• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಮುನಾ ಎಕ್ಸ್​​ಪ್ರೆಸ್​ ವೇಗೆ ಮಾಜಿ ಪ್ರಧಾನಿ ಹೆಸರಿಡಲು ಮುಂದಾದ ಆದಿತ್ಯನಾಥ್ ಸರ್ಕಾರ!?

|
Google Oneindia Kannada News

ಲಕ್ನೋ, ನವೆಂಬರ್ 23: ಉತ್ತರಪ್ರದೇಶ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ನಗರ, ಪ್ರದೇಶಗಳಿಗೆ ಮರುನಾಮಕರಣ ಮಾಡಿದೆ. ನದಿಗಳ, ಜಿಲ್ಲೆಗಳ ಹೆಸರನ್ನು ಬದಲು ಮಾಡಿದೆ. ಅದೇ ರೀತಿ ಇದೀಗ ಯಮುನಾ ಎಕ್ಸ್​​ಪ್ರೆಸ್​ ವೇ ಸರದಿ.

ಯಮುನಾ ಎಕ್ಸ್​​ಪ್ರೆಸ್​ ವೇ ಮರುನಾಮಕರಣವಾಗುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಯಮುನಾ ಎಕ್ಸ್​ಪ್ರೆಸ್​ ವೇಗೆ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಹೆಸರನ್ನು ನಾಮಕರಣ ಮಾಡಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.

ಇದೇ ನವೆಂಬರ್​ 25ರಂದು ಗೌತಮ ಬುದ್ಧ ನಗರದ ಜೇವಾರ್​​ನಲ್ಲಿ ನಡೆಯಲಿರುವ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಡಿಗಲ್ಲು ಸ್ಥಾಪನೆ ಕಾರ್ಯಕ್ರಮದಲ್ಲಿ ಈ ಘೋಷಣೆಯಾಗಲಿದೆ ಅಂತಾ ತಿಳಿದುಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಉತ್ತರಪ್ರದೇಶದ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್​ ಸೇರಿ ಹಲವು ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಯಮುನಾ ಎಕ್ಸ್​ಪ್ರೆಸ್​ ವೇ ಹೆಸರನ್ನು ಅಟಲ್​ ಬಿಹಾರಿ ವಾಜಪೇಯಿ ಎಕ್ಸ್​ಪ್ರೆಸ್ ವೇ ಎಂದು ಬದಲಿಸಿ, ಅಧಿಕೃತವಾಗಿ ಘೋಷಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಹೆಸರು ಹೇಳಲು ಇಚ್ಛಿಸದ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದ್ದು, ಭಾರತದಲ್ಲಿ ಅತ್ಯಂತ ಪ್ರೀತಿಸಲ್ಪಟ್ಟ ರಾಜಕಾರಣಿ ಅಟಲ್​ ಬಿಹಾರಿ ವಾಜಪೇಯಿ. ಅವರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಾರೆ, ಆದರಿಸುತ್ತಾರೆ. ಮುಂದಿನ ಪೀಳಿಗೆಗೆ ವಾಜಪೇಯಿಯ ಸಾಧನೆ, ಮೌಲ್ಯಗಳನ್ನು ಅರ್ಥ ಮಾಡಿಸುವ ಸದುದ್ದೇಶದಿಂದ ಯಮುನಾ ಎಕ್ಸ್​ಪ್ರೆಸ್ ವೇಗೆ ಅವರ ಹೆಸರು ಇಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ ಎನ್ನಲಾಗಿದೆ.

Yamuna Expressway In Uttar Pradesh Is Likely To Be Renamed After Former PM Atal Bihari Vajpayee

ಉತ್ತರ ಪ್ರದೇಶ ಸಾರ್ವತ್ರಿಕ ವಿಧಾನಸಭೆ ಚುನಾವಣೆ
ಉತ್ತರಪ್ರದೇಶದಲ್ಲಿ 2022ರಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಡಳಿತರೂಢ ಬಿಜೆಪಿಗೆ ಮತ್ತೆ ಅಧಿಕಾರ ಹಿಡಿಯುವ ಸವಾಲು ಎದುರಾಗಿದೆ. ಅದರಲ್ಲೂ ಬಿಜೆಪಿ ಸೇರಿ ಬಹುತೇಕ ಪ್ರತಿಪಕ್ಷಗಳು ಬ್ರಾಹ್ಮಣ ಮತಬ್ಯಾಂಕ್ ಬಹುಮುಖ್ಯವೆಂದು ಪರಿಗಣಿಸಿವೆ.

ಇದೀಗ ಅಟಲ್​ ಬಿಹಾರಿ ವಾಜಪೇಯಿ ಹೆಸರನ್ನು ಯಮುನಾ ಎಕ್ಸ್​ಪ್ರೆಸ್​ ವೇಗೆ ಇಟ್ಟರೆ ಅವರನ್ನು ಪ್ರೀತಿಸುವ ಅಭಿಮಾನಿಗಳು, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣ ಸಮುದಾಯದವರು ತುಂಬ ಖುಷಿಯಾಗುತ್ತಾರೆ ಎಂಬ ಲೆಕ್ಕಾಚಾರವೂ ಇರಬಹುದು. ಇನ್ನೊಂದು ಬದಿ ಯೋಚಿಸುವುದಾರೆ, ಬಿಜೆಪಿಯಲ್ಲಿ ವಾಜಪೇಯಿ ಅವರಿಗೆ ಅಪಾರ ಗೌರವ ಇದೆ. ಅವರ ಹೆಸರನ್ನು ಈಗಾಗಲೇ ಅನೇಕ ಯೋಜನೆಗಳಿಗೆ ಇಟ್ಟಿದೆ.

   ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
   English summary
   The Uttar Pradesh government has decided to name the former Prime Minister Atal Bihari Vajpayee to the Yamuna Expressway.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X