₹35.86 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿ ಪೂರ್ಣ: ಭಾಗಮಂಡಲದಲ್ಲಿ ಆ ದೊಡ್ಡ ಸಮಸ್ಯೆ ಬಗೆಹರಿಯುತ್ತಾ?

ಕೊಡಗು, ಮೇ, 07: ಕೊಡಗು ಜಿಲ್ಲೆಯ ಈ ಭಾಗದಲ್ಲಿ ಮಳೆಗಾಲ ಬಂತೆಂದರೆ ಸಾಕು ದ್ವೀಪವಾಗಿ ಮಾರ್ಪಡಾಗುತ್ತಿತ್ತು. ಈ ಹಿನ್ನೆಲೆ ಈ ಸಮಸ್ಯೆಯನ್ನು ತಡೆಗಟ್ಟಲು 35.86 ಕೋಟಿ ರೂಪಾಯಿ ವೆಚ್ಚದ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಹಾಗಾದರೆ ಇದರ ಲೋಕಾರ್ಪಣೆ ಯಾವಾಗ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಧಾರ್ಮಿಕ ಕ್ಷೇತ್ರವಾದ ಭಾಗಮಂಡಲದಲ್ಲಿ ಸಂಚಾರ ವ್ಯವಸ್ಥೆಗೆ ಕೈಗೊಳ್ಳಲಾದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಭಾಗಮಂಡಲ ಜಲಾವೃತವಾಗಿ, ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇದೀಗ ಈ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಈ ಸಮಸ್ಯೆ ಇರುವುದಿಲ್ಲ. ಜಿಲ್ಲೆಯ ಏಕೈಕ ಮೇಲ್ಸೇತುವೆ 6 ವರ್ಷಗಳ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಂಡಿರುವ ಹಿನ್ನೆಲೆ ಈ ಭಾಗದ ಜನ ಸಂತಸಗೊಂಡಿದ್ದಾರೆ.

35 86 Crore cost s flyover work complete In Bhagamandala

2018ರಲ್ಲಿ ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇನ್ನು ಪ್ರತಿನಿತ್ಯವೂ ಭಾಗಮಂಡಲಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ. ಅಕ್ಟೋಬರ್‌ನಲ್ಲಿ ತುಲಾ ಸಂಕ್ರಮಣದಿಂದ ಕಿರು ಸಂಕ್ರಮಣದವರೆಗೆ ಇಲ್ಲಿ ಜಾತ್ರೆಯ ಸಂಭ್ರಮ ಇರುತ್ತದೆ. ಆದರೆ, ಮಳೆಗಾಲದಲ್ಲಿ ಮಾತ್ರ ಭಾಗಮಂಡಲದಲ್ಲಿ ಸಂಚಾರ ಸಮಸ್ಯೆ ಉದ್ಭವಿಸಿತ್ತು.

ಬೆಟ್ಟ ಶ್ರೇಣಿಗಳಲ್ಲಿ ಮಳೆಯಾದಾಗ ಜಲಾವೃತ ವಾಗುತ್ತಿತ್ತು. ತ್ರಿವೇಣಿ ಸಂಗಮ ಮುಳುಗಡೆ ಆಯಿತೆಂದರೆ, ತಲಕಾವೇರಿ, ಕೋರಂಗಾಲ ಮತ್ತು ಚೇರಂಗಾಲ ಸೇರಿದಂತೆ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಈ ಹಿನ್ನೆಲೆ ಮೇಲ್ಸೇತುವೆ ಕಾಮಗಾರಿ ಮಾಡಲು ನಿರ್ಧರಿಸಲಾಗಿತ್ತು.

ಇನ್ನು 2018ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಭಾಗಮಂಡಲದಲ್ಲಿಈ ಮೇಲ್ಸೇತುವೆಯನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು, 26.86 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಗ್ರೀನ್‌ ಸಿಗ್ನಲ್‌ ನೀಡಲಾಯಿತು. ತೇಜಸ್‌ ಇನ್ಫ್ರೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು 2019ರ ಜನವರಿಯಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿತು.

ವರ್ಷದೊಳಗೆ ಮುಕ್ತಾಯವಾಗಬೇಕಿದ್ದ ಕಾಮಗಾರಿ ಆರು ವರ್ಷ ತೆಗೆದುಕೊಂಡಿದ್ದು, ಇದರ ನಿರ್ಮಾಣಕ್ಕೆ 35.86 ಕೋಟಿ ವೆಚ್ಚ ತಗುಲಿತು ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮೇಲ್ಸೇತುವೆ ಡಾಂಬರೀಕರಣ ಹಾಗೂ ಲೈಟಿಂಗ್‌ ವ್ಯವಸ್ಥೆಗಳು ಮುಕ್ತಾಯಗೊಂಡಿವೆ.

ಮಳೆಗಾಲದ, ಮಹಾಮಾರಿ ಕೊರೊನಾ ಸಮಸ್ಯೆ, ಸ್ಥಳದ ಸಮಸ್ಯೆ ಹಾಗೂ ಗುತ್ತಿಗೆದಾರರ ಕೆಲಸ ವಿಳಂಬ ಮಾಡಿದ ಹಿನ್ನೆಲೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಹಲವು ಬಾರಿ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗಿತ್ತು. ಮಳೆಗಾಲ ಬಂತೆಂದರೆ ಸಾಕು ಭಾಗಮಂಡಲ ದ್ವೀಪವಾಗಿ ಮಾರ್ಪಾಡಾಗುತ್ತಿತ್ತು. ಇದರಿಂದ ಜನಸಾಮಾನ್ಯರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿತ್ತು. ಇದೀಗ ಈ ಮೇಲ್ಸೇತುವೆ ನಿರ್ಮಾಣದಿಂದ ಭಾಗಮಂಡಲ ಜನತೆಗೆ ಹಾಗೂ ಭಕ್ತರಿಗೆ ತುಂಬಾ ಅನುಕೂಲ ಆದಂತಾಗಿದ್ದು, ಇದು ಶೀಘ್ರದಲ್ಲೇ ಉದ್ಘಾಟನೆ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+