ಯೋಗಿ ಆದಿತ್ಯನಾಥ್ ಕೊರೊನಾ ಸೋಂಕಿನಿಂದ ಗುಣಮುಖ, ವರದಿ ನೆಗೆಟಿವ್
ಲಕ್ನೋ, ಏಪ್ರಿಲ್ 30: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಯೋಗಿ ಆದಿತ್ಯನಾಥ್, 13 ರಿಂದ ಗೃಹ ಬಂಧನದಲ್ಲಿದ್ದರು, ವರದಿ ನೆಗೆಟಿವ್ ಬಂದಿದೆ,
ನಿಮ್ಮ ಶುಭಹಾರೈಕೆ ಹಾಗೂ ವೈದ್ಯರ ಕಾಳಜಿಯಿಂದಾಗಿ, ನಾನು ಕೊರೋನಾವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದೇನೆ, ನನ್ನ ವರದಿ ನೆಗೆಟಿವ್ ಬಂದಿದೆ.. ನಿಮ್ಮ ಸಹಕಾರ ಮತ್ತು ಶುಭಕಾಮನೆಗಳಿಗಾಗಿ ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ," ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
आप सभी की शुभेच्छा और चिकित्सकों की देखरेख से अब मैं कोरोना निगेटिव हो गया हूँ।
— Yogi Adityanath (@myogiadityanath) April 30, 2021
आप सभी के द्वारा मुझे दिए गए सहयोग व शुभकामनाओं के लिए धन्यवाद।
ಎರಡು ವಾರಗಳ ಪ್ರತ್ಯೇಕತೆಯ ಸಮಯದಲ್ಲಿ, ಮುಖ್ಯಮಂತ್ರಿಗಳು ತಮ್ಮ ಕೆಲಸವನ್ನು ವರ್ಚುವಲ್ ಆಗಿ ನಿರ್ವಹಿಸಿದ್ದರು. ದೇಶದಲ್ಲಿ ಇಂದು 3,86,452 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 3498 ಮಂದಿ ಸಾವನ್ನಪ್ಪಿದ್ದಾರೆ, 2,87,540 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು 1,87,62,976 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೂ 1,53,84,418 ಮಂದಿ ಗುಣಮುಖರಾಗಿದ್ದಾರೆ.
2,08,330 ಮಂದಿ ಮೃತಪಟ್ಟಿದ್ದಾರೆ, 31,70,228 ಸಕ್ರಿಯ ಪ್ರಕರಣಗಳಿವೆ, ಇದುವರೆಗೂ ಒಟ್ಟು 15,22,45,179 ಲಸಿಕೆ ವಿತರಿಸಲಾಗಿದೆ. ಒಟ್ಟು 28,63,92,086 ಮಾದರಿಗಳನ್ನು ಏಪ್ರಿಲ್ 29ರವರೆಗೆ ಪರೀಕ್ಷಿಸಲಾಗಿದೆ. ಏಪ್ರಿಲ್ 29ರಂದು ಒಂದೇ ದಿನ, 19,20,107 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.












Click it and Unblock the Notifications