ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸದ ಪತಿ:ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ!

ಆಗ್ರಾ, ಮಾರ್ಚ್ 2: ತಾಯಿ ಅಂದ್ರೇನೇ ದೇವತಾ ಸ್ವರೂಪಿ, ಕರುಣಾಮಯಿ, ಮಮತಾಮಯಿ. ಮಕ್ಕಳಿಗಾಗಿ ಏನು ಬೇಕಾದರೂ ಮಾಡುವ ತ್ಯಾಗಮಯಿ ಹೃದಯ ತಾಯಿಯಾದವಳಿಗೆ ಇದ್ದೇ ಇರುತ್ತೆ. ಆದ್ರೆ, ಇಲ್ಲೋರ್ವ ಕ್ರೂರ ತಾಯಿ ತಾನು ಹೆತ್ತ ಹಸುಗೂಸನ್ನೇ ಕೊಂದಿದ್ದಾಳೆ.

Recommended Video

      Tejasvi Surya Exclusive interview part 2 | Tejasvi Surya | Oneindia Kannada

      ಹೋಳಿ ಹಬ್ಬಕ್ಕೆ ಪತಿ ಹೊಸ ಬಟ್ಟೆ ಕೊಡಸಲಿಲ್ಲ ಎಂಬ ಕೋಪದಿಂದ ಆರು ತಿಂಗಳ ತನ್ನ ಮಗುವಿನ ಮೇಲೆ ತಾಯಿಯಾದವಳು ಕೈ ಮಾಡಿದ್ದಾಳೆ. ತಾಯಿ ಕೊಟ್ಟ ಏಟಿನಿಂದ ಏನೂ ಅರಿಯದ ಪುಟ್ಟ ಕೂಸು ಸ್ಥಳದಲ್ಲೇ ಸಾವನ್ನಪ್ಪಿದೆ.

      ಉತ್ತರ ಪ್ರದೇಶದಲ್ಲಿರುವ ಆಲಿಘರ್ ನ ರಾಮ್ ಪುರ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪಾಪಿ ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದೆ.

      ಘಟನೆಯ ಹಿನ್ನಲೆ

      ಘಟನೆಯ ಹಿನ್ನಲೆ

      ಹೋಳಿ ಹಬ್ಬಕ್ಕಾಗಿ, ಹೊಸ ಬಟ್ಟೆ ಕೊಂಡುಕೊಳ್ಳುವ ಸಲುವಾಗಿ ಶಾಪಿಂಗ್ ಗೆ ಹೋಗಲು ಪತಿ ರಾಹುಲ್ ಗೆ ಪತ್ನಿ ಪಿಂಕಿ ಶರ್ಮಾ ಹೇಳಿದ್ದಾಳೆ. ಆದ್ರೆ, ಆರೋಗ್ಯ ಸರಿಯಿಲ್ಲದ ಕಾರಣ, ಶಾಪಿಂಗ್ ಗೆ ಹೋಗಲು ಪತಿ ರಾಹುಲ್ ನಿರಾಕರಿಸಿದ್ದಾನೆ.

      ಜಗಳ ಶುರು

      ಜಗಳ ಶುರು

      ಶಾಪಿಂಗ್ ಹೋಗದ ಕಾರಣ, ಹೋಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಪಿಂಕಿ ಶರ್ಮಾ ಮತ್ತು ರಾಹುಲ್ ಮಧ್ಯೆ ಜಗಳ, ವಾಗ್ವಾದ ತಾರಕಕ್ಕೆ ಏರಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪಿಂಕಿ ಶರ್ಮಾ ತನ್ನ 6 ತಿಂಗಳ ಹೆಣ್ಣು ಮಗುವಿಗೆ (ಸೋನಿ) ಹೊಡೆದಿದ್ದಾಳೆ.

      ಸ್ಥಳದಲ್ಲೇ ಸಾವನ್ನಪ್ಪಿದ ಮಗು

      ಸ್ಥಳದಲ್ಲೇ ಸಾವನ್ನಪ್ಪಿದ ಮಗು

      ಪತಿಯ ಮೇಲಿನ ಸಿಟನ್ನು ಮಗುವಿನ ಮೇಲೆ ಪಿಂಕಿ ಶರ್ಮಾ ತೋರಿಸಿದ್ದಾಳೆ. ಕಂದಮ್ಮನಿಗೆ ಬಲವಾಗಿ ಥಳಿಸಿದ್ರಿಂದ, ಗಂಭೀರವಾಗಿ ಗಾಯಗೊಂಡ ಆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. 25 ವರ್ಷದ ಪಿಂಕಿ ಶರ್ಮಾ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

      ಕೋಪಿಷ್ಠೆ ಪಿಂಕಿ ಶರ್ಮಾ

      ಕೋಪಿಷ್ಠೆ ಪಿಂಕಿ ಶರ್ಮಾ

      ಪಿಂಕಿ ಶರ್ಮಾ ಮತ್ತು ರಾಹುಲ್ ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದರು. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಹುಲ್ ಮತ್ತು ಪತ್ನಿ ಪಿಂಕಿ ಶರ್ಮಾ ನಡುವೆ ಆಗಾಗ ಜಗಳ ಆಗುತ್ತಲೇ ಇತ್ತಂತೆ. ಪಿಂಕಿ ಶರ್ಮಾಗೆ ಸದಾ ಮೂಗಿನ ತುದಿಯಲ್ಲೇ ಕೋಪ. ಆ ಕೋಪದಿಂದಲೇ ಆಕೆಯ ಮಗು ಜೀವ ಕಳೆದುಕೊಂಡಂತಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+