ಸೆ.8ಕ್ಕೆ ಕೊಡಗು ಜಿಲ್ಲೆಗೆ ಬರಲಿದೆ ಕೇಂದ್ರ ಪರಿಶೀಲನಾ ತಂಡ

ಮಡಿಕೇರಿ, ಸೆಪ್ಟೆಂಬರ್ 3: ಪ್ರಕೃತಿ ವಿಕೋಪ ಪೀಡಿತ ಕೊಡಗು ಜಿಲ್ಲೆಯಲ್ಲಿ ಭೂ ಕುಸಿತ ಹಾಗೂ ಮಹಾ ಮಳೆಯಿಂದ ಉಂಟಾದ ಸಮಸ್ಯೆ ಪರಿಶೀಲನೆಗೆ ಕೇಂದ್ರ ಸರ್ಕಾರದ ಪರಿಶೀಲನಾ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ.

Recommended Video

      Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Oneindia Kannada

      ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಸೆಪ್ಟೆಂಬರ್ 8ರಂದು ಕೇಂದ್ರ ಸರ್ಕಾರದ ಕಾರ್ಯದರ್ಶಿ ಪ್ರತಾಪ್ ನೇತೃತ್ವದಲ್ಲಿ ಕೇಂದ್ರ ಸರಕಾರದ ಪರಿಶೀಲನಾ ತಂಡವು ಕೊಡಗಿಗೆ ಭೇಟಿ ನೀಡಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

      ಈ ತಂಡವು ಬುಧವಾರ ಮುಖ್ಯಮಂತ್ರಿ ಹಾಗೂ ಪ್ರಮುಖ ಸಚಿವರೊಂದಿಗೆ ಸಭೆ ನಡೆಸಲಿದ್ದು ರಾಜ್ಯದ ಇತರೆಡೆ ಉಂಟಾಗಿರುವ ಅತಿವೃಷ್ಟಿ ಹಾನಿ ಬಗ್ಗೆ ಸಮಗ್ರ ವರದಿಯನ್ನು ಈ ಸಮಯದಲ್ಲಿ ಸಲ್ಲಿಸಲಾಗುತ್ತದೆ. ಅಂದಾಜು 4,800 ಕೋಟಿ ರೂಪಾಯಿ ಅತಿವೃಷ್ಟಿಯಿಂದ ನಷ್ಟ ಸಂಭವಿಸಿದೆ ಎಂದು ಆರ್ ಅಶೋಕ್ ತಿಳಿಸಿದ್ದಾರೆ.

      Kodagu: Central Inspection Team Visiting On September 8

      ಈ ಬಾರಿ ಕೇಂದ್ರ ಸರ್ಕಾರ ರಾಜ್ಯದ ಕೋರಿಕೆಯನ್ನು ಮನ್ನಿಸಿ ಅಧಿಕ ಹಣ ಪರಿಹಾರ ರೂಪದಲ್ಲಿ ನೀಡಬಹುದು ಎಂಬ ಆಶಾಭಾವನೆಯನ್ನು ಅಶೋಕ್ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+