹೇಳುತ್ತಿದ್ದಾರೆ. ನೀವು ಅವರ ಜಯಂತಿಯನ್ನು ಆಚರಿಸಲು ಬಯಸಿದರೆ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋಗಿ ಆದರೆ ಭಾರತದಲ್ಲಿ ಅದನ್ನು ಮಾಡಲು ನಿಮಗೆ ಹಕ್ಕಿಲ್ಲ ಎಂದು ಅವರು ಹೇಳಿದರು.

ಇಂದು ಮುಂಜಾನೆ ಹಿಮಂತ ಶರ್ಮಾ 'ದಿ ಕೇರಳ ಸ್ಟೋರಿ' ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಕುರಿತ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ವಿರೋಧ ಪಕ್ಷ ಬೆಂಬಲಿಸಿದೆ ಆದರೆ 'ದಿ ಕೇರಳ ಸ್ಟೋರಿ' ಅನ್ನು ಏಕೆ ಟೀಕಿಸಿದೆ ಎಂದು ಅವರು ಕೇಳಿದರು.
ಏತನ್ಮಧ್ಯೆ, ಕಾಂಗ್ರೆಸ್ ತನ್ನ ಕರ್ನಾಟಕ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಬಜರಂಗದಳವನ್ನು ನಿಷೇಧಿತ ಪಿಎಫ್‌ಐಗೆ ಹೋಲಿಸಿದೆ. ಬಿಜೆಪಿಗೆ ಬರುವ ಪ್ರತಿ ಮತವೂ ಕರ್ನಾಟಕವನ್ನು ಪಿಎಫ್‌ಐನಿಂದ ರಕ್ಷಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.












Click it and Unblock the Notifications