ಕೊಡಗಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ನಿರಾಶ್ರಿತರೊಂದಿಗೆ ಮಾತುಕತೆ
Recommended Video

ಕೊಡಗಿಗೆ ಸಿದ್ದರಾಮಯ್ಯ ಭೇಟಿ | Oneindia Kannada
ಕೊಡಗು, ಆಗಸ್ಟ್ 23: ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಇಂದು ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿದರು.
ಸರ್ಕಾರ ನಿರಾಶ್ರಿತರಿಗೆ ಕೈಗೊಂಡಿರುವ ಸೌಕರ್ಯಗಳನ್ನೂ ಪರಿಶೀಲಿಸಿದ ಅವರು, ನಿರಾಶ್ರಿರಿಂದಲೂ ಮಾಹಿತಿ ಪಡೆದರು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಕೊಡಗಿನ ಪುನರ್ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂಬ ಭರವಸೆಯೂ ಇದರಿಂದ ವ್ಯಕ್ತವಾಯಿತು.
ಇಂದು ಪೂರ್ಣ ಕೊಡಗಿನಲ್ಲೇ ಇರಲಿರುವ ಸಿದ್ದರಾಮಯ್ಯ ಅವರು, ಪರಿಹಾರ ಕೇಂದ್ರಗಳ ಭೇಟಿ, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ, ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಸರ್ಕಾರವನ್ನು ಪತ್ರಗಳ ಮೂಲಕ ಚುಚ್ಚುತ್ತಾ ಎಚ್ಚರದಿಂದಿರುವ ಕಾರ್ಯ ಮಾಡುತ್ತಿರುವ ಸಿದ್ದರಾಮಯ್ಯ ಅವರು, ಕೊಡಗು ಭೇಟಿಯ ನಂತರವೂ ಕುಮಾರಸ್ವಾಮಿ ಅವರಿಗೆ ಕೊಡಗಿನ ಪುನರ್ ಕಟ್ಟುವಿಕೆ ಕುರಿತಂತೆ ಪತ್ರದ ಮೂಲಕ ಒತ್ತಡ ಹೇರುವ ಸಾಧ್ಯೆ ಇದೆ.












Click it and Unblock the Notifications